• Home
  • »
  • News
  • »
  • jobs
  • »
  • Job Alert: 17 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ AIISH Mysore, ಈಗಲೇ ಅಪ್ಲೈ ಮಾಡಿ

Job Alert: 17 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ AIISH Mysore, ಈಗಲೇ ಅಪ್ಲೈ ಮಾಡಿ

 AIISH Mysore

AIISH Mysore

ಒಟ್ಟು 17 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಿ. ಜನವರಿ 9, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು.

  • News18 Kannada
  • Last Updated :
  • Mysore, India
  • Share this:

    AIISH Mysore Recruitment 2022: ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು ( ಆಲ್​ ಇಂಡಿಯಾ ಇನ್ಸ್ಟಿಟ್ಯೂಟ್​ ಆಫ್​ ಸ್ಪೀಚ್ & ಇಯರಿಂಗ್-All India Institute of Speech and Hearing) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 17 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಿ. ಜನವರಿ 9, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline) ಮೂಲಕ ಅರ್ಜಿ ಹಾಕಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ ಮೈಸೂರು
    ಹುದ್ದೆಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್​
    ಒಟ್ಟು ಹುದ್ದೆ17
    ಉದ್ಯೋಗದ ಸ್ಥಳಮೈಸೂರು
    ವೇತನನಿಯಮಾನುಸಾರ


    ಹುದ್ದೆಯ ಮಾಹಿತಿ:


    ಪ್ರೊಫೆಸರ್- 9
    ಅಸೋಸಿಯೇಟ್ ಪ್ರೊಫೆಸರ್-7
    ಅಸಿಸ್ಟೆಂಟ್ ಪ್ರೊಫೆಸರ್- 1


    ಶೈಕ್ಷಣಿಕ ಅರ್ಹತೆ:


    ಪ್ರೊಫೆಸರ್- ಎಂಎಸ್ಸಿ, ಪಿಎಚ್.ಡಿ
    ಅಸೋಸಿಯೇಟ್ ಪ್ರೊಫೆಸರ್- ಸ್ನಾತಕೋತ್ತರ ಪದವಿ, ಪಿಎಚ್​.ಡಿ
    ಅಸಿಸ್ಟೆಂಟ್ ಪ್ರೊಫೆಸರ್- ಎಂಬಿಬಿಎಸ್, ಎಂಎಸ್, ಸ್ನಾತಕೋತ್ತರ ಪದವಿ


    ವಯೋಮಿತಿ:


    ಪ್ರೊಫೆಸರ್- ಗರಿಷ್ಠ 50 ವರ್ಷ
    ಅಸೋಸಿಯೇಟ್ ಪ್ರೊಫೆಸರ್- ಗರಿಷ್ಠ 45 ವರ್ಷ
    ಅಸಿಸ್ಟೆಂಟ್ ಪ್ರೊಫೆಸರ್- ಗರಿಷ್ಠ 40 ವರ್ಷ


    ಹುದ್ದೆ ಕುರಿತಾದ ನೋಟಿಫಿಕೇಶನ್ ಇಲ್ಲಿದೆ:


    AIISH-Mysore notification


    ಅರ್ಜಿ ಶುಲ್ಕ:


    PWD & ಮಹಿಳಾ ಅಭ್ಯರ್ಥಿಗಳಿಗೆ- ಶುಲ್ಕ ವಿನಾಯಿತಿ ನೀಡಲಾಗಿದೆ.
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳಿಗೆ- 40 ರೂ.
    ಜನರಲ್/ ಒಬಿಸಿ & EWS ಅಭ್ಯರ್ಥಿಗಳಿಗೆ- 100 ರೂ.
    ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್, NEFT


    ಇದನ್ನೂ ಓದಿ: ICTS Recruitment 2022: ನೀವು Ph.D ಮಾಡಿದ್ರೆ ಬೆಂಗಳೂರಿನಲ್ಲಿದೆ ಸರ್ಕಾರಿ ಉದ್ಯೋಗ-ತಿಂಗಳಿಗೆ 54,000 ಸಂಬಳ


    ಆಯ್ಕೆ ಪ್ರಕ್ರಿಯೆ:


    ಲಿಖಿತ ಪರೀಕ್ಷೆ
    ಸ್ಕಿಲ್ ಟೆಸ್ಟ್​
    ಸಂದರ್ಶನ


    ಅರ್ಜಿ ಸಲ್ಲಿಸಲು ಹೀಗೆ ಮಾಡಿ.
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜನವರಿ 9, 2023ರೊಳಗೆ ಕಳುಹಿಸಬೇಕು.


    ಅರ್ಜಿ ಇಲ್ಲಿದೆ:


    17-Professor-Associate-Professor-Posts-Application-Form-AIISH-Mysore


    ಮುಖ್ಯ ಆಡಳಿತಾಧಿಕಾರಿ ಕಚೇರಿ
    ಅಖಿಲ ಭಾರತ ವಾಕ್​-ಶ್ರವಣ ಸಂಸ್ಥೆ
    ಮಾನಸಗಂಗೋತ್ರಿ
    ಮೈಸೂರು- 570006


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 09/01/2023

    Published by:Latha CG
    First published: