• Home
  • »
  • News
  • »
  • jobs
  • »
  • Job Alert: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ, ತಿಂಗಳಿಗೆ 40 ಸಾವಿರ ಸಂಬಳ

Job Alert: ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಇಲ್ಲಿದೆ ಅವಕಾಶ, ತಿಂಗಳಿಗೆ 40 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

2022 Government job: ಕರ್ನಾಟಕ ರಾಜ್ಯ ಮಾನವ ಹಕ್ಕು (Karnataka State Human Rights)  ವತಿಯಿಂದ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿ ಸೂಚನೆ ಬಿಡುಗಡೆ ಮಾಡಲಾಗಿದೆ.

  • Share this:

ಕರ್ನಾಟಕ ರಾಜ್ಯ ಮಾನವ ಹಕ್ಕು (Karnataka State Human Rights)  ವತಿಯಿಂದ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿ ಸೂಚನೆ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅರ್ಹ ಹಾಗೂ ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟಂತಹ ವೇತನ, ಶ್ರೇಣಿ, ವಯೋಮಿತಿ, ವಿದ್ಯಾರ್ಥಿ, ಅರ್ಜಿ ಶುಲ್ಕ, ಹುದ್ದೆಗಳ ವಿವರಗಳನ್ನು ಮತ್ತು ಉಳಿದ ಎಲ್ಲಾ ಮಾಹಿತಿಗಳನ್ನು ಅಧಿಸೂಚನೆಯಲ್ಲಿ (Notification)  ವಿವರಿಸಲಾಗಿದೆ. ಪ್ರತಿಯೊಂದು ಕೂಡ ಎಚ್ಚರಿಕೆಯಿಂದ ಓದಿ ನಂತರ ಅರ್ಜಿ ಸಲ್ಲಿಸಬಹುದು.

      ಇಲಾಖೆ    ಹೆಸರು     ಕರ್ನಾಟಕ ರಾಜ್ಯ ಮಾನವ ಹಕ್ಕುಗಳ    ಆಯೋಗ          
ಹುದ್ದೆಗಳ ಹೆಸರು   ಸಹಾಯಕರು, ಕಾನೂನು ಸಹಾಯಕರು/ ಸಂಶೋಧನಾ ಸಹಾಯಕರು, ಸಹಾಯಕರು, ಶೀಘ್ರಲಿಪಿಗಾರರು
ಒಟ್ಟು ಹುದ್ದೆಗಳು 07
   ಅರ್ಜಿ ಸಲ್ಲಿಸುವುದುಆನ್ಲೈನ್


ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಲೆಕ್ಕಾಧೀಕ್ಷಕರು 1               1
ತೀರ್ಪು ಬರಹಗಾರರು                1
ಹಿರಿಯ ಸಹಾಯಕರು                1
ಕಾನೂನು ಸಹಾಯಕರು                 1
ಸಹಾಯಕರು                  1
ಶೀಘ್ರಲಿಪಿಗಾರರು                   2

ಇದನ್ನೂ ಓದಿ: ಭಾರತೀಯ ಹವಾಮಾನ ಇಲಾಖೆಯ 990 ಹುದ್ದೆ ಭರ್ತಿಗೆ ಎಸ್​ಎಸ್​ಸಿ ಅಧಿಸೂಚನೆ ಪ್ರಕಟ


ವಿದ್ಯಾರ್ಹತೆ


ಲೆಕ್ಕಾಧೀಕ್ಷಕರು ಹುದ್ದೆಗಳಿಗೆ ಅಭ್ಯರ್ಥಿಗಳು  - ವಾಣಿಜ್ಯ ಪದವಿ ಪಡೆದಿರಬೇಕು ಹಾಗೂ ಕೆಲಸದ ಅನುಭವ ಹೊಂದಿರಬೇಕು.


ತೀರ್ಪು ಬರಹಗಾರರು ಹುದ್ದೆಗಳಿಗೆ ಅಭ್ಯರ್ಥಿಗಳು- ಕಾನೂನು ಪದವಿ ಹೊಂದಿರಬೇಕು. ಎಲ್. ಎಲ್.ಎಂ ಪದವಿ ಹೊಂದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಉಚ್ಚ ನ್ಯಾಯಾಲಯ ಅಥವಾ ಇದರ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.


ಹಿರಿಯ ಸಹಾಯಕರು ಅಥವಾ ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು- ಪದವಿ ಪಡೆದಿರಬೇಕು ಹಾಗೂ ಕೆಲಸದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.


  ಕಂಪ್ಯೂಟರ್ ಜ್ಞಾನ ಹೊಂದಿರಬೇಕು.


ಕಾನೂನು ಸಹಾಯಕರು ಹುದ್ದೆಗಳಿಗೆ ಅಭ್ಯರ್ಥಿಗಳು- ಕಾನೂನು ಪದವಿ ಹೊಂದಿರಬೇಕು ಮತ್ತು ಕಾನೂನು ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.


ಶೀಘ್ರ ಲಿಪಿಕಾರರು ಹುದ್ದೆಗಳಿಗೆ ಅಭ್ಯರ್ಥಿಗಳು- ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ಪಿಯುಸಿ  ಉತ್ತೀರ್ಣರಾಗಿರಬೇಕು.


ಇದನ್ನೂ ಓದಿ: ಸಹಾಯಕ ಪ್ರಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 57700 ರೂ ವೇತನ


ವಯೋಮಿತಿ


ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ನೇಮಕಾತಿ ಅದೇ ಸೂಚನೆಯ ಪ್ರಕಾರ ಅಭ್ಯರ್ಥಿಗಳು 62 ವರ್ಷ ವಯೋಮಾನ ಒಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.


ವೇತನ ಶ್ರೇಣಿ


ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ನೇಮಕಾತಿ ಸೂಚನೆಯ ಪ್ರಕಾರ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ ರೂ.27,650- 40,900 ವೇತನ ನಿಗದಿಪಡಿಸಲಾಗಿದೆ.


ಅರ್ಜಿ ಶುಲ್ಕ ಇರುವುದಿಲ್ಲ


ಅರ್ಜಿ ಸಲ್ಲಿಸುವ ವಿಳಾಸ


ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ


ಐದನೇ ಹಂತ, ಬಹು ಮಹಡಿ ಕಟ್ಟಡ, ಮೂರನೇ ಮಹಡಿ, ಡಾ. ಬೀ. ಆರ್. ಅಂಬೇಡ್ಕರ್ ವೀಧಿ , ಬೆಂಗಳೂರು- 560001


Email secretary-Kshrc@Karnataka.gov.in


ಅರ್ಜೆಗಳನ್ನು ಈಗಾಗಲೇ ನೀಡಲಾದಂತಹ ವಿಳಾಸಕ್ಕೆ ಕಳಿಸಬಹುದು ಅಥವಾ ಇ ಮೇಲ್ ಕಳುಹಿಸಬಹುದು.


ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಅಕ್ಟೋಬರ್ 20,2022

First published: