Jobs in Bangalore: ಡಿಗ್ರಿ ಆಗಿದ್ರೆ ಬೆಂಗಳೂರಿನ ಕ್ರೇಡ್​ಆರ್​ ಸಂಸ್ಥೆಯಲ್ಲಿದೆ ಉದ್ಯೋಗ

ಈಗಾಗಲೇ ಆಟೋ ಮೊಬೈಲ್​ ಕ್ಷೇತ್ರ ಅಥವಾ ಗ್ರಾಹಕರ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

CredR​

CredR​

  • Share this:
    ಬೈಕ್​ ವಾಹಿವಾಟು ಕ್ಷೇತ್ರದಲ್ಲಿ ಹೆಸರು ಮಾಡಿರುವ ಕ್ರೇಡ್​ಆರ್ (CredR)​ ಸಂಸ್ಥೆ ಇದೀಗ ಉದ್ಯೋಗ ನೇಮಕಾತಿಗೆ ಮುಂದಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಕಸ್ಟಮರ್​ ಎಕ್ಸ್​ಪಿರೀಯನ್ಸ್​ ಅಡ್ವೆಸರ್ (Customer Experience Advisor) ​ ಮತ್ತು ಟೆಲಿಸೇಲ್​ ಅಡ್ವೆಸರ್ (Tele sale Advisor)​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಅಭ್ಯರ್ಥಿಗಳು ಇಮೇಲ್​ ಮೂಲಕ ಮಾಡಬಹುದಾಗಿದೆ.

    ಈಗಾಗಲೇ ಆಟೋ ಮೊಬೈಲ್​ ಕ್ಷೇತ್ರ ಅಥವಾ ಗ್ರಾಹಕರ ಸೇವಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆCredR
    ಹುದ್ದೆಟೆಲಿಸೇಲ್ಸ್​​ ಅಡ್ವೈಸರ್, ಕಸ್ಟಮರ್​ ಎಕ್ಸ್​ಪಿರೀಯನ್ಸ್​ ಅಡ್ವೆಸರ್​
    ಒಟ್ಟು ಹುದ್ದೆನಿಗದಿ ಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು
    ವೇತನಸಂಸ್ಥೆಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ (Education Qualification): ಅಭ್ಯರ್ಥಿಯು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು.
    ಅನುಭವ (Experience ): ಸಂಬಂಧಿತ ಕ್ಷೇತ್ರದಲ್ಲಿ ಅಥವಾ ಇ-ಕಾಮರ್ಸ್​, ವಿಮೆ ಕ್ಷೇತ್ರದಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇರಬೇಕು.

    ಇದನ್ನು ಓದಿ:ಮೀನುಗಾರಿಕೆ ಇಲಾಖೆಯಲ್ಲಿದೆ ಕೆಲಸ; ಅರ್ಜಿ ಸಲ್ಲಿಕೆಗೆ ಜು.30 ಕಡೆ ದಿನ

    ಹುದ್ದೆಯ ಜವಾಬ್ದಾರಿ (Jobs Roles And Responsibility)
    -ಅಭ್ಯರ್ಥಿಗಳು ಸಂಸ್ಥೆಯ ಕರೆಗಳನ್ನು ನಿರ್ವಹಿಸಬೇಕು
    -ನಿರೀಕ್ಷಿತ ಗ್ರಾಹಕರಿಗೆ ಕರೆ ಮಾಡಿ, ಸಂಸ್ಥೆಯ ಉತ್ಪನ್ನ ಮತ್ತು ಸೇವೆಗಳನ್ನು ವಿವರಣೆ ನೀಡಬೇಕು.
    -ಹೊಸ ವ್ಯಾಪಾರದ ನಿರೀಕ್ಷೆಗಾಗಿ ಸಂಭಾವ್ಯ ಗ್ರಾಹಕರನ್ನು ಪಟ್ಟಿಮಾಡಬೇಕು. ಸಂಸ್ಥೆಯ ಸಭೆಗಳನ್ನು ಆಯೋಜಿಸಿ ಮಾರಾಟ ತಂಡಕ್ಕೆ ಮಾರ್ಗದರ್ಶನ ನೀಡಬೇಕು.
    -ಗ್ರಾಹಕರ ವಿಚಾರಣೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸಬೇಕು.
    -ಗ್ರಾಹಕರ ದೂರುಗಳನ್ನು ಅಂಗೀಕರಿಸುವುದು ಮತ್ತು ಪರಿಹರಿಸಬೇಕು.
    -ಗ್ರಾಹಕರ ಸಂವಹನ, ವಹಿವಾಟುಗಳು, ಕಾಮೆಂಟ್‌ಗಳು ಮತ್ತು ದೂರುಗಳ ದಾಖಲೆಗಳನ್ನು ನಿರ್ವಹಿಸಬೇಕು.
    -ಗ್ರಾಹಕರ ತೃಪ್ತಿಯನ್ನು ಖಚಿತಪಡಿಸಿಕೊಳ್ಳಿ ಮತ್ತು ವೃತ್ತಿಪರ ಗ್ರಾಹಕ ಬೆಂಬಲವನ್ನು ಒದಗಿಸಬೇಕು.
    -CredR ಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕು.
    -ಆನ್‌ಲೈನ್ ಮಾರ್ಕೆಟಿಂಗ್ ಪರಿಕಲ್ಪನೆಗಳ ಉತ್ತಮ ಜ್ಞಾನವನ್ನು ಹೊಂದಿರಬೇಕು.
    -ಮಾಸಿಕವಾಗಿ ನೀಡಿದ ಗುರಿಗಳನ್ನು ಸಾಧಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: hr@credr.com
    ಅಧಿಕೃತ ವೆಬ್​ಸೈಟ್​: credr.com

    ಇದನ್ನು ಓದಿ: ಕೆಪಿಎಸ್​ಸಿಯಿಂದ ಗ್ರೂಪ್​ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 37900 ರೂ ವೇತನ

    ವಿಶೇಷ ಸೂಚನೆ (Special Instruction)
    ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಹುದ್ದೆ ಹೆಸರು- ಸ್ಥಳದ ಹೆಸರಿನ ಬಗ್ಗೆ ಸ್ಪಷ್ಟವಾಗಿ ನಮೂದಿಸಿ, ನವೀಕರಿಸಿ ರೆಸ್ಯೂಮ್​ ಅನ್ನು ಮೇಲಿನ ಇಮೇಲ್​ ವಿಳಾಸಕ್ಕೆ ಸಲ್ಲಿಸಬೇಕು.

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು
    Published by:Seema R
    First published: