ಕರ್ನಾಟಕದ ಪ್ರಮುಖ ಸುದ್ದಿ ವೆಬ್‌ಸೈಟ್ ನ್ಯೂಸ್ 18 ಕನ್ನಡದಲ್ಲಿ ಅದ್ಭುತ ಅವಕಾಶಗಳು ನಿಮಗಾಗಿಯೇ ಕಾಯುತ್ತಿವೆ! ಕನ್ನಡ, ಇಂಗ್ಲೀಷ್ ಸೇರಿದಂತೆ ಒಟ್ಟು 14 ಭಾರತೀಯ ಭಾಷೆಗಳಲ್ಲಿ ವೆಬ್‌ಸೈಟ್‌ಗಳನ್ನು ಹೊಂದಿರುವ Network 18 ಸಂಸ್ಥೆಯ ಬೃಹತ್ ಮಾಧ್ಯಮ ಸಮೂಹವನ್ನು ನೀವೂ ಸೇರಬಹುದಾಗಿದೆ. ಅಂದಹಾಗೆ ನೀವು ಡಿಜಿಟಲ್ ಪತ್ರಿಕೋದ್ಯಮದಲ್ಲಿ (Digital Journalism) ಮಿಂಚಲು ಬಯಸುತ್ತಿದ್ದೀರಾ? ನಿಮ್ಮ ಊರಲ್ಲೇ ಇದ್ದುಕೊಂಡು ನಿಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ (Local News) ಧ್ವನಿಯಾಗಲು ಬಯಸುತ್ತೀರಾ? ಈ ಅವಕಾಶ ನಿಮ್ಮ ಊರಿಗೆ ನಿಮ್ಮನ್ನು ಸ್ಟಾರ್ ಮಾಡಲಿದೆ. ಬನ್ನಿ, ನಿಮಗಾಗಿಯೇ ನ್ಯೂಸ್ 18 ಕನ್ನಡದ Local 18 ಗೆ ಸೇರಲು ಬಾಗಿಲು ತೆರೆದುಕೊಂಡಿದೆ.
ಸಂಸ್ಥೆಯ ಹೆಸರು | ನ್ಯೂಸ್ 18 ಕನ್ನಡ |
ವಯೋಮಿತಿ | 30 ವರ್ಷದ ಒಳಗೆ |
ವಿದ್ಯಾರ್ಹತೆ | ಪದವಿ ಪೂರ್ಣಗೊಳಿಸಿರಬೇಕು, ಆದರೆ ಪತ್ರಿಕೋದ್ಯಮವನ್ನೇ ಓದಿರಬೇಕಂತಿಲ್ಲ |
ಕೆಲಸದ ಸ್ಥಳ | ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ |
ಈಮೇಲ್ ವಿಳಾಸ | News18jobs@gmail.com |
ಅರ್ಜಿ ಸಲ್ಲಿಸಲು ಅರ್ಹತೆಯೇನು?
ಕನಿಷ್ಠ ಪದವಿ ಪೂರ್ಣಗೊಳಿಸಿರಬೇಕು. ಆದರೆ ಪತ್ರಿಕೋದ್ಯಮ ಪದವಿಯೇ ಆಗಬೇಕು ಅಂತೇನಿಲ್ಲ.
ವಯೋಮಿತಿ
30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
ಕೆಲಸದ ಸ್ಥಳ
ನೀವು ವಾಸಿಸುವ ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಿ. ನಿಮ್ಮ ನೆರೆಯ ಜಿಲ್ಲೆ ಅಥವಾ ಬೇರೆ ಜಿಲ್ಲೆಗಾಗಿ ಅರ್ಜಿ ಸಲ್ಲಿಸಬೇಡಿ.
ಎಲ್ಲೆಲ್ಲಿ ಇದೆ ಉದ್ಯೋಗಾವಕಾಶ?
ಅಗತ್ಯ ಕೌಶಲ: ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಮಾಧ್ಯಮಗಳ ಕುರಿತು ಮಾಹಿತಿ ಇರಬೇಕು, ಪರಿಣಿತಿ ಇದ್ದರೆ ಇನ್ನೂ ಚೆನ್ನ.
ಇದನ್ನೂ ಓದಿ: Job Opportunity: ನಬಾರ್ಡ್ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ- ಈಗಲೇ ಅರ್ಜಿ ಹಾಕಿ
ವಿಡಿಯೋ ಕಳಿಸಬೇಕಾದ ಮೇಲ್ ಐಡಿ: News18jobs@gmail.com
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ