• Home
  • »
  • News
  • »
  • jobs
  • »
  • Indian Coast Guard Job: ಕರಾವಳಿ ಪಡೆಯಲ್ಲಿ ಕೆಲಸ ಮಾಡಬೇಕೇ? ಹಾಗಿದ್ರೆ ತಡ ಮಾಡದೇ ಈಗಲೇ ಅಪ್ಲೈ ಮಾಡಿ

Indian Coast Guard Job: ಕರಾವಳಿ ಪಡೆಯಲ್ಲಿ ಕೆಲಸ ಮಾಡಬೇಕೇ? ಹಾಗಿದ್ರೆ ತಡ ಮಾಡದೇ ಈಗಲೇ ಅಪ್ಲೈ ಮಾಡಿ

ಭಾರತೀಯ ಕರಾವಳಿ ಪಡೆ

ಭಾರತೀಯ ಕರಾವಳಿ ಪಡೆ

ಭಾರತೀಯ ಕರಾವಳಿ ಪಡೆಯಲ್ಲಿ ನಿಮಗೆ ಸಾಕಷ್ಟು ಅವಕಾಶಗಳಿವೆ. ಒಟ್ಟು ಬರೋಬ್ಬರಿ 50 ಹುದ್ದೆಗಳಿವೆ. ಖಾಲಿ ಇರುವ ಸಹಾಯಕ ಕಮಾಂಡೆಂಟ್ (ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಭಾರತೀಯ ಕರಾವಳಿ ಪಡೆ ಈಗ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಇದೇ ಫೆಬ್ರವರಿ 28ರಂದು ಕೊನೆಯ ದಿನವಾಗಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ₹56,100 ವೇತನ ನಿಡಲಾಗುವುದು. ಹಾಗಾದರೆ ಇನ್ನೇಕೆ ತಡ, ಈಗಲೇ ನೀವು ಅರ್ಜಿ ಸಲ್ಲಿಸಿ...

ಮುಂದೆ ಓದಿ ...
  • Share this:

Indian Coast Guard Recruitment 2022: ಭಾರತೀಯ ಸೇನೆ (Indian Army) ಸೇರಿ, ದೇಶ ರಕ್ಷಣೆ ಕೆಲಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಅಂತ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಭಾರತೀಯ ಕರಾವಳಿ ಪಡೆಯಲ್ಲಿ (Indian Coast Guard) ನಿಮಗೆ ಸಾಕಷ್ಟು ಅವಕಾಶಗಳಿವೆ. ಒಟ್ಟು ಬರೋಬ್ಬರಿ 50 ಹುದ್ದೆಗಳಿವೆ. ಖಾಲಿ ಇರುವ ಸಹಾಯಕ ಕಮಾಂಡೆಂಟ್ (ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಭಾರತೀಯ ಕರಾವಳಿ ಪಡೆ ಈಗ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ ಇದೇ ಫೆಬ್ರವರಿ 28ರಂದು ಕೊನೆಯ ದಿನ (Last Date) ಆಗಿದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ https://joinindiancoastguard.gov.in ವೆಬ್‌ಸೈಟ್‌ಗೆ ವಿಸಿಟ್‌ (Visit) ಮಾಡಿ, ಅಧಿಸೂಚನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.   https://joinindiancoastguard.gov.in/pdf/Advertisement/AC222.pdf ಅಂದಹಾಗೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ  ₹56,100 ವೇತನ ನಿಡಲಾಗುವುದು. ಹಾಗಿದ್ರೆ ಇನ್ನೇಕೆ ತಡ, ಈ ಹುದ್ದೆಗೆ ತಕ್ಕನಾದ ಅರ್ಹತೆ ನಿಮಗಿದ್ದರೆ, ಈಗಲೇ ಅಪ್ಲೈ ಮಾಡಿ…

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.



ಸಂಸ್ಥೆ ಹೆಸರುಭಾರತೀಯ ಕರಾವಳಿ ಪಡೆ
ಹುದ್ದೆಯ ಹೆಸರುಜನರಲ್ ಡ್ಯೂಟಿಕಮರ್ಷಿಯಲ್ ಪೈಲಟ್ಟಕ್ನಿಕಲ್ ಪರ್ಸನ್
ವಿದ್ಯಾರ್ಹತೆಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ/ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ವಯೋಮಿತಿಭಾರತೀಯ ನೌಕಪಡೆ ಪ್ರಕಟಿಸಿರುವ ವಯೋಮಿತಿಯ ಅರ್ಹತೆ ಪಡೆದಿರಬೇಕು. (ಮಾಹಿತಿಗೆ ವೆಬ್‌ಸೈಟ್‌ ನೋಡಿ)
ವೇತನತರಬೇತಿ ಸಮಯದಲ್ಲಿ ಭತ್ಯೆ ನೀಡಲಾಗುವುದು. ತರಬೇತಿಪೂರೈಸಿದ ಬಳಿಕ  ₹56,100 ವೇತನ
ಪರೀಕ್ಷಾ ವಿಧಾನಕಂಪ್ಯೂಟರ್ ಪರೀಕ್ಷೆ, ದೈಹಿಕ ಕ್ಷಮತೆಯ ಪರೀಕ್ಷೆ
ಅರ್ಜಿ ಸಲ್ಲಿಕೆ ವಿಧಾನಆನ್‌ ಲೈನ್ ಮೂಲಕ ಮಾತ್ರ
ಕೊನೆಯ ದಿನಾಂಕಫೆಬ್ರವರಿ 28, 2022


ಇದನ್ನೂ ಓದಿ: Karnataka Jobs: ತಿಂಗಳಿಗೆ 1.5 ಲಕ್ಷ ಸಂಬಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗ


ಹುದ್ದೆಗಳ ಮಾಹಿತಿ:


ಭಾರತೀಯ ಕರಾವಳಿ ಪಡೆಯು ಜನರಲ್ ಡ್ಯೂಟಿ, ಕಮರ್ಷಿಯಲ್ ಪೈಲಟ್ ಹಾಗೂ ಟಕ್ನಿಕಲ್ ಪರ್ಸನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಿಯುಸಿ/ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.


 ವಯೋಮಿತಿ:


ಹುದ್ದೆಗಳಿಗೆ ಅನುಸಾರ ಭಾರತೀಯ ನೌಕಾಪಡೆ ಪ್ರಕಟಿಸಿರುವ ವಯೋಮಿತಿಯ ಅರ್ಹತೆ ಪಡೆದಿರಬೇಕು. ಇದರ ಮಾಹಿತಿಗೆ ವೆಬ್‌ಸೈಟ್‌ ನೋಡಿ..


ವೇತನ, ಭತ್ಯೆ ಇತ್ಯಾದಿ ಮಾಹಿತಿ:


ಇನ್ನು ತರಬೇತಿ ಸಮಯದಲ್ಲಿ ಭತ್ಯೆ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ  ₹56,100 ವೇತನ ನೀಡಲಾಗುವುದು ಅಂತ ಭಾರತೀಯ ಕರಾವಳಿ ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.


ಪರೀಕ್ಷೆಗಳು ಹೇಗಿರುತ್ತವೆ?


ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಹಾಗೂ ದೈಹಿಕ ಕ್ಷಮತೆ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುವುದು.


ಇದನ್ನೂ ಓದಿ: Railway Jobs: ಮಧ್ಯ ರೈಲ್ವೆಯಲ್ಲಿ 20 ಹುದ್ದೆಗಳು ಖಾಲಿ, ತಿಂಗಳಿಗೆ 30,000 ಸಂಬಳ, ಎಂಜಿನಿಯರಿಂಗ್ ಆದವರು Apply ಮಾಡಿ


ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ


ಅರ್ಜಿ ಸಲ್ಲಿಕೆ ಇದೇ ತಿಂಗಳು 28ರಂದು ಕೊನೆಯ ದಿನವಾಗಿದೆ, ಅಧಿಸೂಚನೆಗಾಗಿ https://joinindiancoastguard.gov.in/pdf/Advertisement/AC222.pdf ಇದನ್ನು ಡೋನ್‌ಲೋಡ್ ಮಾಡಿ, ಹೆಚ್ಚಿನ ಮಾಹಿತಿಗಾಗಿ https://joinindiancoastguard.gov.in ಎಂಬ ವೆಬ್‌ಸೈಟ್ ವಿಸಿಟ್ ಮಾಡಿ.


ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


ಅರ್ಜಿ ಸಲ್ಲಿಕೆ ವಿಧಾನ


ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಹೀಗಾಗಿ ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

Published by:Annappa Achari
First published: