• Home
  • »
  • News
  • »
  • jobs
  • »
  • Government Job: ಪಿಯುಸಿ ಪಾಸಾಗಿದ್ಯಾ? ಇಲ್ಲಿದೆ ನಿಮಗೆ ಸರ್ಕಾರಿ ಉದ್ಯೋಗ!

Government Job: ಪಿಯುಸಿ ಪಾಸಾಗಿದ್ಯಾ? ಇಲ್ಲಿದೆ ನಿಮಗೆ ಸರ್ಕಾರಿ ಉದ್ಯೋಗ!

 Job Recruitment

Job Recruitment

Job Alert: ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.  ಹುದ್ದೆಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇರೆಗೆ ಹಾಗೂ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆಯನ್ನು ವಿವರಿಸಲಾಗಿದೆ.

  • Share this:

ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್ (Data Entry) , ಅಟೆಂಡಂಟ್ (Attendant), ಕರವಸೂಲಿಗಾರರು (Collectors), ಕ್ಲೀನರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ 04 ತಾಲ್ಲೂಕುಗಳ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.  ಹುದ್ದೆಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇರೆಗೆ ಹಾಗೂ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆಯನ್ನು ವಿವರಿಸಲಾಗಿದೆ.


ಹುದ್ದೆಗಳ ವಿವರ
ಕರವಸೂಲಿಗಾರರು : 04
ಡಾಟಾ ಎಂಟ್ರಿ ಆಪರೇಟರ್ : 04
ಅಟೆಂಡಂಟ್ : 08
ಕ್ಲೀನರ್ : 34


ಹುದ್ದೆವಾರು ವಿದ್ಯಾರ್ಹತೆ

ಕರವಸೂಲಿಗಾರರುಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್.
ಡಾಟಾ ಎಂಟ್ರಿ ಆಪರೇಟರ್ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್.
ಅಟೆಂಡಂಟ್ಎಸ್‌ಎಸ್‌ಎಲ್‌ಸಿ ಪಾಸ್.
ಕ್ಲೀನರ್ಎಸ್‌ಎಸ್‌ಎಲ್‌ಸಿ ಪಾಸ್.

ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ! ಆಕರ್ಷಕ ವೇತನವನ್ನು ನಿಮ್ಮದಾಗಿಸಿಕೊಳ್ಳಿ


ವಿದ್ಯಾರ್ಹತೆ:
ಕರವಸೂಲಿಗಾರರು : ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್.
ಡಾಟಾ ಎಂಟ್ರಿ ಆಪರೇಟರ್ : ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸ್.
ಅಟೆಂಡಂಟ್ : ಎಸ್‌ಎಸ್‌ಎಲ್‌ಸಿ ಪಾಸ್.
ಕ್ಲೀನರ್ : ಎಸ್‌ಎಸ್‌ಎಲ್‌ಸಿ ಪಾಸ್.


ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : https://bangalorerural.nic.in


ವರ್ಕ್‌ ಫ್ರಮ್ ಹೋಮ್‌ ಉದ್ಯೋಗ: ಪಿಯು ಪಾಸ್ ಆಗಿರಬೇಕು. ದೊರೆಯಲಿದೆ ರೂ.20,000 ದಿಂದ 30,000 ವರೆಗೆ ವೇತನ.


ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ನೋಟಿಫಿಕೇಶನ್‌ ಓದಲು ಇಲ್ಲಿ ಕ್ಲಿಕ್ ಮಾಡಿ


ಅರ್ಜಿ ಸಲ್ಲಿಸಲು ವಯಸ್ಸಿನ ಅರ್ಹತೆಗಳು
ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ.


ಇದನ್ನೂ ಓದಿ: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ, ತಿಂಗಳಿಗೆ 40 ಸಾವಿರ ಸಂಬಳ


ಕರವಸೂಲಿಗಾರರು ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಕಂಪ್ಯೂಟರ್ ತರಬೇತಿ ಕೋರ್ಸ್‌ನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ 6 ತಿಂಗಳು ತರಬೇತಿ ಪಡೆದಿರುವ ಪ್ರಮಾಣ ಪತ್ರ ಇರಲೇಬೇಕು. ಈ ಹುದ್ದೆಗಳಿಗೆ ಕಾರ್ಮಿಕ ಇಲಾಖೆಯಿಂದ ನಿಗಧಿಪಡಿಸಿದ ಕನಿಷ್ಠ ವೇತನ ನೀಡಲಾಗುತ್ತದೆ.


ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ Rs.300.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ Rs.100.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ Rs.200.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-10-2022

First published: