• Home
  • »
  • News
  • »
  • jobs
  • »
  • Job Alert: ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ ಸರ್ಕಾರಿ ಉದ್ಯೋಗ- ಎಕ್ಸಾಂ/ ಇಂಟರ್​ವ್ಯೂ ಇರಲ್ಲ

Job Alert: ಡಿಗ್ರಿ ಮುಗಿಸಿ ಕೆಲಸ ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ ಸರ್ಕಾರಿ ಉದ್ಯೋಗ- ಎಕ್ಸಾಂ/ ಇಂಟರ್​ವ್ಯೂ ಇರಲ್ಲ

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.

  • News18 Kannada
  • 2-MIN READ
  • Last Updated :
  • Raichur, India
  • Share this:

    Raichur Zilla Panchayath Recruitment 2022: ರಾಯಚೂರು ಜಿಲ್ಲಾ ಪಂಚಾಯತ್​(Raichur Zilla Panchayath)ನಲ್ಲಿ ಒಟ್ಟು 11 ಟೆಕ್ನಿಷಿಯನ್ ಅಸಿಸ್ಟೆಂಟ್(Technician Assistant) ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಯಚೂರಿನ ಸ್ಥಳೀಯ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಜೊತೆಗೆ ಸರ್ಕಾರಿ ಉದ್ಯೋಗ(Government Job) ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಡಿಸೆಂಬರ್ 3, 2022 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಸಕ್ತರು ಈ ಕೂಡಲೇ ಆನ್​ಲೈನ್(Online) ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆರಾಯಚೂರು ಜಿಲ್ಲಾ ಪಂಚಾಯತ್
    ಹುದ್ದೆಟೆಕ್ನಿಷಿಯನ್ ಅಸಿಸ್ಟೆಂಟ್
    ಒಟ್ಟು ಹುದ್ದೆ11
    ಉದ್ಯೋಗದ ಸ್ಥಳರಾಯಚೂರು
    ವಿದ್ಯಾರ್ಹತೆಪದವಿ
    ವೇತನಮಾಸಿಕ ₹ 22,000-24,000

    ಪೋಸ್ಟ್​ ಆಧಾರಿತ ಎಷ್ಟೆಷ್ಟು ಹುದ್ದೆಗಳಿವೆ?
    ಹುದ್ದೆಯ ಹೆಸರುಹುದ್ದೆಯ ಸಂಖ್ಯೆ
    ಟೆಕ್ನಿಷಿಯನ್ ಅಸಿಸ್ಟೆಂಟ್ (ಸಿವಿಲ್)2
    ಟೆಕ್ನಿಷಿಯನ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)1
    ಟೆಕ್ನಿಷಿಯನ್ ಅಸಿಸ್ಟೆಂಟ್ (ಫಾರೆಸ್ಟ್​)2
    ಟೆಕ್ನಿಷಿಯನ್ ಅಸಿಸ್ಟೆಂಟ್ (ಅಗ್ರಿಕಲ್ಚರ್)6

    ವಿದ್ಯಾರ್ಹತೆ ಏನಿರಬೇಕು?
    ಹುದ್ದೆಯ ಹೆಸರುವಿದ್ಯಾರ್ಹತೆ
    ಟೆಕ್ನಿಷಿಯನ್ ಅಸಿಸ್ಟೆಂಟ್ (ಸಿವಿಲ್)ಡಿಪ್ಲೋಮಾ, ಸಿವಿಲ್​ನಲ್ಲಿ ಬಿಇ/ಬಿ.ಟೆಕ್
    ಟೆಕ್ನಿಷಿಯನ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)ಹಾರ್ಟಿಕಲ್ಚರ್​​ನಲ್ಲಿ ಪದವಿ
    ಟೆಕ್ನಿಷಿಯನ್ ಅಸಿಸ್ಟೆಂಟ್ (ಫಾರೆಸ್ಟ್​)ಫಾರೆಸ್ಟ್​​ನಲ್ಲಿ ಪದವಿ
    ಟೆಕ್ನಿಷಿಯನ್ ಅಸಿಸ್ಟೆಂಟ್ (ಅಗ್ರಿಕಲ್ಚರ್)ಅಗ್ರಿಕಲ್ಚರ್​​ನಲ್ಲಿ ಪದವಿ


    ಸಂಬಳ ಎಷ್ಟು ಕೊಡಲಾಗುತ್ತದೆ?


    ಟೆಕ್ನಿಷಿಯನ್ ಅಸಿಸ್ಟೆಂಟ್ (ಸಿವಿಲ್)- ಮಾಸಿಕ ₹22,000-24,000
    ಟೆಕ್ನಿಷಿಯನ್ ಅಸಿಸ್ಟೆಂಟ್ (ಹಾರ್ಟಿಕಲ್ಚರ್)-ಮಾಸಿಕ ₹ 24,000
    ಟೆಕ್ನಿಷಿಯನ್ ಅಸಿಸ್ಟೆಂಟ್ (ಫಾರೆಸ್ಟ್​)- ಮಾಸಿಕ ₹ 24,000
    ಟೆಕ್ನಿಷಿಯನ್ ಅಸಿಸ್ಟೆಂಟ್ (ಅಗ್ರಿಕಲ್ಚರ್)- ಮಾಸಿಕ ₹ 24,000


    ಅನುಭವ ಏನಿರಬೇಕು?
    ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು.


    ಇದನ್ನೂ ಓದಿ: Central Government Job: ತಿಂಗಳಿಗೆ ₹ 25,000 ಸಂಬಳ- 10th, ಪಿಯುಸಿ ಪಾಸಾಗಿದ್ರೆ ಕೇಂದ್ರ ಸರ್ಕಾರದ ಉದ್ಯೋಗ


    ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?
    ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.


    ಆಯ್ಕೆ ಪ್ರಕ್ರಿಯೆ:
    ಅಭ್ಯರ್ಥಿಗಳ ಮೆರಿಟ್ ಲಿಸ್ಟ್​ ಹಾಗೂ ಅನುಭವದ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:

    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 03/12/2022
    ದಾಖಲಾತಿ ಪರಿಶೀಲನೆ ನಡೆಯುವ ದಿನ: 12/12/2022
    ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ: 15/12/2022
    ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ದಿನಾಂಕ: ಡಿಸೆಂಬರ್ 16ರಿಂದ 23
    ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸುವ ದಿನಾಂಕ ಮತ್ತು ಅಂತಿಮ ಆಯ್ಕೆ ಪಟ್ಟಿಯ ಪ್ರಕಟಣೆ: 28/12/2022

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು