• Home
  • »
  • News
  • »
  • jobs
  • »
  • JOB ALERT: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನಾಳೆ ನಡೆಯಲಿದೆ ಸಂದರ್ಶನ- ಎಲ್ಲಿ, ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ

JOB ALERT: ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನಾಳೆ ನಡೆಯಲಿದೆ ಸಂದರ್ಶನ- ಎಲ್ಲಿ, ಎಷ್ಟೊತ್ತಿಗೆ? ಇಲ್ಲಿದೆ ಮಾಹಿತಿ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಕೃಷಿ ವಿಶ್ವವಿದ್ಯಾಲಯ-ಧಾರವಾಡ

ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,000-45,000 ವೇತನ ನೀಡಲಾಗುತ್ತದೆ.

  • News18 Kannada
  • Last Updated :
  • Dharwad, India
  • Share this:

    UAS Dharwad Recruitment 2022: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡ(University of Agricultural Sciences Dharwad)ದಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಪ್ರೊಫೆಸರ್(Assistant Professor)​​ ಹುದ್ದೆಗೆ ಅರ್ಜಿ ಹಾಕಲು ನಾಳೆಯೇ ಕೊನೆ ದಿನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಧಾರವಾಡ(Dharwad)ದಲ್ಲಿ ಉದ್ಯೋಗ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.


    ನವೆಂಬರ್ 17, 2022ರಂದು ಅಂದರೆ ನಾಳೆ ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಿ. ಹೆಚ್ಚಿನ ಮಾಹಿತಿಗಾಗಿ uasd.edu ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕೃಷಿ ವಿಜ್ಞಾನ ವಿಶ್ವವಿದ್ಯಾಲಯ-ಧಾರವಾಡ
    ಹುದ್ದೆಯ ಹೆಸರುಸಹಾಯಕ ಪ್ರಾಧ್ಯಾಪಕ
    ಒಟ್ಟು ಹುದ್ದೆನಿಗದಿಪಡಿಸಿಲ್ಲ
    ವಿದ್ಯಾರ್ಹತೆಎಂಎಸ್ಸಿ
    ವೇತನಮಾಸಿಕ ₹ 40,000-45,000
    ಸ್ಥಳಧಾರವಾಡ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ನೋಟಿಫಿಕೇಶನ್ ಬಿಡುಗಡೆ ದಿನಾಂಕ02/11/2022
    ಸಂದರ್ಶನ ನಡೆಯುವ ದಿನ17/11/2022


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    UAS ಧಾರವಾಡದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಕಡ್ಡಾಯವಾಗಿ ಕೃಷಿ/ತೋಟಗಾರಿಕಾ ವಿಭಾಗದಲ್ಲಿ ಎಂಎಸ್ಸಿ, ಮಣ್ಣಿನ ವಿಜ್ಞಾನ ವಿಭಾಗದಲ್ಲಿ ಡಾಕ್ಟೋರಲ್ ಪದವಿ ಪಡೆದಿರಬೇಕು.


    ಇದನ್ನೂ ಓದಿ: NESAC Recruitment 2022: ತಿಂಗಳಿಗೆ 1.77 ಲಕ್ಷ ಸಂಬಳ- ಬಿಇ/ ಬಿ ಟೆಕ್ ಆದವರಿಗೆ ಇಲ್ಲಿದೆ ಬಂಪರ್ ಉದ್ಯೋಗ


    ವಯೋಮಿತಿ:
    ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು UAS ಧಾರವಾಡ ನೇಮಕಾತಿ ನಿಯಮಗಳ ಪ್ರಕಾರ ಇರಬೇಕು.


    ವಯೋಮಿತಿ ಸಡಿಲಿಕೆ:
    ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಹುದ್ದೆ ಕುರಿತಾದ ನೋಟಿಫಿಕೇಶನ್ ಹಾಗೂ ಅರ್ಜಿ ಇಲ್ಲಿದೆ:


    Assistant-Professor-of-Soil-Science-Posts-Advt-Details-Application-Form-UAS-Dharwad


    ವೇತನ:
    ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 40,000-45,000 ವೇತನ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಸಂದರ್ಶನ ನಡೆಯುವ ಸ್ಥಳ & ದಿನಾಂಕ:
    ಡೀನ್ ಕಚೇರಿ(ಕೃಷಿ)
    ಕೃಷಿ ವಿಶ್ವವಿದ್ಯಾಲಯ
    ಧಾರವಾಡ
    ಕರ್ನಾಟಕ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ:02/11/2022
    ಸಂದರ್ಶನ ನಡೆಯುವ ದಿನಾಂಕ: 17/11/2022

    Published by:Latha CG
    First published: