• Home
  • »
  • News
  • »
  • jobs
  • »
  • IKEA Jobs: ಐಕಿಯದಲ್ಲಿ ಮುಂದುವರೆದ ಉದ್ಯೋಗ ನೇಮಕಾತಿ; ಆಸಕ್ತ ಸ್ಥಳೀಯರು ಬೇಗ ಅರ್ಜಿ ಸಲ್ಲಿಸಿ

IKEA Jobs: ಐಕಿಯದಲ್ಲಿ ಮುಂದುವರೆದ ಉದ್ಯೋಗ ನೇಮಕಾತಿ; ಆಸಕ್ತ ಸ್ಥಳೀಯರು ಬೇಗ ಅರ್ಜಿ ಸಲ್ಲಿಸಿ

ಐಕಿಯ ಮಳಿಗೆ

ಐಕಿಯ ಮಳಿಗೆ

ಬೆಂಗಳೂರಿನ ಐಕಿಯ ಮಳಿಗೆ ಈಗಾಗಲೇ ಹುದ್ದೆ ಸಂಬಂಧ ಅಧಿಸೂಚನೆ ಹೊರಡಿಸಿದ್ದು, ಸ್ಥಳೀಯರ ನೇಮಕಕ್ಕೆ ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಭರ್ತಿಗೆ ಇನ್ನು ಅವಕಾಶ ಇದೆ.

  • Share this:

    ಬೆಂಗಳೂರಿನ  ಐಕಿಯ (IKEA- Bangalore) ಕಂಪನಿಯಲ್ಲಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳ ನೇಮಕಾತಿ (Ikea Jobs) ಪ್ರಕ್ರಿಯೆಗೆ ಕಂಪನಿ ಮುಂದಾಗಿದೆ. ಈಗಾಗಲೇ ಹುದ್ದೆ ಅಧಿಸೂಚನೆ ಪ್ರಕಟಿಸಲಾಗಿದ್ದು, ಇನ್ನು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗುತ್ತಿದೆ. ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಪ್ರತಿನಿತ್ಯ ಕಂಪನಿ ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ (Walk-in-interview) ನಡೆಸುತ್ತಿದೆ. ಸ್ಪೀಡನ್​ ಮೂಲದ ಕಂಪನಿಯಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 


    ಐಕಿಯ ಮಳಿಗೆಯಲ್ಲಿ ಕಾರ್ಯ ನಿರ್ವಹಿಸಲು ಪೂರ್ಣ ಕಾಲಿಕ ಮತ್ತು ಅರೆ ಕಾಲಿಕ ಸ್ಥಳೀಯರನ್ನು ನೇಮಿಸಿಕೊಳ್ಳುವ ಸಂಬಂಧ ಕಂಪನಿ ತನ್ನ ವೆಬ್​ಸೈಟ್​ನಲ್ಲಿ ಮಾಹಿತಿ ಪ್ರಕಟಿಸಿದೆ. ಆಸಕ್ತ ಮತ್ತು ಸ್ಥಳೀಯ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.


    ಹುದ್ದೆಯ ವಿವರ (Job Description)


    ಸಂಸ್ಥೆ: ಐಕಿಯ


    ಹುದ್ದೆಗಳು: ವಿವಿಧ ಮ್ಯಾನೇಜರ್​ ಹುದ್ದೆಗಳು


    ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಿಲ್ಲ


    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು


    ವೇತನ: ಐಕಿಯಾ ಕಂಪನಿ ನಿಯಮ ಅನುಸಾರ


    ಶೈಕ್ಷಣಿಕ ಅರ್ಹತೆ (Education Qualification):


    ಅಭ್ಯರ್ಥಿಗಳು ಹುದ್ದೆ ಅನುಸಾರ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಸಂಸ್ಥೆಯ ನಿಯಮಾವಳಿ ಅನುಸಾರ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು.
    ಕನ್ನಡ ಮತ್ತು ಇಂಗ್ಲಿಷ್​ನಲ್ಲಿನಲ್ಲಿ ಚೆನ್ನಾಗಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಹೊಂದಿರಬೇಕು.
    ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಸ್ಪೂರ್ತಿದಾಯಕವಾಗಿ ಕೆಲಸ ಮಾಡಬೇಕು.


    ಇದನ್ನು ಓದಿ: ಬೆಂಗಳೂರು ಕಾಫಿ ಬೋರ್ಡ್​ನಲ್ಲಿದೆ ಕೆಲಸ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ


    ಅರ್ಜಿ ಸಲ್ಲಿಕೆ (How To Apply)
    ಆನ್​ಲೈನ್​ ಮೂಲಕ


    ಆಯ್ಕೆ ವಿಧಾನ (Selection Procedure)
    ನೇರ ಸಂದರ್ಶನ


    ಪ್ರಮುಖ ದಿನಾಂಕ (Important  Dates)
    ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 26 ಜೂನ್​ 2022
    ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 2022


    ಪ್ರಮುಖ ಲಿಂಕ್​ಗಳು (Links)
    ಹುದ್ದೆಗಳ ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ಸೈಟ್​ :  ikea.com


    ಸ್ಥಳೀಯರಿಗೆ ಉದ್ಯೋಗ ನೀಡುವ ಗುರಿ


    ಉದ್ಯೋಗ ನೇಮಕಾತಿ ಸಂಬಂಧ ಮಾತನಾಡಿರುವ ಐಕಿಯ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಸಾನ್ ಪುಲ್ವರ್, ನಮ್ಮ ವ್ಯವಹಾರದ ಮೂಲಕ ಸ್ಥಳೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ನಾವು ಬದ್ಧರಾಗಿದ್ದೇವೆ. ಭಾರತದಲ್ಲಿ ಒಟ್ಟಾರೆ ಗೃಹೋಪಯೋಗಿ ಮಾರುಕಟ್ಟೆಯನ್ನು ಉತ್ತೇಜಿಸುವಲ್ಲಿ ಐಕಿಯ ಭಾರತವು ಪ್ರಬಲ ವ್ಯವಸ್ಥೆಯಾಗಿದೆ. ನಾವು ಅನೇಕ ಜನರಿಗೆ ಅವಕಾಶಗಳನ್ನು ಒದಗಿಸುತ್ತೇವೆ ಎಂದಿದ್ದಾರೆ


    ಇದನ್ನು ಓದಿ: ಬೆಂಗಳೂರು ಐಕಿಯ ಕಂಪನಿಯಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಸ್ಥಳೀಯರಿಗೆ ಮೊದಲ ಆದ್ಯತೆ


    ಅರ್ಜಿ ಸಲ್ಲಿಕೆ ವಿಧಾನ (Apply process)
    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.


    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.


    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ

    Published by:Seema R
    First published: