• Home
  • »
  • News
  • »
  • jobs
  • »
  • JNCASR Recruitment 2022: ಡಿಪ್ಲೊಮಾ, ಡಿಗ್ರಿ ಆಗಿದ್ರೆ ರೆಸ್ಯೂಮ್ ಇ-ಮೇಲ್ ಮಾಡಿ-ಇಲ್ಲಿದೆ ಸರ್ಕಾರಿ ಕೆಲಸ

JNCASR Recruitment 2022: ಡಿಪ್ಲೊಮಾ, ಡಿಗ್ರಿ ಆಗಿದ್ರೆ ರೆಸ್ಯೂಮ್ ಇ-ಮೇಲ್ ಮಾಡಿ-ಇಲ್ಲಿದೆ ಸರ್ಕಾರಿ ಕೆಲಸ

JNCASR

JNCASR

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ncu@jncasr.ac.in ಗೆ ಡಿಸೆಂಬರ್ 25ಕ್ಕೆ ಮುನ್ನ ಕಳುಹಿಸಬೇಕು.

  • Share this:

    JNCASR Recruitment 2022: ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್( Jawaharlal Nehru Centre For Advanced Scientific Research) ಖಾಲಿ ಇರುವ 1 ಆಫೀಸ್ ಎಕ್ಸಿಕ್ಯೂಟಿವ್(Office Executive) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ(Bengaluru) ಪೋಸ್ಟಿಂಗ್ ನೀಡಲಾಗುವುದು. ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡಲು ಬಯಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಡಿಸೆಂಬರ್ 25, 2022 ಕ್ಕೆ ಮುನ್ನ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್
    ಹುದ್ದೆಆಫೀಸ್ ಎಕ್ಸಿಕ್ಯೂಟಿವ್
    ಒಟ್ಟು ಹುದ್ದೆ1
    ವೇತನಮಾಸಿಕ 30,000
    ಉದ್ಯೋಗದ ಸ್ಥಳಬೆಂಗಳೂರು

    ಅರ್ಹತಾ ಮಾನದಂಡಗಳೇನು?


    ಶೈಕ್ಷಣಿಕ ಅರ್ಹತೆ:
    ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಫೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಪ್ಲೋಮಾ, ಪದವಿ ಪೂರ್ಣಗೊಳಿಸಿರಬೇಕು.


    ವಯೋಮಿತಿ:
    ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಫೀಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಡಿಸೆಂಬರ್ 25, 2022ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು.


    ಇದನ್ನೂ ಓದಿ: NIMHANS Recruitment 2022: ಮಾಸಿಕ ವೇತನ ₹ 51,000- ಬೆಂಗಳೂರಿನಲ್ಲಿ ಸೈಂಟಿಸ್ಟ್​ C ಹುದ್ದೆಗೆ ಈಗಲೇ ಅರ್ಜಿ ಹಾಕಿ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವ ಬಗೆ ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ncu@jncasr.ac.in ಗೆ ಡಿಸೆಂಬರ್ 25ಕ್ಕೆ ಮುನ್ನ ಕಳುಹಿಸಬೇಕು.


    ಪ್ರಮುಖ ದಿನಾಂಕಗಳು:
    ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/12/2022
    ಅರ್ಜಿ ಸಲ್ಲಿಸಲು ಕೊನೆಯ ದಿನ: 25/12/2022

    Published by:Latha CG
    First published: