ಎಸ್ಎಸ್ಎಲ್ಸಿ ಆಗಿ ಒಂದೊಳ್ಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲ ನಿಮ್ಮದಾಗಿದ್ರೆ ಇಲ್ಲಿದೆ ಉತ್ತಮ ಅವಕಾಶ. ದ್ವಿಚಕ್ರ ವಾಹನಗಳ ಮಾರಾಟ ಮತ್ತು ಕೊಳ್ಳುವಿಕೆಗೆ ಹೆಸರಾಗಿರುವ ಕ್ರೇಡ್ಆರ್ (CredR) ಸಂಸ್ಥೆಯಲ್ಲಿ ವಿವಿಧ ಉದ್ಯೋಗ ಭರ್ತಿಗೆ ಸಂಸ್ಥೆ ಮುಂದಾಗಿದೆ. ಆಟೋಮೊಬೈಲ್ ಕ್ಷೇತ್ರದ ಬಗ್ಗೆ ಕೊಂಚ ಅರಿವಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಲಾಜಿಸ್ಟಿಕ್ ವಿಭಾಗದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಲಾಜಿಸ್ಟಿಕ್ ವಿಭಾಗದಲ್ಲಿ ಲಾಜಿಸ್ಟಿಕ್ ಎಕ್ಸ್ಪರ್ಟ್ ಗಳ ನೇಮಕಾತಿಗೆ ಸಂಸ್ಥೆ ಮುಂದಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಹುದ್ದೆ ಮಾಹಿತಿ | ಹುದ್ದೆ ವಿವರ |
ಸಂಸ್ಥೆ | CredR |
ಹುದ್ದೆ | ಲಾಜಿಸ್ಟಿಕ್ ಎಕ್ಸ್ಪರ್ಟ್ |
ಒಟ್ಟು ಹುದ್ದೆ | ನಿಗದಿಪಡಿಸಿಲ್ಲ |
ಕಾರ್ಯ ನಿರ್ವಹಣೆ ಸ್ಥಳ | ಬೆಂಗಳೂರು |
ವೇತನ | ಕಂಪನಿಯ ನಿಯಮ ಅನುಸಾರ |
ಹುದ್ದೆಯ ಜವಾಬ್ದಾರಿ (Jobs Roles And Responsibility)
-ಅಭ್ಯರ್ಥಿಗಳು ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ಬೈಕ್ಗಳನ್ನು ನಿಗದಿತ ಸ್ಥಳಗಳಿಗೆ ವಿತರಿಸಬೇಕು.
-ಬೈಕ್ಗಳನ್ನು ಗ್ರಾಹಕರಿಗೆ ವಿತರಿಸುವ ಮತ್ತು ಅವರಿಂದ ಪಡೆಯಬೇಕು.
-ಬೈಕ್ಗಳನ್ನು ಕೇಂದ್ರಕ್ಕೆ ತಲುಪಿಸುವ ಮುನ್ನ ಬೈಕ್ನ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಬೇಕು.
-ಬೈಕ್ ಕಾರ್ಯಾಚರಣೆಯ ಸಮಸ್ಯೆ ಬಗ್ಗೆ ಅಲ್ಪ ಅರಿವಿರಬೇಕು.
-ಅಭ್ಯರ್ಥಿಗಳ ಬಳಿ ಕಡ್ಡಾಯವಾಗಿ ಡ್ರೈವಿಂಗ್ ಲೆಸೆನ್ಸ್ ಇರಬೇಕು.
-ಅಭ್ಯರ್ಥಿಗಳ ಬಗ್ಗೆ ಸ್ಮಾರ್ಟ್ ಫೋನ್ ಇದ್ದು, ಆ್ಯಪ್ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು.
ಅರ್ಜಿ ಸಲ್ಲಿಕೆ ವಿಧಾನ: ಇಮೇಲ್ ಮುಖಾಂತರ
ಇಮೇಲ್ ವಿಳಾಸ: hr@credr.com
ಅಧಿಕೃತ ವೆಬ್ಸೈಟ್: credr.com
ಇದನ್ನು ಓದಿ: 10ನೇ ತರಗತಿ ಆಗಿದ್ರೆ CredRನಲ್ಲಿದೆ ಕೆಲಸ; ಹುದ್ದೆ ಸಂಪೂರ್ಣ ಮಾಹಿತಿ ಇಲ್ಲಿದೆ
ವಿಶೇಷ ಸೂಚನೆ (Special Instruction)
ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್ ಅನ್ನು ಮೇಲಿನ ಇಮೇಲ್ ವಿಳಾಸಕ್ಕೆ ಸಲ್ಲಿಸಬೇಕು
ಅರ್ಜಿ ಸಲ್ಲಿಕೆ ವಿಧಾನ (How To Apply)
ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ