Job in Sainik School Kodagu: ಕೊಡಗು ಸೈನಿಕ ಶಾಲೆಯಲ್ಲಿ ನೇಮಕಾತಿ; ಬಿಎಡ್​ ಆಗಿದ್ರೆ ಅರ್ಜಿ ಸಲ್ಲಿಸಿ

ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಟಿಜಿಟಿ ಮತ್ತು ಕ್ರಾಫ್ಟ್​ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳನ್ನು ಪ್ರಸಕ್ತ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 15 ಆಗಿದೆ.

    ಸಂಸ್ಥೆಯ ಹೆಸರು: ಸೈನಿಕ ಶಾಲೆ ಕೊಡಗು
    ಹುದ್ದೆಯ ಹೆಸರು: ಟಿಜಿಟಿ, ಕ್ರಾಫ್ಟ್ ಬೋಧಕ
    ಹುದ್ದೆಗಳ ಸಂಖ್ಯೆ: 5
    ಉದ್ಯೋಗ ಸ್ಥಳ: ಕೊಡಗು - ಕರ್ನಾಟಕ
    ವೇತನ: 30800-44900 ರೂ. ಪ್ರತಿ ತಿಂಗಳು













































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿವೇತನ
    ಟಿಜಿಟಿ-ಇಂಗ್ಲಿಷ್1  ಪದವಿ ಬಿಎಡ್​​ಕನಿಷ್ಟ 21- ಗರಿಷ್ಟ 3544900
    ಟಿಜಿಟಿ-ಹಿಂದಿ1ಪದವಿ ಬಿಎಡ್​​ಕನಿಷ್ಟ 21- ಗರಿಷ್ಟ 4034100 ರೂ ಮಾಸಿಕ
    ಕರಕುಶಲ ಬೋಧಕ110ನೇ ತರಗತಿಕನಿಷ್ಟ 21- ಗರಿಷ್ಟ 3530800 ರೂ ಮಾಸಿಕ
    ಬ್ಯಾಂಡ್ ಮಾಸ್ಟರ್1ಸೈನಿಕ ಶಾಲೆ ನಿಯಮ ಅನುಸಾರಕನಿಷ್ಟ 21- ಗರಿಷ್ಟ 3530800 ರೂ ಮಾಸಿಕ
    ಕಚೇರಿ ಅಧೀಕ್ಷಕರು1ಪದವಿಕನಿಷ್ಟ 21- ಗರಿಷ್ಟ 5032000 ರೂ ಮಾಸಿಕ

    ಅರ್ಜಿ ಶುಲ್ಕ
    ಟಿಜಿಟಿ (ಇಂಗ್ಲಿಷ್) ಹುದ್ದೆಗೆ: 500 ರೂ
    ಪ.ಪಂ ಅಭ್ಯರ್ಥಿಗಳು:  ಶುಲ್ಕ ವಿನಾಯಿತಿ

    ಕ್ರಾಫ್ಟ್ ಬೋಧಕ, ಬ್ಯಾಂಡ್ ಮಾಸ್ಟರ್, ಕಚೇರಿ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ:
    ಎಲ್ಲಾ ಇತರ ಅಭ್ಯರ್ಥಿಗಳು: 250 ರೂ.
    ಪ.ಪಂ ಅಭ್ಯರ್ಥಿಗಳು: ಇಲ್ಲ

    ಇದನ್ನು ಓದಿ: ಗ್ರೂಪ್​ ಬಿ ಹುದ್ದೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

    ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

    ಅರ್ಜಿ ಸಲ್ಲಿಕೆ: ಆಫ್​ಲೈನ್​​

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಪ್ರಾತ್ಯಕ್ಷಿಕೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಸುವ ವಿಳಾಸ
    ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು, ಅಂಚೆ: ಕೂಡಿಗೆ, ಕುಶಾಲನಗರ ತಾಲೂಕು, ಜಿಲ್ಲೆ. ಕೊಡಗು, ಕರ್ನಾಟಕ, ಪಿನ್ - 571232

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18 ಸೆಪ್ಟೆಂಬರ್​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2022

    ಇದನ್ನು ಓದಿ: ಸುರತ್ಕಲ್​ ಎನ್​ಐಟಿಕೆಯಲ್ಲಿದೆ ಕೆಲಸ; ಪ್ರಾಜೆಕ್ಟ್​ ಫೆಲೋ ಹುದ್ದೆಯ ಮಾಹಿತಿ ಇಲ್ಲಿದೆ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: sainikschoolkodagu.edu.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

    - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ತಲಪುವಂತೆ ನೋಡಿಕೊಳ್ಳಿ
    Published by:Seema R
    First published: