Jobs in Bengaluru: ಡಿಗ್ರಿ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಹುಡುಕುತ್ತಿದ್ರೆ; ಬೌನ್ಸ್​ನಲ್ಲಿದೆ ಅವಕಾಶ

ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಪದವೀಧರ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿ ಸಂಸ್ಥೆ ಅಧಿಸೂಚನೆ ಹೊರಡಿಸಿದೆ

ಬೌನ್ಸ್

ಬೌನ್ಸ್

  • Share this:
    ಪದವಿ ಮುಗಿದ ಬಳಿಕ ಉತ್ತಮ, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂದು ಹುಡುಕಾಡುತ್ತಿದ್ರೆ ಬೌನ್ಸ್​ ಕಂಪನಿ ನೀಡುತ್ತಿದೆ ನಿಮಗೆ ಉತ್ತಮ ಅವಕಾಶ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋಪಾಲಿಟನ್​ ಸಿಟಿಯಲ್ಲಿ ಜನಪ್ರಿಯ ಬಾಡಿಗೆ ಬೈಕ್​ ಸೇವೆ ಒದಗಿಸುತ್ತಿರುವ ಬೌನ್ಸ್​ ಕಂಪನಿ ಇದೀಗ ಅನೇಕ ಜನರಿಗೆ ಉದ್ಯೋಗ ಒದಗಿಸುವ ಸಂಸ್ಥೆ ಕೂಡ ಆಗಿದೆ. ಈಗಾಗಲೇ ಸಂಸ್ಥೆಯಲ್ಲಿ ನೂರಾರು ಜನರು ಕಾರ್ಯ ನಿರ್ವಹಿಸುತ್ತಿದ್ದು, ಈಗ ಮತ್ತೆ ಅನೇಕ ಜನರ ನೇಮಕಕ್ಕೆ ಸಂಸ್ಥೆ ಮುಂದಾಗಿದೆ.

    ಸಂಸ್ಥೆಯ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಪದವೀಧರ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿ ಸಂಸ್ಥೆ ಅಧಿಸೂಚನೆ ಹೊರಡಿಸಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಾಹಕ ವಿತರಕರಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವವವರು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ನೇಮಕಾತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

    ಸಂಸ್ಥೆ : ಬೌನ್ಸ್​ (Bounce)
    ಹುದ್ದೆಗಳು: ಕಾರ್ಯ ನಿರ್ವಾಹಕ
    ಒಟ್ಟು ಹುದ್ದೆಗಳು: 1
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು
    ವೇತನ: ಕಂಪನಿ ನಿಯಮ ಅನುಸಾರ















    ಹುದ್ದೆವಿಭಾಗವಿದ್ಯಾರ್ಹತೆಅನುಭವ
    ಕಾರ್ಯನಿರ್ವಾಹಕ - ವಿತರಕರ ನಿರ್ವಹಣೆಫೈನಾನ್ಸ್​​ 2 ರಿಂದ 5 ವರ್ಷ ಸೇವಾ ಅನುಭವಯಾವುದೇ ವಿಷಯದಲ್ಲಿ ಪದವಿ

    ಅರ್ಜಿ ಸಲ್ಲಿಕೆ ವಿಧಾನ (Apply Method)

    ವಯೋಮಿತಿ: ಬೌನ್ಸ್​ ಸಂಸ್ಥೆಯ ನಿಯಮ ಅನುಸಾರ ವಯೋಮಿತಿ ಹೊಂದಿರಬೇಕು.

    ಇಮೇಲ್​ ಮೂಲಕ
    ಇಮೇಲ್​ ವಿಳಾಸ: careers@bounceshare.com
    ಅಧಿಕೃತ ವೆಬ್‌ಸೈಟ್: bounceshare.com

    ವಿಶೇಷ ಸೂಚನೆ (Special Instructions)
    ಅಭ್ಯರ್ಥಿಗಳು ಕಂಪನಿ ಮತ್ತು ಹುದ್ದೆಯ ಜವಾಬ್ದಾರಿಗಳ ಕುರಿತು ಸಂಪೂರ್ಣವಾಗಿ ತಿಳಿಯಬೇಕು.
    ಗ್ರಾಹಕ ಯಶಸ್ಸಿನ ವ್ಯವಸ್ಥಾಪಕ, ಆಟೋ ಮೊಬೈಲ್​ ಅನುಭವ ತಿಳಿದಿರಬೇಕು.
    ಹಣಕಾಸು ಮತ್ತು ಕಂಪನಿಯ ವ್ಯವಹಾರದ ಕುರಿತ ಜ್ಞಾನವನ್ನು ಹೊಂದಿರಬೇಕು
    ಕಾರ್ಯ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವವರು SaaS ಪರಿಸರದ ತಿಳುವಳಿಕೆ
    ಆಟೋಮೊಬೈಲ್ ಅನುಭವಕ್ಕೆ ಆದ್ಯತೆ ನೀಡಲಾಗಿದೆ.

    ಇದನ್ನು ಓದಿ: ಎಸ್​ಇಒ ಎಕ್ಸ್​ಪರ್ಟ್​ ನೀವಾದ್ರೆ ಬೌನ್ಸ್​ನಲ್ಲಿದೆ ಕೆಲಸ; ಇಲ್ಲಿದೆ ವೇತನ ಸೇರಿದಂತೆ ಸಂಪೂರ್ಣ ಮಾಹಿತಿ

    ಅರ್ಜಿ ಸಲ್ಲಿಕೆ ವಿಧಾನ (How To Apply)
    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: