Jobs In Mysuru: ಕನ್ನಡ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿ ಆಹ್ವಾನ! ಮೈಸೂರಲ್ಲೇ ಕೆಲಸ

ಸಂಪನ್ಮೂಲ ವ್ಯಕ್ತಿಗಳಿಗೆ ಕೆಲಸದ ದಿನಗಳ ಆಧಾರದ ಮೇಲೆ ಗೌರವಧನ ನಿಗದಿಪಡಿಸಲಾಗಿದೆ. ಪ್ರತಿ ದಿನಕ್ಕೆ ರೂ. 1500 ರಂತೆ ತಿಂಗಳಿಗೆ ಗರಿಷ್ಠ ರೂ 39,000 ವರೆಗೆ ನೀಡಲಾಗುತ್ತದೆ. 

ಕನ್ನಡ ಕಲಿತರೆ ಇದೆ ಕೆಲಸ

ಕನ್ನಡ ಕಲಿತರೆ ಇದೆ ಕೆಲಸ

 • Share this:
  ಮೈಸೂರು: ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಭಾಷಾ ಕೇಂದ್ರವು (Central Institute Of Indian Languages Mysuru ) ಕನ್ನಡ ಭಾಷೆಯನ್ನು ಕಲಿಸಲು ತಾತ್ಕಾಲಿಕವಾಗಿ ಬೋಧನೆಗೋಸ್ಕರ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಈ ಕೇಂದ್ರವು ಕನ್ನಡ ಸಂಪನ್ಮೂಲ ವ್ಯಕ್ತಿಗಳಿಗಾಗಿ (Kannada Resource Person) ಅರ್ಜಿ ಆಹ್ವಾನಿಸಿದೆ.  ಕನ್ನಡ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಅರ್ಹತೆಗಳು/ ಮಾನದಂಡಗಳು ಈ ಕೆಳಗಿನಂತಿವೆ. ನೀವೂ ಈ ಹುದ್ದೆಗೆ ಅರ್ಜಿ ಹಾಕಬಹುದೇ? ಸಂಬಳ ಎಷ್ಟಿದೆ? ಕೆಲಸ ಹೇಗಿರುತ್ತೆ? ಎಲ್ಲ ವಿವರಗಳು ನಿಮಗಾಗಿಯೇ ಇಲ್ಲಿವೆ.  ಹುದ್ದೆಯ ಹೆಸರುಕನ್ನಡ ಸಂಪನ್ಮೂಲ ವ್ಯಕ್ತಿ
  ಸಂಸ್ಥೆಯ ಹೆಸರುಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ
  ಶೈಕ್ಷಣಿಕ ಅರ್ಹತೆಕನ್ನಡ  ಭಾಷೆ ಅಥವಾ ಸಾಹಿತ್ಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಅಥವಾ ಭಾಷಾಶಾಸ್ತ್ರದಲ್ಲಿ MA ಯುಜಿಸಿ ನೆಟ್/ಜೆಆರ್‌ಎಫ್
  ಸಂಬಳ ಎಷ್ಟಿರುತ್ತೆ?ಗರಿಷ್ಠ 39,000
  ಅರ್ಜಿ ಸಲ್ಲಿಸೋದು ಹೇಗೆ?ಇಲ್ಲಿ ಕ್ಲಿಕ್ ಮಾಡಿ
  ಸಂಪರ್ಕಕ್ಕಾಗಿ

  ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ

  ಮಾನಸ ಗಂಗೋತ್ರಿ, ಮೈಸೂರು,

  ಕರ್ನಾಟಕ, 570006

  ದೂರವಾಣಿ ಸಂಖ್ಯೆ: 8212345000
  ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ26 ಜುಲೈ, 2022

  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ   ಭಾಷೆ ಅಥವಾ ಸಾಹಿತ್ಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಅಥವಾ ಭಾಷಾಶಾಸ್ತ್ರದಲ್ಲಿ MA ಯುಜಿಸಿ ನೆಟ್/ಜೆಆರ್‌ಎಫ್ ಅರ್ಹತೆ ಹೊಂದಿರಬೇಕು. ಅಥವಾ ಕಾಲೇಜುಗಳು/ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಕ್ಕಾಗಿ ಸಂಬಂಧಿಸಿದ ಸಮಾನವಾದ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ ಹೈಯರ್ ಸೆಕೆಂಡರಿ ಅಥವಾ ಅದಕ್ಕಿಂತ ಮೇಲ್ಪಟ್ಟವರೆಗೆ ಸಂಬಂಧಪಟ್ಟ ಭಾಷೆಯನ್ನು ಅಧ್ಯಯನ ಮಾಡಿದ ಸಾಬೀತಾದ/ಪರಿಶೀಲಿಸಬಹುದಾದ ಶೈಕ್ಷಣಿಕ ಅರ್ಹತೆಯೊಂದಿಗೆ ಅಥವಾ ಸಂಬಂಧಪಟ್ಟ ಭಾಷೆ/ಸಾಹಿತ್ಯ ಅಥವಾ ಭಾಷಾಶಾಸ್ತ್ರದಲ್ಲಿ ಪಿಎಚ್‌ಡಿ ಹೊಂದಿರಬೇಕಿದೆ.

  ಕನಿಷ್ಠ 2 ಭಾಷೆಗಳಲ್ಲಿ ಜ್ಞಾನ ಇರಬೇಕು
  ಕನಿಷ್ಠ ಎರಡು ಭಾರತೀಯ ಭಾಷೆಗಳಲ್ಲಿ ಪ್ರದರ್ಶಿಸಬಹುದಾದ ಜ್ಞಾನ ಮತ್ತು ಕೌಶಲ್ಯಗಳನ್ನು ಅಭ್ಯರ್ಥಿಗಳು ಹೊಂದಿರಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಎರಡನೇ ಭಾಷೆಯಾಗಿ ಕನ್ನಡವನ್ನು ಕಲಿಸುವ, ಬೋಧನಾ ಸಾಮಗ್ರಿಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಇರುತ್ತದೆ. 

  ಕನಿಷ್ಠ ಎರಡು ಸೆಮಿಸ್ಟರ್‌ಗಳು/ಒಂದು ವರ್ಷಕ್ಕೆ ಸಂಬಂಧಿಸಿದ ಭಾರತೀಯ ಭಾಷೆಯನ್ನು ಡಿಪ್ಲೊಮಾ/ಅಂಡರ್ ಗ್ರಾಜುಯೇಟ್/ಸ್ನಾತಕೋತ್ತರ ಮಟ್ಟದಲ್ಲಿ ಕಲಿಸುವ ಅನುಭ ಪಡೆದಿರಬೇಕು.

  'ಇ' ಪರಿಣಿತಿಯೂ ಇರಬೇಕು
  ಭಾಷಾಶಾಸ್ತ್ರದಲ್ಲಿ ಶೈಕ್ಷಣಿಕ/ವೃತ್ತಿಪರ ಹಿನ್ನೆಲೆ ಹೊಂದಿರಬೇಕು. ಆನ್‌ಲೈನ್ ಬೋಧನೆಯಲ್ಲಿ ಬಳಸುವ ಪರಿಕರಗಳು/ತಂತ್ರಗಳು/ವಿಧಾನಗಳು/ಪ್ಲಾಟ್‌ಫಾರ್ಮ್‌ಗಳ ಬಳಕೆ ಬಗ್ಗೆ ಅರ್ಹ ತಿಳಿವಳಿಕೆ ಹೊಂದಿರಬೇಕು.

  ಸಂಬಳ ಎಷ್ಟಿರುತ್ತೆ?
  ಸಂಪನ್ಮೂಲ ವ್ಯಕ್ತಿಗಳಿಗೆ ಕೆಲಸದ ದಿನಗಳ ಆಧಾರದ ಮೇಲೆ ಗೌರವಧನ ನಿಗದಿಪಡಿಸಲಾಗಿದೆ. ಪ್ರತಿ ದಿನಕ್ಕೆ ರೂ. 1500 ರಂತೆ ತಿಂಗಳಿಗೆ ಗರಿಷ್ಠ ರೂ 39,000 ವರೆಗೆ ನೀಡಲಾಗುತ್ತದೆ. 

  ಇದನ್ನೂ ಓದಿ: SSC recruitment 2022: ಜೂನಿಯರ್-ಸೀನಿಯರ್ ಹಿಂದಿ ಭಾಷಾಂತರಕಾರರ ಹುದ್ದೆಗೆ ಅರ್ಜಿ ಆಹ್ವಾನ

  ಈ ಗೌರವಧನವನ್ನು ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು ಸಾಮಾನ್ಯವಾಗಿ ವಾರದಲ್ಲಿ ಎರಡು ದಿನ ರಜೆ ಇರುತ್ತದೆ. ಆದರೆ ಸಕ್ಷಮ ಅಧಿಕಾರಿಗಳ ವಿವೇಚನೆಯ ಮೇರೆಗೆ ವಾರಕ್ಕೆ ಐದು ದಿನಗಳಿಗಿಂತ ಹೆಚ್ಚು ಅಥವಾ ಕಡಿಮೆ ಕೆಲಸ ಬರಬಹುದಾದ ಸಾಧ್ಯತೆಯಿದೆ. ಹಾಗಾಗಿ ಇದರ ಆಧಾರದ ಮೇಲೆ ಗೌಋವಧನದ ಮೊತ್ತ ಕಡಿಮೆ ಅಥವಾ ಹೆಚ್ಚಾಗಬಹುದಾಗಿದೆ.

  ವರ್ಷದಲ್ಲಿ 10 ತಿಂಗಳು ಕೆಲಸ
  ಸಂಪನ್ಮೂಲ ವ್ಯಕ್ತಿಗಳು ಸಾಮಾನ್ಯವಾಗಿ ವರ್ಷದಲ್ಲಿ 10 ತಿಂಗಳ ಅವಧಿಗೆ ಕೆಲಸ ಮಾಡಬೇಕಾಗಿರುತ್ತದೆ. ಆದರೆ ಕೇಂದ್ರ/ಕಾರ್ಯಕ್ರಮದ ಅಗತ್ಯಕ್ಕೆ ಅನುಗುಣವಾಗಿ ಸಕ್ಷಮ ಅಧಿಕಾರಿಗಳ ವಿವೇಚನೆಯಡಿ ಈ ಅವಧಿ ಕಡಿಮೆ ಅಥವಾ ಹೆಚ್ಚಾಗಬಹುದು. ಅಂದಹಾಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 26 ಜುಲೈ, 2022.

  ಇದನ್ನೂ ಓದಿ: BEL Recruitment: ಸೀನಿಯರ್ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ

  ನಿಯಮಗಳೇನು?
  ಸಂಪನ್ಮೂಲ ವ್ಯಕ್ತಿಗಳು ಕೇಂದ್ರ ಅಥವಾ ಸಂಸ್ಥೆಯೊಂದಿಗೆ ಪೂರ್ಣ ಸಮಯದ ಆಧಾರದ ಮೇಲೆ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದ ತೊಡಗಿಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಗಳು ಬೇರೊಂದು ಬೋಧನೆ/ವೃತ್ತಿಪರ/ಯೋಜನೆ ಅಥವಾ ಇನ್ನಾವುದೇ ಕೆಲಸದ ನಿಯೋಜನೆಯನ್ನು ಬೇರೆಲ್ಲಿಯೂ ತೆಗೆದುಕೊಳ್ಳಲು ಅನುಮತಿ ಇರುವುದಿಲ್ಲ. ಅಗತ್ಯವಿದ್ದರೆ, ಸಮರ್ಥ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಯನ್ನು ಬೇರೆ ಕೇಂದ್ರ/ಸಂಸ್ಥೆಗೆ ಸ್ಥಳಾಂತರಿಸಬಹುದಾಗಿದೆ. ಅಭ್ಯರ್ಥಿಯು ಸೂಕ್ತವೆಂದು ಕಂಡುಬಂದಲ್ಲಿ ಸಕ್ಷಮ ಪ್ರಾಧಿಕಾರವು ಅರ್ಹತೆ/ಮಾನದಂಡಗಳನ್ನು ಸಡಿಲಿಸುವ ಸಾಧ್ಯತೆಯೂ ಇದೆ. 
  Published by:guruganesh bhat
  First published: