• Home
  • »
  • News
  • »
  • jobs
  • »
  • JNU Recruitment: 88 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 2.18 ಲಕ್ಷ ಸಂಬಳ

JNU Recruitment: 88 ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ 2.18 ಲಕ್ಷ ಸಂಬಳ

ಜವಹರ್​ಲಾಲ್ ನೆಹರು ವಿಶ್ವವಿದ್ಯಾಲಯ

ಜವಹರ್​ಲಾಲ್ ನೆಹರು ವಿಶ್ವವಿದ್ಯಾಲಯ

ರಾಷ್ಟ್ರ ಮಟ್ಟದ ಯಾವುದೇ ವಿಶ್ವವಿದ್ಯಾಲಯ/ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್/ ಪ್ರೊಫೆಸರ್ ಆಗಿ ಕನಿಷ್ಠ 10 ವರ್ಷಗಳ ಕಾಲ ಬೋಧನೆ ಮಾಡಿದ ಅನುಭವ ಹೊಂದಿರಬೇಕು.

  • News18 Kannada
  • Last Updated :
  • New Delhi, India
  • Share this:

    JNU Recruitment 2022: ಜವಹರ್​ಲಾಲ್​ ನೆಹರು ಯೂನಿವರ್ಸಿಟಿ(Jawaharlal Nehru University) 88 ಪ್ರೊಫೆಸರ್(Professor)​ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸುತ್ತಿದೆ. ಪಿಚ್​​.ಡಿ(Ph.D) ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಹಾಗೂ ಬೋಧನಾ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಈ ಕೂಡಲೇ ಅರ್ಜಿ ಹಾಕಿ. ನವೆಂಬರ್ 9ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಜವಹರ್​ಲಾಲ್​ ನೆಹರು ಯೂನಿವರ್ಸಿಟಿ
    ಹುದ್ದೆಯ ಹೆಸರುಪ್ರೊಫೆಸರ್
    ಒಟ್ಟು ಹುದ್ದೆ88
    ವಿದ್ಯಾರ್ಹತೆಪಿಎಚ್​.ಡಿ
    ವೇತನಮಾಸಿಕ ₹ 1,44,200-2,18,200
    ಸ್ಥಳನವದೆಹಲಿ
    ಅರ್ಜಿ ಸಲ್ಲಿಸಲು ಕೊನೆ ದಿನ05/12/2022


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/PWD/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
    ಉಳಿದ ಅಭ್ಯರ್ಥಿಗಳು 2000 ರೂ. ಅರ್ಜಿ ಶುಲ್ಕ ಪಾವತಿಸಬೇಕು.


    ಇದನ್ನೂ ಓದಿ: JOBS: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ-ನಾಳೆಯೇ ಕೊನೆ ದಿನ


    ವಿದ್ಯಾರ್ಹತೆ:
    ಜವಹರ್​ಲಾಲ್​ ನೆಹರು ಯೂನಿವರ್ಸಿಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪಿಎಚ್​.ಡಿ ಪೂರ್ಣಗೊಳಿಸಿರಬೇಕು. ಜೊತೆಗೆ ರಾಷ್ಟ್ರ ಮಟ್ಟದ ಯಾವುದೇ ವಿಶ್ವವಿದ್ಯಾಲಯ/ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್/ ಪ್ರೊಫೆಸರ್ ಆಗಿ ಕನಿಷ್ಠ 10 ವರ್ಷಗಳ ಕಾಲ ಬೋಧನೆ ಮಾಡಿದ ಅನುಭವ ಹೊಂದಿರಬೇಕು.


    ಉದ್ಯೋಗದ ಸ್ಥಳ:
    ಜವಹರ್​ಲಾಲ್​ ನೆಹರು ಯೂನಿವರ್ಸಿಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರೊಫೆಸರ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ.


    ವೇತನ:
    ಜವಹರ್​ಲಾಲ್​ ನೆಹರು ಯೂನಿವರ್ಸಿಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರೊಫೆಸರ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 1,44,200-2,18,200 ವೇತನ ನೀಡಲಾಗುತ್ತದೆ.


    ಆಯ್ಕೆ ಪ್ರಕ್ರಿಯೆ:
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ


    ಇದನ್ನೂ ಓದಿ: Banking Job: ಕರ್ನಾಟಕ ಬ್ಯಾಂಕ್​ನಲ್ಲಿ ಕಂಪನಿ ಸೆಕ್ರೆಟರಿ ಹುದ್ದೆ ಖಾಲಿ-ಮಂಗಳೂರಿನಲ್ಲಿ ಉದ್ಯೋಗ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 05/12/2022

    Published by:Latha CG
    First published: