• Home
  • »
  • News
  • »
  • jobs
  • »
  • BBMPಯಲ್ಲಿ 63 ಹುದ್ದೆಗಳು ಖಾಲಿ, ನೇರ ಸಂದರ್ಶನ- ತಿಂಗಳಿಗೆ 47,000 ಸಂಬಳ

BBMPಯಲ್ಲಿ 63 ಹುದ್ದೆಗಳು ಖಾಲಿ, ನೇರ ಸಂದರ್ಶನ- ತಿಂಗಳಿಗೆ 47,000 ಸಂಬಳ

ಬಿಬಿಎಂಪಿ

ಬಿಬಿಎಂಪಿ

ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 10, 2022 ರಂದು ಬೆಳಗ್ಗೆ 10 ಗಂಟೆಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.

  • News18 Kannada
  • Last Updated :
  • Bangalore [Bangalore], India
  • Share this:

    BBMP Recruitment 2022: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhath Bengaluru Mahanagara Palike-BBMP) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 63 ಮೆಡಿಕಲ್ ಆಫೀಸರ್(Medical Officer) ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳನ್ನು ನೇರ ಸಂದರ್ಶನದ(Walk-in-Interview) ಮೂಲಕ  ಆಯ್ಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ವೃತ್ತಿ ಮಾಡ ಬಯಸುವ ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 10, 2022 ರಂದು ನಡೆಯಲಿರುವ ನೇರ ಸಂದರ್ಶನ(Direct Interview)ದಲ್ಲಿ ಪಾಲ್ಗೊಳ್ಳಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
    ಹುದ್ದೆಯ ಹೆಸರುಮೆಡಿಕಲ್ ಆಫೀಸರ್
    ಒಟ್ಟು ಹುದ್ದೆ63
    ವಿದ್ಯಾರ್ಹತೆಎಂಬಿಬಿಎಸ್
    ವೇತನಮಾಸಿಕ ₹ 47,250
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ನೋಟಿಫಿಕೇಶನ್ ಬಿಡುಗಡೆ ದಿನಾಂಕ04/11/2022
    ಸಂದರ್ಶನ ನಡೆಯುವ ದಿನ10/11/2022


    ವಿದ್ಯಾರ್ಹತೆ:
    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೇಮಕಾತಿ ಅಧಿಸೂಚನೆ ಪ್ರಕಾರ, ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆ/ಬೋರ್ಡ್​​ನಿಂದ ಕಡ್ಡಾಯವಾಗಿ ಎಂಬಿಬಿಎಸ್(MBBS) ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: BESCOM: ಬೆಸ್ಕಾಂನಲ್ಲಿ ಖಾಲಿ ಇರುವ 400 ಅಪ್ರೆಂಟಿಸ್ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ, ಇವತ್ತೇ ಕೊನೆ ದಿನ


    ವಯೋಮಿತಿ:
    ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೇಮಕಾತಿ ಅಧಿಸೂಚನೆ ಪ್ರಕಾರ ಇರಬೇಕು.


    ವಯೋಮಿತಿ ಸಡಿಲಿಕೆ:
    ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಸಂದರ್ಶನ ಯಾವಾಗ?
    ಅಭ್ಯರ್ಥಿಗಳು ತಮ್ಮ ರೆಸ್ಯೂಮ್​ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 10, 2022 ರಂದು ಬೆಳಗ್ಗೆ 10 ಗಂಟೆಗೆ ಈ ಕೆಳಕಂಡ ವಿಳಾಸದಲ್ಲಿ ಹಾಜರಿರಬೇಕು.


    ಸಂದರ್ಶನ ನಡೆಯುವ ಸ್ಥಳ-
    ನೌಕರರ ಭವನ
    ಬಿಬಿಎಂಪಿ ಮುಖ್ಯ ಕಚೇರಿ
    ಎನ್​.ಆರ್.ಚೌಕ್
    ಬೆಂಗಳೂರು
    ಕರ್ನಾಟಕ


    ಇದನ್ನೂ ಓದಿ:AAI Recruitment: ಏರ್​ಪೋರ್ಟ್​​ನಲ್ಲಿ ಕೆಲಸ ಮಾಡಲು ಇಲ್ಲೊಂದು ಚಾನ್ಸ್​ ಇದೆ, ಅರ್ಜಿ ಹಾಕಲು ಇವತ್ತೇ ಕೊನೆ ದಿನ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 04/11/2022
    ಸಂದರ್ಶನ ನಡೆಯುವ ದಿನ: 10/11/2022


    ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22975516 ಗೆ ಕರೆ ಮಾಡಬಹುದು, ಅಥವಾ Email: choph515@gmail.com ಗೆ ಮೇಲ್ ಮಾಡಬಹುದು.

    Published by:Latha CG
    First published: