• Home
  • »
  • News
  • »
  • jobs
  • »
  • JOBS: ಚಿಕ್ಕಬಳ್ಳಾಪುರದಲ್ಲಿ ಬಂಪರ್ ಉದ್ಯೋಗ, ಡಿಗ್ರಿ ಪಾಸಾಗಿದ್ರೆ ನಿಮ್ಮ ರೆಸ್ಯೂಮ್ ಇ-ಮೇಲ್ ಮಾಡಿ

JOBS: ಚಿಕ್ಕಬಳ್ಳಾಪುರದಲ್ಲಿ ಬಂಪರ್ ಉದ್ಯೋಗ, ಡಿಗ್ರಿ ಪಾಸಾಗಿದ್ರೆ ನಿಮ್ಮ ರೆಸ್ಯೂಮ್ ಇ-ಮೇಲ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 18, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಇ-ಮೇಲ್(E-mail) ಮಾಡುವ ಮುಖಾಂತರ ಅರ್ಜಿ ಹಾಕಬೇಕು.

  • Share this:

    Chikkaballapur Nirmithi Kendra Recruitment 2022: ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದಲ್ಲಿ(Chikkaballapur Nirmithi Kendra ) 2 ಅಕೌಂಟೆಂಟ್ ಮತ್ತು ಕಂಪ್ಯೂಟರ್ ಆಪರೇಟರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ಸ್ಥಳೀಯ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಸದುಪಯೋಗಪಡಿಸಿಕೊಳ್ಳಬಹುದು. ನವೆಂಬರ್ 18, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಇ-ಮೇಲ್(E-mail) ಮಾಡುವ ಮುಖಾಂತರ ಅರ್ಜಿ ಹಾಕಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರ
    ಹುದ್ದೆಯ ಹೆಸರುಅಕೌಂಟೆಂಟ್ & ಕಂಪ್ಯೂಟರ್ ಆಪರೇಟರ್
    ಒಟ್ಟು ಹುದ್ದೆ2
    ವಿದ್ಯಾರ್ಹತೆಬಿ.ಕಾಂ, ಪದವಿ
    ವೇತನಮಾಸಿಕ ₹ 15,000
    ವಯೋಮಿತಿಗರಿಷ್ಠ 35 ವರ್ಷ
    ನೋಟಿಫಿಕೇಶನ್ ಬಿಡುಗಡೆ ದಿನಾಂಕ29/10/2022
    ಇ-ಮೇಲ್ ಮಾಡಲು ಕೊನೆಯ ದಿನ18/11/2022


    ಹುದ್ದೆಯ ಮಾಹಿತಿ:
    ಅಕೌಂಟೆಂಟ್-1
    ಕಂಪ್ಯೂಟರ್ ಆಪರೇಟರ್-1


    ಇದನ್ನೂ ಓದಿ: BBMPಯಲ್ಲಿ 63 ಹುದ್ದೆಗಳು ಖಾಲಿ, ನೇರ ಸಂದರ್ಶನ- ತಿಂಗಳಿಗೆ 47,000 ಸಂಬಳ


    ವಿದ್ಯಾರ್ಹತೆ:
    ಅಕೌಂಟೆಂಟ್-ಬಿ.ಕಾಂ, ಎಂ.ಕಾಂ, ಎಂಬಿಎ
    ಕಂಪ್ಯೂಟರ್ ಆಪರೇಟರ್-ಯಾವುದೇ ಪದವಿ


    ಅನುಭವ:
    ಅಕೌಂಟೆಂಟ್- ಅಭ್ಯರ್ಥಿಗಳು ಅಕೌಂಟ್ಸ್​ ಬ್ರಾಂಚ್, ಅಸೋಸಿಯೇಷನ್​ ವಿಭಾಗದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.
    ಕಂಪ್ಯೂಟರ್ ಆಪರೇಟರ್-ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಇರಬೇಕು. ಜೊತೆಗೆ ಕಂಪ್ಯೂಟರ್​ ನಿರ್ವಹಣೆಯಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.


    ವಯೋಮಿತಿ:
    ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಅನುಭವವನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ. ಕೊನೆಯ ಹಂತವಾಗಿ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.


    ಇದನ್ನೂ ಓದಿ: AAI Recruitment: ಏರ್​ಪೋರ್ಟ್​​ನಲ್ಲಿ ಕೆಲಸ ಮಾಡಲು ಇಲ್ಲೊಂದು ಚಾನ್ಸ್​ ಇದೆ, ಅರ್ಜಿ ಹಾಕಲು ಇವತ್ತೇ ಕೊನೆ ದಿನ


    ವೇತನ:
    ಅಕೌಂಟೆಂಟ್-ನಿಯಮಾನುಸಾರ
    ಕಂಪ್ಯೂಟರ್ ಆಪರೇಟರ್-ಮಾಸಿಕ ₹ 15,000


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ pmcbnk@yahoo.co.in ಗೆ ನವೆಂಬರ್ 18, 2022ಕ್ಕೆ ಮುನ್ನ ಕಳುಹಿಸಬೇಕು.


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 29/10/2022
    ಇ-ಮೇಲ್ ಮಾಡಲು ಕೊನೆಯ ದಿನ: 18/11/2022


    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 08156-295080 ಗೆ ಕರೆ ಮಾಡಬಹುದು

    Published by:Latha CG
    First published: