• Home
  • »
  • News
  • »
  • jobs
  • »
  • JOB ALERT: ಡಿಗ್ರಿ ಪಾಸಾಗಿದ್ರೆ ಜಂಟಿ ನಿರ್ದೇಶಕರಾಗುವ ಭಾಗ್ಯ, ತಿಂಗಳಿಗೆ 2 ಲಕ್ಷ ಸಂಬಳ- ಬೆಂಗಳೂರಿನಲ್ಲಿ ಕೆಲಸ

JOB ALERT: ಡಿಗ್ರಿ ಪಾಸಾಗಿದ್ರೆ ಜಂಟಿ ನಿರ್ದೇಶಕರಾಗುವ ಭಾಗ್ಯ, ತಿಂಗಳಿಗೆ 2 ಲಕ್ಷ ಸಂಬಳ- ಬೆಂಗಳೂರಿನಲ್ಲಿ ಕೆಲಸ

NBT

NBT

ಅಭ್ಯರ್ಥಿಗಳು ಡಿಸೆಂಬರ್ 28, 2022ರೊಳಗಾಗಿ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು.

  • News18 Kannada
  • Last Updated :
  • Bangalore [Bangalore], India
  • Share this:

    NBT India Recruitment 2022: ನ್ಯಾಷನಲ್ ಬುಕ್ ಟ್ರಸ್ಟ್​ ಇಂಡಿಯಾ(National Book Trust India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 6 ಜಂಟಿ ನಿರ್ದೇಶಕ(Joint Director) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನವದೆಹಲಿ, ಕೊಲ್ಕತ್ತಾ, ಮುಂಬೈ ಮತ್ತು ಬೆಂಗಳೂರಿನಲ್ಲಿ ಉದ್ಯೋಗ(Job) ಮಾಡಲು ಬಯಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಅಭ್ಯರ್ಥಿಗಳು ಡಿಸೆಂಬರ್ 28, 2022ರೊಳಗಾಗಿ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆನ್ಯಾಷನಲ್ ಬುಕ್ ಟ್ರಸ್ಟ್​ ಇಂಡಿಯಾ
    ಹುದ್ದೆಜಂಟಿ ನಿರ್ದೇಶಕ
    ವಿದ್ಯಾರ್ಹತೆಪದವಿ
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್​
    ಅರ್ಜಿ ಸಲ್ಲಿಸಲು ಕೊನೆ ದಿನ28/12/2022


    ಹುದ್ದೆಯ ಮಾಹಿತಿ:


    ಜಂಟಿ ನಿರ್ದೇಶಕ (ಪ್ರೊಡಕ್ಷನ್)- 1
    ಉಪ ನಿರ್ದೇಶಕ (ಆರ್ಟ್​)- 1
    ಉಪ ನಿರ್ದೇಶಕ (ಕಾಸ್ಟ್​ & ಫೈನಾನ್ಸ್​)-1
    ಪ್ರಾದೇಶಿಕ ವ್ಯವಸ್ಥಾಪಕ, ERO (ಕೊಲ್ಕತ್ತಾ)-1
    ಪ್ರಾದೇಶಿಕ ವ್ಯವಸ್ಥಾಪಕ, SRO (ಬೆಂಗಳೂರು)-1
    ಪ್ರಾದೇಶಿಕ ವ್ಯವಸ್ಥಾಪಕ, WRO (ಮುಂಬೈ)-1


    ಇದನ್ನೂ ಓದಿ :Google Pay Company: ನೀವು PUC ಪಾಸಾಗಿದ್ದೀರಾ? ಗೂಗಲ್ ಪೇ ಕಂಪನಿಯಲ್ಲಿದೆ ಬಂಪರ್ ಉದ್ಯೋಗ


    ಅರ್ಹತಾ ಮಾನದಂಡಗಳೇನು?


    ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವ್ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬುದು ಇಲ್ಲಿದೆ.


    ವಿದ್ಯಾರ್ಹತೆ:
    ಜಂಟಿ ನಿರ್ದೇಶಕ (ಪ್ರೊಡಕ್ಷನ್)- ಪದವಿ, ಸ್ನಾತಕೋತ್ತರ ಪದವಿ
    ಉಪ ನಿರ್ದೇಶಕ (ಆರ್ಟ್​)- ಪದವಿ
    ಉಪ ನಿರ್ದೇಶಕ (ಕಾಸ್ಟ್​ & ಫೈನಾನ್ಸ್​)- ICWA, ಪದವಿ
    ಪ್ರಾದೇಶಿಕ ವ್ಯವಸ್ಥಾಪಕ, ERO (ಕೊಲ್ಕತ್ತಾ)- ಪದವಿ
    ಪ್ರಾದೇಶಿಕ ವ್ಯವಸ್ಥಾಪಕ, SRO (ಬೆಂಗಳೂರು)- ಪದವಿ
    ಪ್ರಾದೇಶಿಕ ವ್ಯವಸ್ಥಾಪಕ, WRO (ಮುಂಬೈ)- ಪದವಿ


    ವಯೋಮಿತಿ:
    ನ್ಯಾಷನಲ್ ಬುಕ್ ಟ್ರಸ್ಟ್​ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 28, 2022ಕ್ಕೆ 56 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ನ್ಯಾಷನಲ್ ಬುಕ್ ಟ್ರಸ್ಟ್​ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ವೇತನ:
    ಜಂಟಿ ನಿರ್ದೇಶಕ (ಪ್ರೊಡಕ್ಷನ್)- ಮಾಸಿಕ ₹ 78,800-2,09,200
    ಉಪ ನಿರ್ದೇಶಕ (ಆರ್ಟ್​)- ಮಾಸಿಕ ₹ 67,700-2,08,700
    ಉಪ ನಿರ್ದೇಶಕ (ಕಾಸ್ಟ್​ & ಫೈನಾನ್ಸ್​)- ಮಾಸಿಕ ₹ 67,700-2,08,700
    ಪ್ರಾದೇಶಿಕ ವ್ಯವಸ್ಥಾಪಕ, ERO (ಕೊಲ್ಕತ್ತಾ)- ಮಾಸಿಕ ₹ 67,700-2,08,700
    ಪ್ರಾದೇಶಿಕ ವ್ಯವಸ್ಥಾಪಕ, SRO (ಬೆಂಗಳೂರು)- ಮಾಸಿಕ ₹ 67,700-2,08,700
    ಪ್ರಾದೇಶಿಕ ವ್ಯವಸ್ಥಾಪಕ, WRO (ಮುಂಬೈ)- ಮಾಸಿಕ ₹ 67,700-2,08,700


    ಇದನ್ನೂ ಓದಿ: JOB ALERT: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ಕೆಲಸ ಖಾಲಿ ಇದೆ, ಡಿಗ್ರಿ ಪಾಸಾದವರಿಗೆ ಅವಕಾಶ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.


    ಸಹಾಯಕ ನಿರ್ದೇಶಕರು(ಎಸ್ಟಾಬ್ಲಿಷ್​ಮೆಂಟ್)
    NBT ಇಂಡಿಯಾ
    ನೆಹರು ಭವನ
    5 ಇನ್​​ಸ್ಟಿಟ್ಯೂಟ್ ಏರಿಯಾ
    ಫೇಸ್-2
    ವಸಂತ್ ಕುಂಜ್
    ನವದೆಹಲಿ-110070

    Published by:Latha CG
    First published: