• ಹೋಂ
  • »
  • ನ್ಯೂಸ್
  • »
  • Jobs
  • »
  • Job Alert: ಈ ಕಂಪನಿಗಳಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ- ಬೇಕಿದ್ದರೆ ನೀವೂ ಅಪ್ಲೈ ಮಾಡಿ!

Job Alert: ಈ ಕಂಪನಿಗಳಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ- ಬೇಕಿದ್ದರೆ ನೀವೂ ಅಪ್ಲೈ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ವಾರಾಂತ್ಯವೂ ನೀವು ಮೂರು ದಿನಗಳ ರಜೆಯನ್ನು ಪಡೆಯಬಹುದು. ಇದರಿಂದ ನಾಲ್ಕು-ದಿನದ ಕೆಲಸದ ವಾರವು ವರ್ಷಕ್ಕೆ ಹೆಚ್ಚುವರಿ 40 ಪಾವತಿಸಿದ ದಿನಗಳ ರಜೆಯಾಗಿರುತ್ತದೆ.

  • Trending Desk
  • 2-MIN READ
  • Last Updated :
  • Share this:

ಕೆನಡಾದಲ್ಲಿ(Canada) ಕೆಲಸ ಹುಡುಕುವುದು ಕೆನಡಾಕ್ಕೆ ಹೋಗಿ ನೆಲೆಸುವುದು ಬಹಳ ಜನರ ಕನಸು(Dream). ಇನ್ನೂ ಹೆಚ್ಚಿನದಾಗಿ ಅಲ್ಲಿನ ಅನೇಕ ಕಂಪನಿಗಳು ವಾರಕ್ಕೆ ಕೇವಲ ನಾಲ್ಕು ದಿನಗಳ ಕಾಲ ಕೆಲಸ ಮಾಡುವಂಥ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಹೀಗಾಗಿ ನೀವು ಕೆನಡಾದಲ್ಲಿ ಹೊಸ ಉದ್ಯೋಗವನ್ನು(New Job) ಹುಡುಕುತ್ತಿದ್ದರೆ ವಾರಕ್ಕೆ ನಾಲ್ಕೇ ದಿನ ಕೆಲಸ ಮಾಡುವಂಥ ಕಂಪನಿಗಳನ್ನು(Companies) ನೀವು ಪರಿಗಣಿಸಬಹುದು.


ಕೆನಡಾದಲ್ಲಿ ಕೆಲವು ಕಂಪನಿಗಳು ಶುಕ್ರವಾರದಂದೂ ವೀಕಾಫ್‌ ನೀಡುತ್ತವೆ. ಹಾಗಾಗಿ ಸೋಮವಾರದಿಂದ ಗುರುವಾರದ ವರೆಗೆ ಮಾತ್ರ ಕೆಲಸದ ದಿನಗಳನ್ನಾಗಿ ಪರಿಗಣಿಸಿವೆ. ಹೀಗಾಗಿ ಪ್ರತಿ ವಾರಾಂತ್ಯವೂ ನೀವು ಮೂರು ದಿನಗಳ ರಜೆಯನ್ನು ಪಡೆಯಬಹುದು. ಇದರಿಂದ ನಾಲ್ಕು-ದಿನದ ಕೆಲಸದ ವಾರವು ವರ್ಷಕ್ಕೆ ಹೆಚ್ಚುವರಿ 40 ಪಾವತಿಸಿದ ದಿನಗಳ ರಜೆಯಾಗಿರುತ್ತದೆ.


ಕೆನಡಾದ ಆರು ಕಂಪನಿಗಳು ನಾಲ್ಕು-ದಿನದ ಕೆಲಸದ ವಾರಗಳನ್ನು ಅಳವಡಿಸಿಕೊಂಡಿದ್ದು ಸದ್ಯ ನೇಮಕಾತಿಯನ್ನೂ ನಡೆಸುತ್ತಿವೆ.


1.ಪ್ರಾಕ್ಸಿಸ್ (Praxis): ಟೊರೊಂಟೊ ಮೂಲದ ಮಾರ್ಕೆಟಿಂಗ್ ಸಂವಹನ ಸಂಸ್ಥೆಯಾದ ಪ್ರಾಕ್ಸಿಸ್ ಕಳೆದ ವರ್ಷ ವಾರದಲ್ಲಿ ನಾಲ್ಕು ದಿನಗಳ ಕಾಲ ಮಾತ್ರ ಕೆಲಸ ಮಾಡುವ ಸಿಸ್ಟಂಅನ್ನು ಪ್ರಾಯೋಗಿಕವಾಗಿ ನಡೆಸುವುದಾಗಿ ಘೋಷಿಸಿತು.


ಕಳೆದ ವರ್ಷ ಜನರಲ್ ಮ್ಯಾನೇಜರ್ ಮ್ಯಾಟ್ ಜುನಿಪರ್ ಅವರ ಪ್ರಕಾರ, ಉದ್ಯೋಗಿಗಳಿಗೆ ವೇತನದಲ್ಲಿ ಕಡಿತ ಮಾಡುವುದಿಲ್ಲ. ಬದಲಾಗಿ, ಕಂಪನಿಯು ಉತ್ತಮವಾಗಿ ಕೆಲಸ ಮಾಡಲು ಕಲಿಯುತ್ತಿದೆ ಎಂದು ಹೇಳಿದ್ದರು.


ಇದನ್ನೂ ಓದಿ: Teacher Training: ತರಬೇತಿಗಾಗಿ 36 ಶಾಲಾ ಪ್ರಾಂಶುಪಾಲರನ್ನು ಸಿಂಗಾಪುರಕ್ಕೆ ಕಳುಹಿಸಲು ಸಜ್ಜಾದ ಪಂಜಾಬ್ ಸರ್ಕಾರ


ಇನ್ನು ಈ ಕಂಪನಿಯು ಪ್ರಸ್ತುತ ದ್ವಿಭಾಷಾ ಕಮ್ಯುನಿಟಿ ಮ್ಯಾನೇಜರ್‌ ಅನ್ನು ನೇಮಿಸಿಕೊಳ್ಳುತ್ತಿದೆ. ಅವರು ಇಂಗ್ಲಿಷ್ ಮತ್ತು ಫ್ರೆಂಚ್ ಎರಡೂ ಭಾಷೆಗಳನ್ನು ಬಲ್ಲವರಾಗಿರಬೇಕು.


2.ಈಡೋಸ್ (Eidos): ವೀಡಿಯೊ ಗೇಮ್ ಡೆವಲಪರ್ ಈಡೋಸ್ ಕಂಪನಿಯು 2021ರಲ್ಲಿ ನಾಲ್ಕು ದಿನದ ಕೆಲಸದ ವೇಳಾಪಟ್ಟಿಯನ್ನು ಬದಲಾಯಿಸುವುದಾಗಿ ಘೋಷಿಸಿತು.


ಶುಕ್ರವಾರದಂದು ರಜೆ ಘೋಷಿಸುವುದರೊಂದಿಗೆ ವಾರಕ್ಕೆ 40-ಗಂಟೆಗಳ ಬದಲಾಗಿ 32-ಗಂಟೆಗಳಷ್ಟೇ ಕೆಲಸ ಮಾಡಬಹುದು ಎಂಬುದಾಗಿ ಹೇಳಿತು. ಕಂಪನಿಯು ಅನಿಮೇಷನ್, ವಿನ್ಯಾಸ ಮತ್ತು ಪ್ರೋಗ್ರಾಮಿಂಗ್‌ನಂತಹ ಕ್ಷೇತ್ರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಹೊಂದಿದೆ.


3.ದ ಲೀಡರ್‌ಶಿಪ್‌ ಏಜೆನ್ಸಿ (The Leadership Agency): ಟೊರೊಂಟೊ ಮೂಲದ ನೇಮಕಾತಿ ಕಂಪನಿ ಲೀಡರ್‌ಶಿಪ್ ಏಜೆನ್ಸಿ ಅಕ್ಟೋಬರ್ 2020ರಲ್ಲಿ ವಾರಕ್ಕೆ ನಾಲ್ಕು ದಿನಗಳ ಕೆಲಸ ಬಗ್ಗೆ ಘೋಷಿಸಿದೆ.


ಅಲ್ಲದೇ ಇದರಿಂದಾಗಿ ಒಟ್ಟಾರೆ ಪರಿಣಾಮವು ನಿಜವಾಗಿಯೂ ಧನಾತ್ಮಕವಾಗಿದೆ ಎಂದು ಹೇಳಿದೆ. ಕಂಪನಿಯು ಈಗ ಸೋಮವಾರದಿಂದ ಗುರುವಾರದವರೆಗೆ ನಾಲ್ಕು ದಿನಗಳ ಕೆಲಸದ ವೇಳಾಪಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತದೆ.


ಪ್ರಸ್ತುತ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿ ಹಲವಾರು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.


4.ಬ್ಲ್ಯಾಕ್ ಬರ್ಡ್ ಇಂಟರಾಕ್ಟಿವ್ (Blackbird Interactive): ವೀಡಿಯೋ ಗೇಮ್ ಡೆವಲಪರ್ ಬ್ಲ್ಯಾಕ್‌ಬರ್ಡ್ ಇಂಟರಾಕ್ಟಿವ್ ಕಂಪನಿಯಲ್ಲಿ 2022ರ ಮೊದಲ ತಿಂಗಳುಗಳಲ್ಲಿ ವಾರಕ್ಕೆ ನಾಲ್ಕು ದಿನಗಳ ಕೆಲಸ ಎಂದು ಘೋಷಿಸಲಾಗಿದೆ.


ಉದ್ಯೋಗಿಗಳಿಗೆ ಮನೆಯಿಂದ ಅಥವಾ ಸ್ಟುಡಿಯೋದಲ್ಲಿ ಹೀಗೆ ಎರಡೂ ಕಡೆಗಳಲ್ಲಿ ಕೆಲಸ ಮಾಡುವಂಥ ಆಯ್ಕೆಯನ್ನು ನೀಡಲಾಗಿದೆ. ಕಂಪನಿಯು ವ್ಯಾಂಕೋವರ್‌ನಲ್ಲಿ ವಿನ್ಯಾಸ ಮತ್ತು ಪ್ರೋಗ್ರಾಮಿಂಗ್‌ನಂತಹ ಕ್ಷೇತ್ರಗಳಲ್ಲಿ ಹಲವಾರು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಅಲ್ಲದೇ ಇದು ಸಾಮಾನ್ಯ ಅರ್ಜಿಗಳನ್ನು ಸಹ ಸ್ವೀಕರಿಸುತ್ತಿದೆ.


5.ಡೇವಿಡ್ ಸುಜುಕಿ ಫೌಂಡೇಶನ್ (David Suzuki Foundation): ಡೇವಿಡ್ ಸುಜುಕಿ ಫೌಂಡೇಶನ್ ಪ್ರಾರಂಭದಿಂದಲೂ ಅಂದರೆ 1990 ರಿಂದ ನಾಲ್ಕು ದಿನಗಳ ಕೆಲಸದ ವಾರವನ್ನು ಹೊಂದಿದೆ.


ಇದನ್ನೂ ಓದಿ: Preschool Education: ನಿಮ್ಮ ಮಕ್ಕಳ ಕಲಿಕೆಯ ಮೇಲೆ ನಿಂತಿದೆ ದೇಶದ ಭವಿಷ್ಯ


ಈ ಕಂಪನಿಯ ವೆಬ್‌ಸೈಟ್‌ನಲ್ಲಿ ಕಡಿಮೆ ಕೆಲಸದ ವಾರವನ್ನು ಅಳವಡಿಸಿಕೊಳ್ಳುವುದರಿಂದ ಸಿಬ್ಬಂದಿಯ ಜೀವನವನ್ನು ಉತ್ತಮಗೊಳಿಸಿದೆ ಎಂದು ವಿವರಿಸಲಾಗಿದೆ.


ಉದ್ಯೋಗಿಗಳಿಗೆ ವಿಶ್ರಾಂತಿ, ಹವ್ಯಾಸಗಳಿಗಾಗಿ, ಪ್ರಕೃತಿಯನ್ನು ಅನ್ವೇಷಿಸಲು, ಕುಟುಂಬ ಮತ್ತು ಸ್ನೇಹಿತರ ಜೊತೆಗೆ ಸಮಯ ಕಳೆಯಲು ಸಹಕಾರಿಯಾಗಿದೆ ಎಂದು ಹೇಳಲಾಗಿದೆ.


ಈ ಕಂಪನಿಯು ಸದ್ಯ ಟೊರೊಂಟೊ, ವ್ಯಾಂಕೋವರ್ ಮತ್ತು ಮಾಂಟ್ರಿಯಲ್‌ನಲ್ಲಿ ಸಂವಹನ ತಜ್ಞರು ಮತ್ತು ಡಿಜಿಟಲ್ ತಜ್ಞರನ್ನು ಒಳಗೊಂಡಂತೆ ಹಲವು ರೋಲ್‌ಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.



6.ಜುನೋ ಕಾಲೇಜ್ ಆಫ್ ಟೆಕ್ನಾಲಜಿ (Juno College of Technology): 2021 ರಲ್ಲಿ, ಜುನೋ ಕಾಲೇಜ್ ಆಫ್ ಟೆಕ್ನಾಲಜಿ 2022 ರಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ ಎಂಬುದಾಗಿ ಘೋಷಿಸಿತು.


ಈಗ, ಟೆಕ್ ಕಂಪನಿಯಲ್ಲಿನ ಎಲ್ಲಾ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನಗಳು ಮಾತ್ರ ಕೆಲಸ ಮಾಡುತ್ತಾರೆ. ಅಂದಹಾಗೆ ಕಂಪನಿಯು ವೆಬ್ ಡೆವಲಪ್‌ಮೆಂಟ್ ಬೋಧಕ ಮತ್ತು ವೃತ್ತಿ ಯಶಸ್ಸಿನ ತಜ್ಞರನ್ನು(career success specialist)ನೇಮಿಸಿಕೊಳ್ಳುತ್ತಿದೆ. ಅಂದಹಾಗೆ ಅವರು ಸಾಮಾನ್ಯ ಅರ್ಜಿಗಳನ್ನು ಸಹ ಸ್ವೀಕರಿಸುತ್ತಿದ್ದಾರೆ. 

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು