ಜೆಇಇ ಮೇನ್ 2021ರ(JEE Main-2021) ಫಲಿತಾಂಶಕ್ಕಾಗಿ ಸೆಪ್ಟೆಂಬರ್ 11ರಿಂದ ಸುಮಾರು 7.32 ಲಕ್ಷ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಮಂಗಳವಾರ ಅಥವಾ ಬುಧವಾರ(ಇಂದು/ನಾಳೆ) ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆಯು ಈಗ ಹೇಳಿದೆ. ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್ ಖರೆ(Education Ministry Secretary Amit Khare) ಜೆಇಇ ಮೇನ್-2021ರ ಫಲಿತಾಂಶ(JEE Main-2021 Result) ಸೆಪ್ಟೆಂಬರ್ 15ರೊಳಗೆ ಅಂದರೆ ಬುಧವಾರದೊಳಗೆ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.
ಆದರೆ ಇನ್ನೂ ಪ್ರಕಟವಾಗದ ರಿಸಲ್ಟ್ಗಾಗಿ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ(Social Media) ಮೀಮ್ಸ್ಗಳು ಹರಿದಾಡುತ್ತಿವೆ. ವಿದ್ಯಾರ್ಥಿಗಳು ಜೆಇಇ ಮೇನ್ 2021ರ ಫಲಿತಾಂಶಕ್ಕಾಗಿ ಕಾಯುತ್ತಿರುವ ರೀತಿ, ಅವರ ಕೋಪ, ಹಾಗೂ ಒತ್ತಡವನ್ನು ಸೋಷಿಯಲ್ ಮೀಡಿಯಾ ಮೂಲಕ ಹೊರಹಾಕಿದ್ದಾರೆ.
ಜೆಇಇ ಮೇನ್ 2021 ಸೆಶನ್ 4(JEE Main 2021 Session 4) ಸೆಪ್ಟೆಂಬರ್ 2ರಂದು ಅಂತ್ಯವಾಗಿದೆ. ವಿದ್ಯಾರ್ಥಿಗಳು ಸೆ.8ರವರೆಗೆ ಪ್ರಾದೇಶಿಕ ಆನ್ಸರ್ ಕೀ ಆಕ್ಷೇಪಣೆಗಳನ್ನು ಸಲ್ಲಿಸಲು ಸಾಧ್ಯವಾಗಿತ್ತು. ನಂತರ ಅಂತಿಮ ಉತ್ತರ ಕೀಗಳನ್ನು ಬಿಡುಗಡೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ jeemain.nta.ac.in ನಲ್ಲಿ ಜೆಇಇ ಮೇನ್ಸ್ 2021ರ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ:Career Options: NEET ಪರೀಕ್ಷೆ ಬಳಿಕ ಈ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ..!
ಈ ಮಧ್ಯೆಯೇ ಸೆ.13ರಿಂದ ಜೆಇಇ ಅಡ್ವಾನ್ಸ್ಡ್ 2021 ಪರೀಕ್ಷೆಗೆ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಲಾಗಿದೆ. ಇನ್ನೂ ಜೆಇಇ ಮೇನ್ ಫಲಿತಾಂಶ ಬಾರದೆ, ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹೇಗೆ ನೋಂದಣಿ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಈಗ, ಜೆಇಇ ಮೇನ್-2021 ಫಲಿತಾಂಶಗಳ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬವಾಗಿದ್ದರಿಂದ, ಜೆಇಇ ಅಡ್ವಾನ್ಸ್ಡ್ 2021 ನೋಂದಣಿಗಳು ಸಹ ತಡವಾಗಿ ಆರಂಭವಾಗುವ ನಿರೀಕ್ಷೆಯಿದೆ.
ಜೆಇಇ ಮೇನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಟಾಪ್ 2.5 ಲಕ್ಷ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ. ಜೆಇಇ-ಮೇನ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. 2018 ರಲ್ಲಿ, 224,000 ವಿದ್ಯಾರ್ಥಿಗಳಿಗೆ ಜೆಇಇ-ಅಡ್ವಾನ್ಸ್ಡ್ ತೆಗೆದುಕೊಳ್ಳಲು ಅನುಮತಿ ನೀಡಲಾಯಿತು. ಇದು 2017 ರಲ್ಲಿ 220,000 ಮತ್ತು 2016 ರಲ್ಲಿ 200,000ಕ್ಕಿಂತ ಹೆಚ್ಚಾಗಿದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು(NTA) ಇನ್ನೂ ಸಹ ಜೆಇಇ ಮೇನ್-2021 4ನೇ ಸೆಶನ್ನ ಫಲಿತಾಂಶವನ್ನು ಪ್ರಕಟ ಮಾಡಿಲ್ಲ. ಆದಾಗ್ಯೂ ವಿದೇಶಿ ಪ್ರಜೆಗಳಿಗೆ ಜೆಇಇ ಅಡ್ವಾನ್ಸ್-2021 ಆನ್ಲೈನ್ ರಿಜಿಸ್ಟ್ರೇಶನ್ ಪ್ರಾರಂಭಿಸಿದೆ. 12ನೇ ತರಗತಿ ಓದುತ್ತಿರುವ ಅಥವಾ ಓದಿರುವ ವಿದೇಶಿ ಅಭ್ಯರ್ಥಿಗಳು (ಒಸಿಐ/ಪಿಐಒ ಕಾರ್ಡ್ ಹೊಂದಿರುವವರು) ಭಾರತದಲ್ಲಿ ಜೆಇಇ ಅಡ್ವಾನ್ಸ್ಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ:JEE Advanced 2021 Registrations: ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಹೀಗೆ ರಿಜಿಸ್ಟ್ರೇಶನ್ ಮಾಡಿ..!
ಜೆಇಇ ಅಡ್ವಾನ್ಸ್ಡ್ ಪ್ರಶ್ನೆ ಪತ್ರಿಕೆ ಹೇಗಿರುತ್ತದೆ?
ಜೆಇಇ ಅಡ್ವಾನ್ಸ್ಡ್ 2021 ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತೀ ಪತ್ರಿಕೆಗೆ 3 ಗಂಟೆಗಳ ಕಾಲ ಸಮಯವಿರುತ್ತದೆ. ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಎರಡೂ ಪತ್ರಿಕೆಗಳಿಗೆ ಹಾಜರಾಗಬೇಕು. ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಭಾಗಗಳಿರುತ್ತವೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ. ಪರೀಕ್ಷಾ ವಿಧಾನವು ಕಂಪ್ಯೂಟರ್ ಆಧಾರಿತ(CBT)ವಾಗಿರುತ್ತದೆ. ಎರಡೂ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿರುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ