• Home
  • »
  • News
  • »
  • jobs
  • »
  • Job Alert: ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗ- ತಿಂಗಳಿಗೆ 67,000 ಸಂಬಳ

Job Alert: ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯಲ್ಲಿ ಡಿಗ್ರಿ ಆದವರಿಗೆ ಉದ್ಯೋಗ- ತಿಂಗಳಿಗೆ 67,000 ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡಿಸೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಆಫ್​ಲೈನ್(Offline) ಮೂಲಕ ಅರ್ಜಿ ಹಾಕಿ.

  • Share this:

    NIFT Recruitment 2022: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ(National Institute of Fashion Technology) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 9 ಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಈ ಕೂಡಲೇ ಆಫ್​ಲೈನ್(Offline) ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ
    ಹುದ್ದೆಗಳು9
    ಉದ್ಯೋಗದ ಸ್ಥಳಭಾರತ
    ಹುದ್ದೆಯ ಹೆಸರುಡೆಪ್ಯುಟಿ ಡೈರೆಕ್ಟರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್
    ವೇತನಮಾಸಿಕ ₹ 15,600-67,000


    ಹುದ್ದೆಯ ಕುರಿತಾದ ಮಾಹಿತಿ ಇಲ್ಲಿದೆ:


    ಪ್ರಾಜೆಕ್ಟ್​ ಎಂಜಿನಿಯರ್- 1
    ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್​​ & ಅಕೌಂಟ್ಸ್​)-4
    ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- 4


    ಅಭ್ಯರ್ಥಿಗಳ ವಿದ್ಯಾರ್ಹತೆ ಏನಿರಬೇಕು?


    ಪ್ರಾಜೆಕ್ಟ್​ ಎಂಜಿನಿಯರ್- ಸ್ನಾತಕೋತ್ತರ ಪದವಿ
    ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್​​ & ಅಕೌಂಟ್ಸ್​)-ಸ್ನಾತಕೋತ್ತರ ಪದವಿ
    ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಪದವಿ


    ಇದನ್ನೂ ಓದಿ: Bengaluru Jobs: ನಿಮ್ಮದು ಡಿಗ್ರಿ ಪಾಸಾಗಿದ್ರೆ ಬೆಂಗಳೂರಿನಲ್ಲಿದೆ ಕೆಲಸ-ತಿಂಗಳಿಗೆ 25,000 ಸಂಬಳ


    ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು?


    ಪ್ರಾಜೆಕ್ಟ್​ ಎಂಜಿನಿಯರ್- ಗರಿಷ್ಠ 50 ವರ್ಷ
    ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್​​ & ಅಕೌಂಟ್ಸ್​)- ಗರಿಷ್ಠ 40 ವರ್ಷ
    ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಗರಿಷ್ಠ 35 ವರ್ಷ
    ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?


    ಎಸ್​ಟಿ/ಎಸ್​ಸಿ/ ಮಹಿಳಾ ಅಭ್ಯರ್ಥಿಗಳು & NIFT ಉದ್ಯೋಗಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
    ಉಳಿದ ಎಲ್ಲಾ ಅಭ್ಯರ್ಥಿಗಳು 1180 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.
    ಅರ್ಜಿ ಶುಲ್ಕ ಪಾವತಿಸುವ ಬಗೆ- ಡಿಮ್ಯಾಂಡ್​ ಡ್ರಾಫ್ಟ್​/ ಬ್ಯಾಂಕರ್ಸ್​​ ಚೆಕ್​


    ಸಂಬಳ ಎಷ್ಟು ಕೊಡಲಾಗುತ್ತೆ?


    ಪ್ರಾಜೆಕ್ಟ್​ ಎಂಜಿನಿಯರ್- ಮಾಸಿಕ ₹ 37,400-67,000
    ಡೆಪ್ಯುಟಿ ಡೈರೆಕ್ಟರ್ (ಫೈನಾನ್ಸ್​​ & ಅಕೌಂಟ್ಸ್​)-ಮಾಸಿಕ ₹ 15,600-39,100
    ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್- ಮಾಸಿಕ ₹ 15,600-39,100


    ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?


    ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತೆ.


    ಇದನ್ನೂ ಓದಿ: JOBS: ಥರ್ಮಲ್ ಪವರ್ ಕಾರ್ಪೊರೇಷನ್​ನಲ್ಲಿ ಎಕ್ಸಿಕ್ಯೂಟಿವ್​ ಹುದ್ದೆಗಳು ಖಾಲಿ- 90 ಸಾವಿರ ಸಂಬಳ, ಇಲ್ಲಿ Apply ಮಾಡಿ


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳಾದ ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್, ಇತ್ತೀಚಿನ ಫೋಟೋ ಪ್ರತಿ, ಗುರುತಿನ ಚೀಟಿ ಹಾಗೂ ಅನುಭವ ಪ್ರತಿಯೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 12, 2022ರೊಳಗೆ ಪೋಸ್ಟ್​ ಮುಖಾಂತರ ಕಳುಹಿಸಬೇಕು.


    ರಿಜಿಸ್ಟ್ರಾರ್
    NIFT ಕ್ಯಾಂಪಸ್
    ಹೌಜ್ ಖಾಸ್
    ಗೊಲ್​ಮಹರ್ ಪಾರ್ಕ್​ ಹತ್ತಿರ
    ನವದೆಹಲಿ-110016


    ಅಪ್ಲಿಕೇಶನ್ ಫಾರ್ಮ್​ ಇಲ್ಲಿದೆ.


    09-Deputy-Director-Assistant-Executive-Engineer-Posts-Advt-Details-Application-Form-NIFT


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 12/12/2022

    Published by:Latha CG
    First published: