• Home
  • »
  • News
  • »
  • jobs
  • »
  • Job in Azim Premji Foundation: ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿದೆ ಉದ್ಯೋಗ; ಪದವಿ ಆದವರಿಗೆ ಅವಕಾಶ

Job in Azim Premji Foundation: ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿದೆ ಉದ್ಯೋಗ; ಪದವಿ ಆದವರಿಗೆ ಅವಕಾಶ

ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿದೆ ಉದ್ಯೋಗ

ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿದೆ ಉದ್ಯೋಗ

ಶಿಕ್ಷಣ ಎನ್​ಜಿಒಗಳಲ್ಲಿ ಆನ್​ ಫೀಲ್ಡ್ ಕಾರ್ಯ ನಿರ್ವಹಿಸಿದ​ ಅನುಭವ ಹೊಂದಿರುವ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

  • Share this:

    ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿ(Azim Premji Foundation )ಸಂಪನ್ಮೂಲ ವ್ಯಕ್ತಿ (Resource Person) ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗೆ ನೇಮಕವಾದ ಅಭ್ಯರ್ಥಿಗಳು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಂದಿಗೆ ಕೆಲಸ ಮಾಡಲು ಅವರಿಗೆ ವೃತ್ತಿಪರ ಸಾಮರ್ಥ್ಯಗಳನ್ನು ನಿರ್ಮಿಸಲು ಮತ್ತು ಉತ್ತಮ ಶಿಕ್ಷಕರಾಗಲು ಸಹಾಯ ಮಾಡುತ್ತಾರೆ. ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಅಭ್ಯರ್ಥಿಗಳು ಆನ್​​ಲೈನ್​​ ಮೂಲಕ ಸಲ್ಲಿಸಬಹುದಾಗಿದೆ.


    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ

    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಅಜೀಂ ಪ್ರೇಮ್​ಜೀ ಫೌಂಡೇಶನ್​
    ಹುದ್ದೆಸಂಪನ್ಮೂಲ ವ್ಯಕ್ತಿ
    ಹುದ್ದೆ ಸಂಸ್ಥೆನಿರ್ದಿಷ್ಟಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಕರ್ನಾಟಕದಾದ್ಯಂತ
    ವೇತನಅಜೀಂ ಪ್ರೇಮ್​ಜೀ ಫೌಂಡೇಶನ್​ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿ ಅಧಿಕೃತ ವಿಶ್ವ ವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.


    ಶಿಕ್ಷಣ ಎನ್​ಜಿಒಗಳಲ್ಲಿ ಆನ್​ ಫೀಲ್ಡ್ ಕಾರ್ಯ ನಿರ್ವಹಿಸಿದ​ ಅನುಭವ ಹೊಂದಿರುವ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.


    ಅನುಭವ: ಪದವಿ ಅಭ್ಯರ್ಥಿಯು ಶಿಕ್ಷಕ ವೃತ್ತಿಯಲ್ಲಿ ಐದು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು.
    ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಅನುಭವ ಇರಬೇಕು.


    ಇದನ್ನು ಓದಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಡಿಪ್ಲೊಮಾ ಆದವರಿಗೆ ಅವಕಾಶ


    ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ


    ಅರ್ಜಿ ಸಲ್ಲಿಕೆ ಲಿಂಕ್​: http://bit.do/KA-RP


    ಅರ್ಜಿ ಶುಲ್ಕ: ಯಾವುದೇ ಶುಲ್ಕ ಇಲ್ಲ.


    ವಿಶೇಷ ಸೂಚನೆ:
    ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿಮಿತ್ತ ಪ್ರವಾಸ ನಡೆಸಲು ಸಿದ್ಧವಿರಬೇಕು.


    ಆಯ್ಕೆ ವಿಧಾನ
    ಲಿಖಿತ ಮತ್ತು ಮೆರಿಟ್​ ಆಧಾರ


    ಇದನ್ನು ಓದಿ: ಪೊಲೀಸ್​ ಹುದ್ದೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಅವಕಾಶ; ಬೇಗ ಅರ್ಜಿ ಸಲ್ಲಿಸಿ


    ಪ್ರಮುಖ ದಿನಾಂಕ:
    ಅಭ್ಯರ್ಥಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ದಿನಾಂಕ: 8 ಜುಲೈ 2022


    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: https://azimpremjifoundation.org/


    ಅರ್ಜಿ ಸಲ್ಲಿಕೆ ವಿಧಾನ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.


    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ

    Published by:Seema R
    First published: