Job Alert: ತಿಂಗಳಿಗೆ ₹ 55,000 ಸಂಬಳ, ಬೆಂಗಳೂರು BELನಲ್ಲಿ 247 ಹುದ್ದೆಗಳು ಖಾಲಿ

ಫೆಬ್ರವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
BEL Recruitment 2022: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Electronics Limited)​ ಬೆಂಗಳೂರಿನಲ್ಲಿ ಒಟ್ಟು 247 ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಬಿಇ, ಬಿಟೆಕ್​ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜನವರಿ 21 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 14 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)​ನ ಅಧಿಕೃತ ವೆಬ್​ಸೈಟ್​ bel-india.in ಗೆ ಭೇಟಿ ನೀಡಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
ಹುದ್ದೆಯ ಹೆಸರುಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್​
​ ಒಟ್ಟು ಹುದ್ದೆಗಳು 247
ವಿದ್ಯಾರ್ಹತೆ ಬಿಇ, ಬಿ.ಟೆಕ್, ಬಿಎಸ್ಸಿ, ಎಂಬಿಎ
ಉದ್ಯೋಗದ ಸ್ಥಳಬೆಂಗಳೂರು
ಸಂಬಳಮಾಸಿಕ ₹ 30,000-55,000
 ಅರ್ಜಿ ಸಲ್ಲಿಸುವ ವಿಧಾನಆನ್​​ ​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 21/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/02/2022

ಹುದ್ದೆಯ ಮಾಹಿತಿ:
ಪ್ರಾಜೆಕ್ಟ್​ ಎಂಜಿನಿಯರ್ -67
ಟ್ರೇನಿ ಎಂಜಿನಿಯರ್- 169
ಟ್ರೇನಿ ಆಫೀಸರ್- 11
ಒಟ್ಟು 247 ಹುದ್ದೆಗಳು

ಇದನ್ನೂ ಓದಿ:UAS Raichur Recruitment 2022: ತಿಂಗಳಿಗೆ ₹ 35,000 ಸಂಬಳ, ರಾಯಚೂರಿನಲ್ಲಿ ಉದ್ಯೋಗ, ಈಗಲೇ Apply ಮಾಡಿ

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್/ಬಿಎಸ್ಸಿ/ ಎಂಬಿಎ​ ಪೂರ್ಣಗೊಳಿಸಿರಬೇಕು.

ವಯೋಮಿತಿ:
ಪ್ರಾಜೆಕ್ಟ್​ ಎಂಜಿನಿಯರ್ -32 ವರ್ಷ
ಟ್ರೇನಿ ಎಂಜಿನಿಯರ್- 28 ವರ್ಷ
ಟ್ರೇನಿ ಆಫೀಸರ್- 28 ವರ್ಷ

ಕೆಲಸದ ಸ್ಥಳ:
ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಪ್ರಾಜೆಕ್ಟ್​ ಎಂಜಿನಿಯರ್, ಟ್ರೇನಿ ಆಫೀಸರ್ ಮತ್ತು ಟ್ರೇನಿ ಎಂಜಿನಿಯರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 30,000-55,000 ವೇತನ ನೀಡಲಾಗುತ್ತದೆ.

ಇದನ್ನೂ ಓದಿ: JOBS: ಬೆಳಗಾವಿಯಲ್ಲಿ ಲೈಬ್ರರಿ ಮೇಲ್ವಿಚಾರಕ ಹುದ್ದೆ ಖಾಲಿ, ತಿಂಗಳಿಗೆ ₹ 12,000 ಸಂಬಳ, SSLC ಪಾಸಾದವರಿಗೆ ಅವಕಾಶ

ಅರ್ಜಿ ಶುಲ್ಕ:
ಟ್ರೇನಿ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ & EWS ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಕಟ್ಟಬೇಕು.
SC/ST/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಪ್ರಾಜೆಕ್ಟ್​ ಎಂಜಿನಿಯರ್ ಹುದ್ದೆಗೆ ಸಾಮಾನ್ಯ, ಒಬಿಸಿ & EWS ಅಭ್ಯರ್ಥಿಗಳು 500 ರೂ. ಅರ್ಜಿ ಶುಲ್ಕ ಕಟ್ಟಬೇಕು.
SC/STPWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/02/2022

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: