Jobs in Flipkart: ಫ್ಲಿಪ್​ಕಾರ್ಟ್​ನಲ್ಲಿ Part Time ಕೆಲಸಗಳು ಖಾಲಿ ಇವೆ, ನೀವೂ ಟ್ರೈ ಮಾಡಬಹುದು ನೋಡಿ..!

ಗ್ರಾಹಕ ಸೇವೆ, ವಿತರಣೆ, ಸ್ಥಾಪನೆ, ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳು ಹಾಗೂ ಕೈಲಿರುವ ಸಾಧನಗಳು, ಪಿಒಎಸ್ ಯಂತ್ರಗಳು, ಸ್ಕ್ಯಾನರ್ ಗಳು, ವಿವಿಧ ಮೊಬೈಲ್ ಅಪ್ಲಿಕೇಷನ್ ಗಳು ಮತ್ತು ಇಆರ್ ಪಿಗಳ ಬಳಕೆಯ ತರಬೇತಿಯನ್ನು ನೀಡಲಾಗುತ್ತದೆ.

ಫ್ಲಿಪ್​ಕಾರ್ಟ್

ಫ್ಲಿಪ್​ಕಾರ್ಟ್

 • Share this:
  ಬೆಂಗಳೂರು(ಸೆ.23): ನೀವು ಪಾರ್ಟ್​ ಟೈಂ ಕೆಲಸ ಹುಡುಕುತ್ತಿದ್ದರೆ, ಫ್ಲಿಪ್​ಕಾರ್ಟ್​ ನಿಮಗೊಂದು ಸುವರ್ಣಾವಕಾಶ ನೀಡಿದೆ. ಅರೆ ಉದ್ಯೋಗಿಗಗಳಾಗಿ ಇ-ಕಾಮರ್ಸ್​ ಕಂಪನಿ ಫ್ಲಿಪ್​ಕಾರ್ಟ್​​ನಲ್ಲಿ ಕೆಲಸ ಮಾಡಬಹುದು. ಸೇವಾ ಏಜೆನ್ಸಿಗಳಿಗೆ ಮತ್ತು ಟೆಕ್ನಿಶಿಯನ್ ಗಳಿಗೆ ಸುಲಭವಾಗಿ ಆದಾಯ ಗಳಿಕೆಯ ಅವಕಾಶಗಳನ್ನು ಕಲ್ಪಿಸುವ `ಫ್ಲಿಪ್ ಕಾರ್ಟ್ ಎಕ್ಸ್ಟ್ರಾ’ (Flipkart Extra Plan)ಮಾದರಿಯ ಪ್ರತ್ಯೇಕ ಮಾರ್ಕೆಟ್ ಪ್ಲೇಸ್ ಅನ್ನು ಪರಿಚಯಿಸಿದೆ. ಈ ಹೊಸ ಪ್ಲಾಟ್ ಫಾರ್ಮ್(New Platform) ಫ್ಲಿಪ್ ಕಾರ್ಟ್ ನ ಪೂರೈಕೆ ಜಾಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ವ್ಯಕ್ತಿಗಳಿಗೆ ಅರೆಕಾಲಿಕ ಅವಕಾಶಗಳನ್ನು ಸೃಷ್ಟಿಸುವ ಸಂದರ್ಭದಲ್ಲಿ ದೇಶಾದ್ಯಂತ ಗ್ರಾಹಕರಿಗೆ ಸರಕು ಮತ್ತು ಸೇವೆಯ ತಡೆರಹಿತ ಮತ್ತು ವೇಗದ ವಿತರಣೆಯನ್ನು ಖಚಿತಪಡಿಸುತ್ತದೆ.

  ಈ `ಫ್ಲಿಪ್ ಕಾರ್ಟ್ ಎಕ್ಸ್ಟ್ರಾ’ ಆ್ಯಪ್ ಗೂಗಲ್ ಪ್ಲೇಸ್ಟೋರ್(Google Play store) ನಲ್ಲಿ ಲಭ್ಯವಿದೆ. ಆಸಕ್ತಿ ಇರುವ ವ್ಯಕ್ತಿಗಳಿಗೆ ಫ್ಲಿಪ್ ಕಾರ್ಟ್ ಸುಲಭವಾಗಿ ಮತ್ತು ತಡೆರಹಿತವಾಗಿ ಆನ್ ಬೋರ್ಡಿಂಗ್ ಅನುಭವವನ್ನು ನೀಡಲಿದೆ. ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು ಬ್ಯಾಕ್ ಗ್ರೌಂಡ್ ಪರಿಶೀಲನೆಗೆ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ನೆರವು ನೀಡುತ್ತದೆ. ಈ ಮೂಲಕ ವ್ಯಕ್ತಿಗಳು ಫ್ಲಿಪ್ ಕಾರ್ಟ್ ಆನ್ ಬೋರ್ಡ್ ನಲ್ಲಿ ಸೇರ್ಪಡೆಗೊಂಡು ಮುಂಬರುವ ತಿಂಗಳುಗಳಲ್ಲಿ ವಿತರಣೆ ಪ್ರತಿನಿಧಿಗಳಾಗುವ ಮತ್ತು ಸೇವಾ ಪಾಲುದಾರರು ಹಾಗೂ ಟೆಕ್ನಿಶಿಯನ್ ಗಳಾಗಿ ಸೇರ್ಪಡೆಗೊಂಡು ವಿವಿಧ ಪಾತ್ರಗಳನ್ನು ನಿರ್ವಹಣೆ ಮಾಡಬಹುದಾಗಿದೆ.

  ಇದನ್ನೂ ಓದಿ:Indian Navy SSC Recruitment 2021: ಅರ್ಜಿ ಆಹ್ವಾನಿಸಿದ ಭಾರತೀಯ ನೌಕಾಪಡೆ; ತಿಂಗಳಿಗೆ ಸಂಬಳ 1.10 ಲಕ್ಷ ರೂ

  ಬಿಗ್​ಬಿಲಿಯನ್ ಡೇಸ್​​ಗೆ ಮುಂಚೆ ಪ್ಲಾನ್ ಪರಿಚಯ

  ಮುಂಬರುವ ತಿಂಗಳುಗಳಲ್ಲಿ ಹಬ್ಬದ ಸೀಸನ್ ಮತ್ತು ಕಂಪನಿಯ ಬಿಗ್ ಬಿಲಿಯನ್ ಡೇಸ್ ಗೆ ಮುಂಚಿತವಾಗಿ ಇದನ್ನು ಪರಿಚಯಿಸಿರುವುದರಿಂದ ಈ ಪ್ಲಾಟ್ ಫಾರ್ಮ್ ಬಳಕೆ ಹೆಚ್ಚಾಗುತ್ತದೆ. ಇದರಿಂದ ದೇಶಾದ್ಯಂತ ಸಾವಿರಾರು ಜನರಿಗೆ, ಟೆಕ್ನಿಶಿಯನ್ ಗಳು ಮತ್ತು ಸೇವಾ ಏಜೆನ್ಸಿಗಳಿಗೆ ಹೆಚ್ಚುವರಿಯಾದ ಕೆಲಸದ ಅವಕಾಶಗಳು ಲಭ್ಯವಾಗಲಿವೆ ಮತ್ತು ವಿತರಣಾ ಪಾಲುದಾರರಾಗಿ ಗಳಿಕೆಯನ್ನು ಹೆಚ್ಚು ಮಾಡಿಕೊಳ್ಳಲು ನೆರವಾಗುತ್ತದೆ. ಇ-ಕಾಮರ್ಸ್ ಯಾವುದೇ ಸಂದರ್ಭದಲ್ಲಿ ಮತ್ತು ಎಲ್ಲಿ ಬೇಕಾದರೂ ಉತ್ಪನ್ನಗಳಿಗೆ ಆರ್ಡರ್ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಸಕ್ರಿಯಗೊಳಿಸುವುದರೊಂದಿಗೆ ಫ್ಲಿಪ್ ಕಾರ್ಟ್ ಎಕ್ಸ್ಟ್ರಾ ವಿತರಣೆಯನ್ನು ಹೆಚ್ಚಿಸಿಕೊಳ್ಳುವಾಗ ಆದಾಯ ಗಳಿಕೆಯ ಅವಕಾಶಗಳನ್ನು ಮತ್ತಷ್ಟು ಸೃಷ್ಟಿಸಿಕೊಳ್ಳಲು ಸಹಾಯ ಮಾಡುತ್ತದೆ.

  ಎಲ್ಲಿಂದ ಸೈನ್​ಅಪ್ ಆಗಬಹುದು?

  `ಫ್ಲಿಪ್ ಕಾರ್ಟ್ ಎಕ್ಸ್ಟ್ರಾ’ ಆ್ಯಪ್ ಪಾಲುದಾರರಿಗೆ ಎಲ್ಲಿಂದ ಬೇಕಾದರೂ ಸೈನ್ ಅಪ್ ಮಾಡುವ ಅನುಕೂಲ ಮತ್ತು ಸಾಗಾಣಿಕೆಗಳನ್ನು ತಲುಪಿಸಲು ಅವರ ಆದ್ಯತೆಯ ವೇಳಾಪಟ್ಟಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಇದು ಫ್ಲಿಪ್ ಕಾರ್ಟ್ ಪರ್ಯಾಯ ವಿತರಣಾ ಮಾದರಿಗಳ ವಿಸ್ತರಣೆಯಾಗಿದ್ದು ಫ್ಲಿಪ್ ಕಾರ್ಟ್ ಕಿರಾಣ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ. ಇದು ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಕಳೆದ ವರ್ಷದ ಹಬ್ಬದ ಸಂದರ್ಭದಲ್ಲಿ ಕಿರಾಣ ವಿತರಣಾ ಮಾದರಿಯು 10 ಮಿಲಿಯನ್ ಸಾಗಣೆಗಳನ್ನು ಪೂರೈಸಿದೆ.

  Flipkart Extra Planನಿಂದ ಲಾಭವೇನು?

  ಈ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ನ ಸಪ್ಲೈ ಚೇನ್ ನ ಮುಖ್ಯಸ್ಥ ಮತ್ತು ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ ಅವರು, ``ಮಾರಾಟಗಾರರು, ಕುಶಲಕರ್ಮಿಗಳು, ಎಂಎಸ್ಎಂಇಗಳು, ಕಿರಾಣಿಗಳು ಮತ್ತು ಗ್ರಾಹಕರು ಸೇರಿದಂತೆ ಎಲ್ಲಾ ರೀತಿಯ ಪಾಲುದಾರರಿಗೆ ಮೌಲ್ಯವನ್ನು ಸೃಷ್ಟಿಸಲು ಸಂಸ್ಥೆಯು ಬದ್ಧವಾಗಿದೆ. ಇ-ಕಾಮರ್ಸ್ ನ ಪ್ರಯೋಜನಗಳನ್ನು ಸಮನಾಗಿ ವಿತರಣೆ ಮಾಡಲು ನಾವು ನಮ್ಮ ಪಾಲುದಾರಿಕೆಯ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಣೆ ಮಾಡುತ್ತಾ ಬಂದಿದ್ದೇವೆ. ಈ ಪ್ರಯತ್ನದಲ್ಲಿ ನಾವು ಅಪಾರ ಜನಪ್ರಿಯ ಕಿರಾಣ ವಿತರಣಾ ಕಾರ್ಯಕ್ರಮದಂತಹ ಹಲವಾರು ಉಪಕ್ರಮಗಳನ್ನು ಪರಿಚಯಿಸಿದ್ದೇವೆ ಮತ್ತು ವ್ಯಕ್ತಿಗಳು, ಸ್ಥಳೀಯ ಮಳಿಗೆಗಳು ಹಾಗೂ ಸೇವಾ ತಂತ್ರಜ್ಞರಿಗೆ ಹೊಂದಿಕೊಳ್ಳುವಂತಹ ಆದಾಯ ಗಳಿಕೆಯ ಅವಕಾಶಗಳನ್ನು ನೀಡಲು ಫ್ಲಿಪ್ ಕಾರ್ಟ್ ಎಕ್ಸ್ಟ್ರಾ ಅನ್ನು ಆರಂಭಿಸಲು ನಮಗೆ ಹರ್ಷವೆನಿಸುತ್ತಿದೆ’’ ಎಂದು ತಿಳಿಸಿದರು.

  ಬಿಸಿಜಿಯ ಕೈಗಾರಿಕಾ ವರದಿಗಳು ಭಾರತದ ಕೃಷಿಯೇತರ ಆರ್ಥಿಕತೆಯನ್ನು ಬರೋಬ್ಬರಿ 90 ಮಿಲಿಯನ್ ಉದ್ಯೋಗಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿವೆ. ಕೆಲಸದ ಒಟ್ಟು ಮೊತ್ತದಲ್ಲಿ 250 ಬಿಲಿಯನ್ ಡಾಲರ್ ಗಿಂತ ಹೆಚ್ಚಿನ ವಹಿವಾಟು ನಡೆಸುತ್ತವೆ ಮತ್ತು ಶೇಕಡಾ 1.25 ರಷ್ಟು ಭಾರತದ ಜಿಡಿಪಿಗೆ ಕೊಡುಗೆಯನ್ನು ನೀಡುತ್ತವೆ ಎಂದೂ ವರದಿಗಳು ಹೇಳಿವೆ.

  ಇದನ್ನೂ ಓದಿ:IBM Careers India: ಐಬಿಎಂ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ; 3.7 ಲಕ್ಷ ಪ್ಯಾಕೇಜ್, ಅರ್ಜಿ ಸಲ್ಲಿಸಲು ಹೀಗೆ ಮಾಡಿ

  3 ಸುಲಭ ಹಂತಗಳಲ್ಲಿ ಯಾರು ಬೇಕಾದರೂ `ಫ್ಲಿಪ್ ಕಾರ್ಟ್ ಎಕ್ಸ್ಟ್ರಾ’ಗೆ ಸೇರ್ಪಡೆಯಾಗಬಹುದು.

  ಹೊಸ ಪಟ್ಟಣಗಳು, ನಗರಗಳು ಮತ್ತು 2, 3 ನೇ ಶ್ರೇಣಿಯ ನಗರಗಳಿಂದ ಇ-ಕಾಮರ್ಸ್ ಅನ್ನು ಅನ್ವೇಷಣೆ ಮಾಡುವ ಗ್ರಾಹಕರೊಂದಿಗೆ ವೇಗ ಮತ್ತು ಚುರುಕುತನದೊಂದಿಗೆ ಕಡೆಯ ಮೈಲಿ ವ್ಯಾಪ್ತಿಯನ್ನು ಬಲಪಡಿಸುವುದು ಮುಖ್ಯವಾಗಿದೆ. ಇ-ಕಾಮರ್ಸ್ ಗ್ರಾಹಕರನ್ನು ಮತ್ತು ಹೊಂದಿಕೊಳ್ಳುವ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಿಗ್ ಎಕಾನಮಿ ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುವ ಮೂಲಕ ಅತ್ಯುತ್ತಮವಾದ ಗ್ರಾಹಕ ಅನುಭವವನ್ನು ಒದಗಿಸುತ್ತದೆ. ಗ್ರಾಹಕ ಸೇವೆ, ವಿತರಣೆ, ಸ್ಥಾಪನೆ, ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳು ಹಾಗೂ ಕೈಲಿರುವ ಸಾಧನಗಳು, ಪಿಒಎಸ್ ಯಂತ್ರಗಳು, ಸ್ಕ್ಯಾನರ್ ಗಳು, ವಿವಿಧ ಮೊಬೈಲ್ ಅಪ್ಲಿಕೇಷನ್ ಗಳು ಮತ್ತು ಇಆರ್ ಪಿಗಳ ಬಳಕೆಯ ತರಬೇತಿಯನ್ನು ನೀಡಲಾಗುತ್ತದೆ.
  Published by:Latha CG
  First published: