DCC Bank Jobs: ಬಾಗಲಕೋಟೆ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ, 110 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಾಗಲಕೋಟೆಯ ಡಿಸಿಸಿ ಬ್ಯಾಂಕ್‌ನಲ್ಲಿ ಖಾಲಿ ಇರುವ 110 ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಮಾಸಿಕ ವೇತನ ವಿವಿಧ ಹುದ್ದೆಗಳಿಗೆ ತಕ್ಕಂತೆ 27,650 ರೂ. ಗಳಿಂದ  78,200 ರೂಪಾಯಿವರೆಗೂ ಇದೆ. ಇನ್ನು  ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-04-2022 ಆಗಿದೆ. ಹಾಕಿದ್ರೆ ಯಾವ ಹುದ್ದೆಗಳು ಖಾಲಿ ಇವೆ? ಅರ್ಹತೆಗಳು ಏನು? ಅರ್ಜಿ ಸಲ್ಲಿಕೆಯ ವಿಧಾನ ಏನು ಅಂತ ತಿಳಿದುಕೊಳ್ಳಲು ಮುಂದೆ ಓದಿ

ಡಿಸಿಸಿ ಬ್ಯಾಂಕ್ ಬಾಗಲಕೋಟೆ

ಡಿಸಿಸಿ ಬ್ಯಾಂಕ್ ಬಾಗಲಕೋಟೆ

  • Share this:
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತವು (Bagalkot DCC Bank) ಇಲ್ಲಿ ಖಾಲಿ ಇರುವ 110 ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ (Notifications) ಹೊರಡಿಸಿದೆ. ಆಸಕ್ತರು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್, ಸಿವಿಲ್ ಇಂಜಿನಿಯರ್, ಗಣಕಯಂತ್ರಗಳ ಸಂಯೋಜಕರು, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, ಸಿಪಾಯಿ ಹಾಗೂ ವಾಹನ ಚಾಲಕನ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು (Candidates) ಅರ್ಜಿ (Application) ಸಲ್ಲಿಸಬಹುದು.  ಮಾಸಿಕ ವೇತನ ವಿವಿಧ ಹುದ್ದೆಗಳಿಗೆ ತಕ್ಕಂತೆ 27,650 ರೂ. ಗಳಿಂದ  78,200 ರೂಪಾಯಿವರೆಗೂ ಇದೆ. ಇನ್ನು  ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-04-2022 ಆಗಿದೆ. ಆನ್‌ಲೈನ್‌ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : www.bagalkotdccbank.com

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಕೆಲಸದ ಸ್ಥಳ ಬಾಗಲಕೋಟೆ ಆಗಿರುತ್ತದೆ































ಸಂಸ್ಥೆಡಿಸಿಸಿ ಬ್ಯಾಂಕ್, ಬಾಗಲಕೋಟೆ
ಹುದ್ದೆಯ ಹೆಸರುವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಕಟಣೆ ದಿನಾಂಕಮಾರ್ಚ್ 11, 2022
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕಏಪ್ರಿಲ್ 4, 2022
ಉದ್ಯೋಗದ ವಿವರಫುಲ್ ಟೈಂ
ಮಾಸಿಕ ವೇತನ27,650 ರೂ. ಗಳಿಂದ  78,200 ರೂ
ಕೆಲಸದ ಸ್ಥಳಬಾಗಲಕೋಟೆ

ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳು

ಸಾಫ್ಟ್‌ವೇರ್ ಇಂಜಿನಿಯರ್

ಬಿಇ ಇನ್‌ ಕಂಪ್ಯೂಟರ್‌ ಸೈನ್ಸ್‌, ಬಿಸಿಎ ಪಾಸ್‌. ಬ್ಯಾಂಕಿಂಗ್ ಸಿಬಿಎಸ್ ತಂತ್ರಾಂಶಕ್ಕೆ ಸಂಬಂಧಿಸಿದ ಕನಿಷ್ಠ 5 ವರ್ಷ ತಾಂತ್ರಿಕ ಸಲಹೆಗಾರರಾಗಿ ಸಂಸ್ಥೆಯ ಅನುಭವ ಹೊಂದಿರಬೇಕು. ಹಾಗೂ ಜಾವಾ ಭಾಷೆ ಮತ್ತು ಒರಾಕಲ್ ಜ್ಞಾನ ಹೊಂದಿರಬೇಕು.

ಸಿವಿಲ್ ಇಂಜಿನಿಯರ್

ಬಿಇ ಸಿವಿಲ್ ಜತೆಗೆ ಕನಿಷ್ಠ 5 ವರ್ಷ ತಾಂತ್ರಿಕ ಸಲಹೆಗಾರರಾಗಿ ಕರ್ತವ್ಯ ಅನುಭವ ಹೊಂದಿರಬೇಕು.

ಗಣಕಯಂತ್ರಗಳ ಸಂಯೋಜಕರು

ಬಿಇ / ಬಿ.ಟೆಕ್ ಕಂಪ್ಯೂಟರ್ ಸೈನ್ಸ್‌ / ಇಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್‌, ಬಿಸಿಎ, ಬಿಎಸ್ಸಿ ನಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಪದವಿ ಪಡೆದಿರಬೇಕು.

ಪ್ರಥಮ ದರ್ಜೆ ಸಹಾಯಕರು

ಯಾವುದೇ ಪದವಿ ಪಾಸ್‌. ಜತೆಗೆ ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು. ಹಾಗೂ ಕಂಪ್ಯೂಟರ್ ಜ್ಞಾನ ಇರಬೇಕು.

ಇದನ್ನೂ ಓದಿ: Federal Bank Recruitment: ನಿರುದ್ಯೋಗಿಗಳಿಗೆ ಇಲ್ಲಿದೆ ಅವಕಾಶ - ಸ್ವೀಪರ್ ಹುದ್ದೆಗೆ ಅರ್ಜಿ ಆಹ್ವಾನ

ದ್ವಿತೀಯ ದರ್ಜೆ ಸಹಾಯಕರು - ದ್ವಿತೀಯ ಪಿಯುಸಿ ಪಾಸ್‌. ಜತೆಗೆ ಕನ್ನಡ ಓದಲು , ಬರೆಯಲು, ಮಾತನಾಡಲು ತಿಳಿದಿರಬೇಕು. ಕಂಪ್ಯೂಟರ್ ಆಪರೇಟಿಂಗ್ ತಿಳಿದಿರಬೇಕು.

ಸಿಪಾಯಿ  - ಎಸ್‌ಎಸ್‌ಎಲ್‌ಸಿ ಪಾಸ್‌. ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

ವಾಹನ ಚಾಲಕ - ಎಸ್‌ಎಸ್‌ಎಲ್‌ಸಿ ಪಾಸ್‌. ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಲಘು ವಾಹನ ಚಾಲನೆ ಪರವಾನಿಗೆಯೊಂದಿಗೆ 5 ವರ್ಷ ಅನುಭವ ಹೊಂದಿರಬೇಕು.

ವಯೋಮಿತಿ ಅರ್ಹತೆಗಳು

- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ.
- ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ.
- ಎಸ್‌

ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ.
- ಮಾಜಿ ಸೈನಿಕ ಅಭ್ಯರ್ಥಿಗಳು ಕನಿಷ್ಠ 15 ವರ್ಷ ಸೇವೆ ಸಲ್ಲಿಸಿರಬೇಕು. 45 ವರ್ಷ ಗರಿಷ್ಠ ಮೀರಿರಬಾರದು.
- ಅಂಗವಿಕಲ / ವಿಧವೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಮೇಲ್ಕಂಡಂತೆ ವರ್ಗವಾರು ನಿಗಧಿಪಡಿಸಿರುವ ವಯೋಮಿತಿಗೆ 10 ವರ್ಷ ಸೇರಿಸಿ ಪರಿಗಣಿಸಲಾಗುವುದು.

ಅರ್ಜಿ ಶುಲ್ಕ ಮಾಹಿತಿ

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.1000.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.500.
ಅಂಗವಿಕಲ / ವಿಧವೆ ಅಭ್ಯರ್ಥಿಗಳಿಗೆ ರೂ.500.

ನೇಮಕಾತಿ ವಿಧಾನ

ಅರ್ಜಿ ಸಲ್ಲಿಸಿದ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.

ಆನ್‌ಲೈನ್‌ ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : www.bagalkotdccbank.com

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 11-03-2022
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-04-2022

ಇದನ್ನೂ ಓದಿ: Gram Panchayat Jobs: ಲೈಬ್ರರಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ - ಮಾರ್ಚ್ 14 ಕೊನೆಯ ದಿನ

ಅಗತ್ಯ ದಾಖಲೆಗಳು

ಆನ್‌ಲೈನ್‌ ಅರ್ಜಿ ವೇಳೆ ಈ ಕೆಳಕಂಡ ಪ್ರಮಾಣ ಪತ್ರಗಳನ್ನು ಸ್ವಯಂ ದೃಢೀಕರಿಸಿ, ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಹಾಗೂ ಮೂಲ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಸದರಿ ಮೂಲ ದಾಖಲೆಗಳನ್ನು ಹಾಜರುಪಡಿಸುವುದು.
- ಪಾಸ್‌ಪೋರ್ಟ್‌ ಅಳಕೆಯ ಭಾವಚಿತ್ರ
- ಹುದ್ದೆಗಳಿಗೆ ನಿಗಧಿತ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
- ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ. (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ / ವರ್ಗಾವಣೆ ಪ್ರಮಾಣ ಪತ್ರ)
- ಮೀಸಲಾತಿ ಕೋರಿದ್ದಲ್ಲಿ ಪ್ರಮಾಣ ಪತ್ರಗಳು.
- ಸೇವಾ ಅನುಭವ ಪ್ರಮಾಣ ಪತ್ರ.
Published by:Annappa Achari
First published: