• Home
  • »
  • News
  • »
  • jobs
  • »
  • JOB ALERT: ಸರ್ಕಾರಿ ಕೆಲಸ ಬೇಕು ಅಂದ್ರೆ ಇವತ್ತೇ ಅರ್ಜಿ ಹಾಕಿ, ವಿಕಾಸಸೌಧದಲ್ಲಿ ನ.9ಕ್ಕೆ ಸಂದರ್ಶನ

JOB ALERT: ಸರ್ಕಾರಿ ಕೆಲಸ ಬೇಕು ಅಂದ್ರೆ ಇವತ್ತೇ ಅರ್ಜಿ ಹಾಕಿ, ವಿಕಾಸಸೌಧದಲ್ಲಿ ನ.9ಕ್ಕೆ ಸಂದರ್ಶನ

 ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ secy-ci@karnataka.gov.in ಗೆ ಇವತ್ತೇ ಕಳುಹಿಸಬೇಕು. ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ₹ 30,000 ವೇತನ ನೀಡಲಾಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

    KSMCL Recruitment 2022: ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ(Karnataka State Minerals Corporation Limited) ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ. ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್(Social Media Consultant) ಹುದ್ದೆಗಳು ಖಾಲಿ ಇವೆ. ಬೆಂಗಳೂರಿನಲ್ಲಿ ವೃತ್ತಿ ಮಾಡಬಯಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಸಕ್ತ ಅಭ್ಯರ್ಥಿಗಳು ನವೆಂಬರ್ 7 ಅಂದರೆ ಇಂದೇ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ
    ಹುದ್ದೆಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್
    ವಿದ್ಯಾರ್ಹತೆಬಿಸಿಎ, ಬಿಇ/ ಬಿ.ಟೆಕ್
    ಸ್ಥಳಬೆಂಗಳೂರು
    ವೇತನಮಾಸಿಕ ₹ 30,000
    ನೋಟಿಫಿಕೇಶನ್ ಬಿಡುಗಡೆ ದಿನಾಂಕ02/11/2022
    ಇ-ಮೇಲ್ ಮಾಡಲು ಕೊನೆಯ ದಿನ07/11/2022
    ಸಂದರ್ಶನ ನಡೆಯುವ ದಿನ09/11/2022


    ವಿದ್ಯಾರ್ಹತೆ:
    ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಸಂಸ್ಥೆ/ಬೋರ್ಡ್​​ನಿಂದ ಕಡ್ಡಾಯವಾಗಿ ಕಂಪ್ಯೂಟರ್​ ಸೈನ್ಸ್​/ ಇನ್ಫರ್ಮೇಶನ್ ಟೆಕ್ನಾಲಜಿ ವಿಭಾಗದಲ್ಲಿ ಕಡ್ಡಾಯವಾಗಿ ಬಿಸಿಎ, ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: BBMPಯಲ್ಲಿ 63 ಹುದ್ದೆಗಳು ಖಾಲಿ, ನೇರ ಸಂದರ್ಶನ- ತಿಂಗಳಿಗೆ 47,000 ಸಂಬಳ


    ವಯೋಮಿತಿ:
    ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 2, 2022ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಕರ್ನಾಟಕ ರಾಜ್ಯ ಖನಿಜಗಳ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಲಿಸ್ಟ್​
    ಅನುಭವ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ secy-ci@karnataka.gov.in ಗೆ ಇವತ್ತೇ ಕಳುಹಿಸಬೇಕು.


    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ ksmc.karnataka.gov.in ಗೆ ಭೇಟಿ ನೀಡಬೇಕು.


    ಇದನ್ನೂ ಓದಿ: JOBS: ಚಿಕ್ಕಬಳ್ಳಾಪುರದಲ್ಲಿ ಬಂಪರ್ ಉದ್ಯೋಗ, ಡಿಗ್ರಿ ಪಾಸಾಗಿದ್ರೆ ನಿಮ್ಮ ರೆಸ್ಯೂಮ್ ಇ-ಮೇಲ್ ಮಾಡಿ


    ಸಂದರ್ಶನ ನಡೆಯುವ ಸ್ಥಳ:
    ಕೊಠಡಿ ಸಂಖ್ಯೆ 135
    ವಿಕಾಸ ಸೌಧ
    ಬೆಂಗಳೂರು
    ಕರ್ನಾಟಕ


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 02/11/2022
    ಇ-ಮೇಲ್ ಮಾಡಲು ಕೊನೆಯ ದಿನ-07/11/2022
    ಸಂದರ್ಶನ ನಡೆಯುವ ದಿನ: 09/11/2022

    Published by:Latha CG
    First published: