JOB ALERT: ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ

ಮಲ್ಟಿ ಪರ್ಪೋಸ್ ಹೆಲ್ತ್ ವರ್ಕರ್, ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2, ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ ಹುದ್ದೆಗಳು ಖಾಲಿ ಇವೆ. ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Health and Family Welfare Department Recruitment 2021: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(Health and Family Welfare Department)ಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಸರ್ಕಾರಿ ಉದ್ಯೋಗ(Government Job) ಅರಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ತಂಜಾವೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 174 ವಿವಿಧ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, 12ನೇ ತರಗತಿ ಹಾಗೂ ಬಿ.ಎಸ್ಸಿ ನರ್ಸಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಮಲ್ಟಿ ಪರ್ಪೋಸ್ ಹೆಲ್ತ್ ವರ್ಕರ್, ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2, ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ ಹುದ್ದೆಗಳು ಖಾಲಿ ಇವೆ. ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: ICG Recruitment 2021: ಎಂಜಿನಿಯರ್ ಪದವಿ ಪಡೆದವರಿಗೆ ರಕ್ಷಣಾ ಪಡೆಯಲ್ಲಿ ಹುದ್ದೆ ಖಾಲಿ- ತಿಂಗಳಿಗೆ 50 ಸಾವಿರದಿಂದ 2 ಲಕ್ಷದವರೆಗೆ ಸಂಬಳ









































ಸಂಸ್ಥೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆಯ ಹೆಸರುಮಲ್ಟಿ ಪರ್ಪೋಸ್ ಹೆಲ್ತ್ ವರ್ಕರ್, ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2, ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್
ಒಟ್ಟು ಹುದ್ದೆಗಳು174
ವಿದ್ಯಾರ್ಹತೆ10ನೇ ತರಗತಿ, 12ನೇ ತರಗತಿ ಹಾಗೂ ಬಿ.ಎಸ್ಸಿ ನರ್ಸಿಂಗ್
ಉದ್ಯೋಗದ ಸ್ಥಳತಂಜಾವೂರು
ವೇತನನಿಯಮಾನುಸಾರ
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ06/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/12/2021



ಪ್ರಮುಖ ದಿನಾಂಕಗಳು: 

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/12/2021

ಹುದ್ದೆಯ ಮಾಹಿತಿ:
ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ : 116
ಮಲ್ಟಿ ಪರ್ಪೋಸ್ ಹೆಲ್ತ್​ ವರ್ಕರ್/ ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2 : 58
ಒಟ್ಟು : 174 ಹುದ್ದೆಗಳು

ವಿದ್ಯಾರ್ಹತೆ:
ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ - ಬಿಎಸ್ಸಿ ನರ್ಸಿಂಗ್
ಮಲ್ಟಿ ಪರ್ಪೋಸ್ ಹೆಲ್ತ್​ ವರ್ಕರ್/ ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2 - ಬಾಟನಿ/ಜೂಲಾಜಿಯಲ್ಲಿ 12ನೇ ತರಗತಿ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ : 50 ವರ್ಷ
ಮಲ್ಟಿ ಪರ್ಪೋಸ್ ಹೆಲ್ತ್​ ವರ್ಕರ್/ ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್- 50 ವರ್ಷ

ಇದನ್ನೂ ಓದಿ: BHEL Recruitment 2021: ತಿಂಗಳಿಗೆ ₹ 50 ಸಾವಿರ ಸಂಬಳ, BE, B Tech ಆದವರಿಗೆ BHELನಲ್ಲಿ ಉದ್ಯೋಗ

ಉದ್ಯೋಗದ ಸ್ಥಳ:
ಮಲ್ಟಿ ಪರ್ಪೋಸ್ ಹೆಲ್ತ್ ವರ್ಕರ್, ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2, ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಮಿಳುನಾಡಿನ ತಂಜಾವೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಮಲ್ಟಿ ಪರ್ಪೋಸ್ ಹೆಲ್ತ್ ವರ್ಕರ್, ಹೆಲ್ತ್​ ಇನ್ಸ್​ಪೆಕ್ಟರ್ ಗ್ರೇಡ್-2, ಮಿಡ್ ಲೆವೆಲ್ ಹೆಲ್ತ್​ ಪ್ರೊವೈಡರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಉದ್ಯೋಗ ನೀಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: