ನವದೆಹಲಿ(ಸೆ.13): JEE Advanced 2021 Registrations: ಇಂಜಿನಿಯರಿಂಗ್ ಪ್ರವೇಶಾತಿಗಾಗಿ ನಡೆಸಲಾಗುವ ಜಂಟಿ ಪ್ರವೇಶ ಪರೀಕ್ಷೆ (JEE Advanced 2021)ಗೆ ಇಂದಿನಿಂದ ರಿಜಿಸ್ಟ್ರೇಶನ್ ಪ್ರಾರಂಭವಾಗಿದೆ. ಜೆಇಇ ಅಡ್ವಾನ್ಸ್ ಪರೀಕ್ಷೆಗೆ ನೋಂದಣಿ ಯಾವ ಸಮಯದಲ್ಲಿ ಆರಂಭವಾಗುತ್ತೆ ಎಂಬುದು ಇನ್ನೂ ಘೋಷಣೆಯಾಗಿಲ್ಲ. ಜೆಇಇ ಮೇನ್ ಸ್ಕ್ರೀನಿಂಗ್ ಟೆಸ್ಟ್ನ ಫಲಿತಾಂಶ ಹೊರಬಿದ್ದ ಬಳಿಕ ಜೆಇಇ ಅಡ್ವಾನ್ಸ್ಗೆ ರಿಜಿಸ್ಟ್ರೇಶನ್ ಶುರುವಾಗುತ್ತದೆ ಎಂದು ಹೇಳಲಾಗಿದೆ. ಜೆಇಇ ಅಡ್ವಾನ್ಸ್ಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 ಕೊನೆಯ ದಿನಾಂಕವಾಗಿದೆ. ಅರ್ಜಿ ಶುಲ್ಕ ಪಾವತಿಸಲು ಸೆ.20 ಕಡೆಯ ದಿನವಾಗಿದೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು(NTA) ಇನ್ನೂ ಸಹ ಜೆಇಇ ಮೇನ್-2021 4ನೇ ಸೆಶನ್ನ ಫಲಿತಾಂಶವನ್ನು ಪ್ರಕಟ ಮಾಡಿಲ್ಲ. ಆದಾಗ್ಯೂ ವಿದೇಶಿ ಪ್ರಜೆಗಳಿಗೆ ಜೆಇಇ ಅಡ್ವಾನ್ಸ್-2021 ಆನ್ಲೈನ್ ರಿಜಿಸ್ಟ್ರೇಶನ್ ಪ್ರಾರಂಭಿಸಿದೆ. 12ನೇ ತರಗತಿ ಓದುತ್ತಿರುವ ಅಥವಾ ಓದಿರುವ ವಿದೇಶಿ ಅಭ್ಯರ್ಥಿಗಳು (ಒಸಿಐ/ಪಿಐಒ ಕಾರ್ಡ್ ಹೊಂದಿರುವವರು) ಭಾರತದಲ್ಲಿ ಜೆಇಇ ಅಡ್ವಾನ್ಸ್ಗೆ ಅರ್ಜಿ ಸಲ್ಲಿಸಬಹುದು.
ಜೆಇಇ ಅಡ್ವಾನ್ಸ್ 2021: ಅರ್ಜಿ ಸಲ್ಲಿಸುವುದು ಹೇಗೆ?
ಐಐಟಿ ಜೆಇಇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಸರಳ ಹಂತಗಳನ್ನು ಅನುಸರಿಸಿ.
ಇದನ್ನೂ ಓದಿ:Career Options: NEET ಪರೀಕ್ಷೆ ಬಳಿಕ ಈ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ..!
- ಮೊದಲಿಗೆ ಜೆಇಇ ಅಡ್ವಾನ್ಸ್ನ ಅಧಿಕೃತ ವೆಬ್ಸೈಟ್ jeeadv.ac.in. ಗೆ ಭೇಟಿ ನೀಡಿ.
- ಹೋಂ ಪೇಜ್ನಲ್ಲಿ ಲಭ್ಯವಿರುವ ಜೆಇಇ ಅಡ್ವಾನ್ಸ್ಡ್ 2021 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆಗ ಹೊಸ ಪೇಜ್ ಓಪನ್ ಆಗುತ್ತದೆ, ಅಭ್ಯರ್ಥಿಗಳು ಅಕೌಂಟ್ಗೆ ಲಾಗಿನ್ ಆಗಿ ಅಥವಾ ರಿಜಿಸ್ಟರ್ ಆನ್ಲೈನ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಅಗತ್ಯವಾಗಿ ಕೇಳಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ತುಂಬಿರಿ.
- ಅರ್ಜಿ ಶುಲ್ಕವನ್ನು ಪಾವತಿಸಿ ಹಾಗೂ ಕೊನೆಗೆ ಸಬ್ಮಿಟ್ ಕ್ಲಿಕ್ ಮಾಡಿ.
- ಆಗ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಆಗಿರುತ್ತದೆ.
- ಕೊನೆಯಲ್ಲಿ ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಹೆಚ್ಚಿನ ಅಗತ್ಯತೆಗಾಗಿ ಅದರ ಹಾರ್ಡ್ ಕಾಪಿಯನ್ನು ಇಟ್ಟುಕೊಳ್ಳಿ.
ಜೆಇಇ ಅಡ್ವಾನ್ಸ್ ಅಧಿಕೃತ ವೆಬ್ಸೈಟ್ ಇಲ್ಲಿದೆ.
https://jeeadv.nic.in/jeeadvapp/root/loginpage.aspx
ಅರ್ಜಿ ಶುಲ್ಕ ಎಷ್ಟು?
- ಮಹಿಳಾ ಅಭ್ಯರ್ಥಿಗಳು ಹಾಗೂ ಎಸ್ಸಿ/ಎಸ್ಟಿ/ಪಿಡಬ್ಲೂಡಿ ವರ್ಗದ ಅಭ್ಯರ್ಥಿಗಳಿಗೆ 1400 ರೂಪಾಯಿ.
- ಇತರೆ ಅಭ್ಯರ್ಥಿಗಳಿಗೆ 2800 ರೂಪಾಯಿಗಳು.
ಪ್ರತೀ ವರ್ಷ, ಜೆಇಇ ಮೇನ್ನ ಟಾಪ್ 2.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಜೆಇಇ ಅಡ್ವಾನ್ಸ್ ಬರೆಯಲು ಅವಕಾಶವಿತ್ತು. ಜೆಇಇ ಅಡ್ವಾನ್ಸ್ 2021 ಪರೀಕ್ಷೆ ಅಕ್ಟೋಬರ್ 3ರಂದು ನಡೆಯಲಿದೆ.
ಐಐಟಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವವರು 1996 ಅಕ್ಟೋಬರ್ 1ರಂದು ಅಥವಾ ಬಳಿಕ ಜನಿಸಿರಬೇಕು. ಒಬ್ಬ ಅಭ್ಯರ್ಥಿಯು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಸತತ ಎರಡು ವರ್ಷಗಳಲ್ಲಿ ಎರಡು ಬಾರಿ ಮಾತ್ರ ಬರೆಯಬಹುದು.
ಇದನ್ನೂ ಓದಿ:UPSC is Hiring: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ UPSC; ಅರ್ಜಿ ಸಲ್ಲಿಸಲು ಅ.1 ಕೊನೆಯ ದಿನಾಂಕ
ಪ್ರಶ್ನೆ ಪತ್ರಿಕೆ ಹೇಗಿರುತ್ತದೆ?
ಜೆಇಇ ಅಡ್ವಾನ್ಸ್ಡ್ 2021 ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತೀ ಪತ್ರಿಕೆಗೆ 3 ಗಂಟೆಗಳ ಕಾಲ ಸಮಯವಿರುತ್ತದೆ. ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಎರಡೂ ಪತ್ರಿಕೆಗಳಿಗೆ ಹಾಜರಾಗಬೇಕು. ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಭಾಗಗಳಿರುತ್ತವೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ. ಪರೀಕ್ಷಾ ವಿಧಾನವು ಕಂಪ್ಯೂಟರ್ ಆಧಾರಿತ(CBT)ವಾಗಿರುತ್ತದೆ. ಎರಡೂ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿರುತ್ತವೆ.
ಜೆಇಇ-ಮೇನ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. 2018 ರಲ್ಲಿ, 224,000 ವಿದ್ಯಾರ್ಥಿಗಳಿಗೆ ಜೆಇಇ-ಅಡ್ವಾನ್ಸ್ಡ್ ತೆಗೆದುಕೊಳ್ಳಲು ಅನುಮತಿ ನೀಡಲಾಯಿತು. ಇದು 2017 ರಲ್ಲಿ 220,000 ಮತ್ತು 2016 ರಲ್ಲಿ 200,000ಕ್ಕಿಂತ ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ