Jobs in Gym: ಜಿಮ್​ನಲ್ಲಿ ಫ್ರೀ ವರ್ಕೌಟ್ ಜೊತೆ ಕೆಲಸ ಮಾಡಿ, ಕೈ ತುಂಬಾ ಕಾಸೂ ಮಾಡಿ! ಈಗಲೇ ರೆಸ್ಯೂಮ್​ ಕಳ್ಸಿ

ನೀವೂ ಕೂಡ ಕೆಲಸ (Job) ಹುಡುಕುತ್ತಿದ್ದೀರಾ? ಹಾಗಿದ್ದರೆ ಪ್ರತಿದಿನ ನ್ಯೂಸ್​ 18 ಕನ್ನಡ (News 18 Kannada) ನಿಮಗಾಗಿ ಎಂದೇ ನೂರಾರು ಜಾಬ್​ ಆಫರ್​ (Job Offers) ಗಳನ್ನು ಹೊತ್ತು ತರುತ್ತಿದೆ. ಇಂದೂ ಕೂಡ ಒಂದೊಳ್ಳೆ ಜಾಬ್ ಆಫರ್​ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಕೆಲಸ ಮಾಡಲು ಡಿಗ್ರಿ (Degree) ಆಗಿರಲೇಬೇಕು ಅಂತ ಏನಿಲ್ಲ.

ಮಲ್ಟಿಫಿಟ್​

ಮಲ್ಟಿಫಿಟ್​

  • Share this:
Jobs in Gym: ಗಾಳಿ (Air) ಗಿಂತ ವೇಗವಾಗಿ ಓಡುತ್ತಿರುವ ಈ ಪ್ರಪಂಚ (World) ದಲ್ಲಿ ಎಲ್ಲಾರು ದುಡಿಯುವುದು ಹೊಟ್ಟೆಗಾಗಿ, ಮೂರು ಹೊತ್ತಿನ ಊಟಕ್ಕಾಗಿ. ಕೆಲವರು ಓದಿನಲ್ಲಿ ಮುಂದಿದ್ದು, ಒಳ್ಳೆ ಕೆಲಸದಲ್ಲಿ ಸೆಟಲ್ (Settle) ಆಗಿರುತ್ತಾರೆ. ಇನ್ನೂ ಕೆಲವರಿಗೆ ಓದಿಗಿಂತ ಬೇರೆ ಚಟುವಟಿಕೆಯಲ್ಲಿ ಗಮನ ಹೆಚ್ಚಿದ್ದು, ಓದು ಮುಗಿದ ಬಳಿಕ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ. ನೀವೂ ಕೂಡ ಕೆಲಸ (Job) ಹುಡುಕುತ್ತಿದ್ದೀರಾ? ಹಾಗಿದ್ದರೆ ಪ್ರತಿದಿನ ನ್ಯೂಸ್​ 18 ಕನ್ನಡ (News 18 Kannada) ನಿಮಗಾಗಿ ಎಂದೇ ನೂರಾರು ಜಾಬ್​ ಆಫರ್​ (Job Offers) ಗಳನ್ನು ಹೊತ್ತು ತರುತ್ತಿದೆ. ಇಂದೂ ಕೂಡ ಒಂದೊಳ್ಳೆ ಜಾಬ್ ಆಫರ್​ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಕೆಲಸ ಮಾಡಲು ಡಿಗ್ರಿ (Degree) ಆಗಿರಲೇಬೇಕು ಅಂತ ಏನಿಲ್ಲ. ಚೆನ್ನಾಗಿ ಕನ್ನಡ (Kannada) , ಇಂಗ್ಲಿಷ್ (English) , ಹಿಂದಿ (Hindi) ಮಾತನಾಡುವುದಕ್ಕೆ ಬಂದರೆ ಸಾಕು. ಈ ಕೆಲಸ ಮಾಡುತ್ತಾ ನೀವು ತಿಂಗಳಿಗೆ 25 ರಿಂದ 30 ಸಾವಿರ ರೂಪಾಯಿ ಗಳಿಸಬಹುದು.

ಜಿಮ್​ ಬಗ್ಗೆ ಗೊತ್ತಿದ್ರೆ ಈಗಲೇ ರೆಸ್ಯೂಮ್​ ಕಳುಹಿಸಿ!

ಈಗೆಲ್ಲಾ ಜಿಮ್​ಗೆ ಹೋಗಿ ವರ್ಕೌಟ್​ ಮಾಡುವವರೇ ಹೆಚ್ಚು. ನಿಮಗೂ ಜಿಮ್ ಹಾಗೂ ವರ್ಕೌಟ್​ ಬಗ್ಗೆ ಗೊತ್ತಿದ್ಯಾ? ಹಾಗಿದ್ದರೆ ಈ ಕೆಲಸಕ್ಕೆ ನೀವು ರೆಸ್ಯೂಮ್​ ಕಳಿಸಬಹುದು. ದುಬೈ ಮೂಲದ ಮಲ್ಟಿಫಿಟ್​ ಹೆಸರಿನ ಜಿಮ್​ನಲ್ಲಿ ಕೆಲಸ ಖಾಲಿ ಇದೆ. ಮಲ್ಟಿಫಿಟ್​ ಬೆಂಗಳೂರಿನಲ್ಲಿ ನಾಲ್ಕು ಬ್ರ್ಯಾಂಚ್​ಗಳನ್ನು ಹೊಂದಿದೆ. ಹೆಣ್ಣೂರು, ಎಚ್​ಆರ್​​ಬಿಆರ್​ ಲೇಔಟ್​, ಹಲ್ಸೂರು, ಇಂದಿರಾನಗರದಲ್ಲಿ ಇವೆ. ಇದರಲ್ಲಿ ಮೂರು ಬ್ರ್ಯಾಂಚ್​ಗಳಿಗೆ ವಿವಿಧ ಹುದ್ದೆಗೆ ಕೆಲಸಕ್ಕೆ ಬೇಕಾಗಿದ್ದಾರೆ. ಮೂರು ರೀತಿಯ ಹುದ್ದೆಗಳು ಖಾಲಿ ಇವೆ.



































ಹುದ್ದೆಹುದ್ದೆ ವಿವರ
ಸಂಸ್ಥೆಮಲ್ಟಿಫಿಟ್​ (Multifit Expansion and Franchising Pvt Ltd)
ಹುದ್ದೆಯ ಹೆಸರುಫ್ರಂಟ್ ಡೆಸ್ಕ್
ಕೆಲಸದ ಸ್ಥಳಹಲಸೂರು, ಎಚ್​​ಆರ್​ಬಿಆರ್​​, ಹೆಣ್ಣೂರು
ಸಂಬಳ13-15 ಸಾವಿರ, ಇನ್ಸೇನ್​ಟೀವ್​ 15-20 ಸಾವಿರ
ಖಾಲಿ ಇರುವ ಹುದ್ದೆಗಳ ಸಂಖ್ಯೆ5
ಅರ್ಹತೆಪಿಯು ಪಾಸಾಗಿದ್ದರೆ ಸಾಕು
ಭಾಷೆಇಂಗ್ಲಿಷ್, ಹಿಂದಿ ಮಾತನಾಡಲು ಬರಬೇಕು

ಇದನ್ನೂ ಓದಿ: ಕೊಪ್ಪಳದಲ್ಲಿದೆ 72 ಅಂಗನವಾಡಿ ಹುದ್ದೆ; ಇಲ್ಲಿದೆ ನೇಮಕಾತಿ ವಿವರ

ಮಲ್ಟಿ ಫಿಟ್ ಜಿಮ್​ ಹಲಸೂರು




































ಹುದ್ದೆಹುದ್ದೆ ವಿವರ
ಸಂಸ್ಥೆಮಲ್ಟಿಫಿಟ್​ (Multifit Expansion and Franchising Pvt Ltd)
ಹುದ್ದೆಯ ಹೆಸರುಪರ್ಸೆನಲ್​ ಟ್ರೈನರ್​
ಕೆಲಸದ ಸ್ಥಳಹಲಸೂರು, ಎಚ್​​ಆರ್​ಬಿಆರ್​​, ಹೆಣ್ಣೂರು
ಸಂಬಳ18-22 ಸಾವಿರ , ಇನ್ಸೇನ್​ಟೀವ್​ 40-60 ಸಾವಿರ
ಖಾಲಿ ಇರುವ ಹುದ್ದೆಗಳ ಸಂಖ್ಯೆ10
ಅನುಭವ2 ವರ್ಷಗಳು
ಅರ್ಹತೆಜಿಮ್​ಗೆ ಸಂಬಂಧಿಸಿದ ಸರ್ಟಿಫಿಕೇಶನ್ ಮಾಡಿರುವುದು ಕಡ್ಡಾಯ

ಇದನ್ನೂ ಓದಿ: ಬೆಂಗಳೂರಿನ ದಾಸರಹಳ್ಳಿಯ ಶಾಲೆಯಲ್ಲಿದೆ ಶಿಕ್ಷಕರ ಹುದ್ದೆ; ಇಲ್ಲಿದೆ ಸಂಪೂರ್ಣ ಮಾಹಿತಿ







































ಹುದ್ದೆಹುದ್ದೆ ವಿವರ 
ಸಂಸ್ಥೆಮಲ್ಟಿಫಿಟ್​ (Multifit Expansion and Franchising Pvt Ltd)
ಹುದ್ದೆಯ ಹೆಸರುಹೆಡ್​ ಟ್ರೈನರ್​
ಕೆಲಸದ ಸ್ಥಳಹಲಸೂರು, ಎಚ್​​ಆರ್​ಬಿಆರ್​​, ಹೆಣ್ಣೂರು
ಸಂಬಳ20-25 ಸಾವಿರ, ಇನ್ಸೇನ್​ಟೀವ್ 50-1 ಲಕ್ಷದವರೆಗೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ1
ಅನುಭವ7 ವರ್ಷಗಳು
ಅರ್ಹತೆ(ACSM, ACE, EREPS, K11 and Workshops)
ವಿಶೇಷ ಸೂಚನೆಒಂದು ವರ್ಷ ಅಗ್ರಿಮೆಂಟ್ ಮಾಡಿಸುವುದು ಕಡ್ಡಾಯ

ರೆಸ್ಯೂಮ್​ ಕಳುಹಿಸಬೇಕಾದ ಇ-ಮೇಲ್​ ಐಡಿ:  Cm.ulsoor@multifit.co.in

ಮಲ್ಟಿಫಿಟ್​ ಫೋನ್​ ನಂಬರ್​: 7349315460

ಮೇಲೆ ಹೇಳಿರುವ ಅರ್ಹತೆಗಳು ನಿಮ್ಮ ಬಳಿ ಇದ್ದರೆ ಈ ಕೂಡಲೇ ನಿಮ್ಮ ರೆಸ್ಯೂಮ್​ ಕಳುಹಿಸಿಕೊಡಿ.
Published by:Vasudeva M
First published: