JKPSC recruitment 2021: 173 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

Jammu and Kashmir Public Service Commission: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 7, 2021 ಆಗಿದೆ. ಒಟ್ಟು 173 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಆಯೋಗವು ಹೊಂದಿದೆ. ಅಕ್ಟೋಬರ್ 11 ರಿಂದ 13, 2021 ರವರೆಗೆ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ಕೆಲವೊಂದು ಕ್ಷೇತ್ರಗಳನ್ನು ಎಡಿಟ್ ಮಾಡಬಹುದಾಗಿದೆ.

JOB (Photo: Google)

JOB (Photo: Google)

  • Share this:

ಜಮ್ಮು ಹಾಗೂ ಕಾಶ್ಮೀರದ ಸಾರ್ವಜನಿಕ ಸೇವಾ ಆಯೋಗ (JKPSC) ಬೇರೆ ಬೇರೆ ವಿಷಯಗಳಿಗಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ಆಹ್ವಾನಿಸಿದೆ. ಸಪ್ಟೆಂಬರ್ 8 ರ ನಂತರ ಅರ್ಹ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್ jkpsc.nic.in ನಲ್ಲಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 7, 2021 ಆಗಿದೆ. ಒಟ್ಟು 173 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಆಯೋಗವು ಹೊಂದಿದೆ. ಅಕ್ಟೋಬರ್ 11 ರಿಂದ 13, 2021 ರವರೆಗೆ ಅಭ್ಯರ್ಥಿಗಳು ತಮ್ಮ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ಕೆಲವೊಂದು ಕ್ಷೇತ್ರಗಳನ್ನು ಎಡಿಟ್ ಮಾಡಬಹುದಾಗಿದೆ.


Read Also - IBPS RRB Result: ಆರ್‌ಆರ್‌ಬಿ ಆಫೀಸ್ ಅಸಿಸ್ಟೆಂಟ್ ಪರೀಕ್ಷೆ ಫಲಿತಾಂಶ ಬಿಡುಗಡೆ. ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ..

ಅಭ್ಯರ್ಥಿಗಳಿಗೆ ಸಂದರ್ಶನವನ್ನು JKPSC ಯ ಪ್ರಧಾನ ಕಚೇರಿಯಾದ ಸೋಲಿನಾ ಶ್ರೀನಗರ್ ಅಥವಾ ರೇಶಮ್‌ಗರ್ ಕಾಲೋನಿ, ಭಕ್ಷಿ ನಗರ್ ಜಮ್ಮುವಿನಲ್ಲಿ ಆಯೋಜಿಸಲಾಗಿದೆ ಎಂದು ಅಧಿಕೃತ ಸೂಚನೆ ತಿಳಿಸಿದೆ. ಹುದ್ದೆಗಳ ವಿವರಗಳು ಈ ರೀತಿ ಇದ್ದು ಯಾವ ಹುದ್ದೆಗಳಿಗೆ ಎಷ್ಟು ಅವಕಾಶಗಳಿವೆ ಎಂಬ ಮಾಹಿತಿಯನ್ನು ವೆಬ್‌ಸೈಟ್ ಪ್ರಸ್ತುತಪಡಿಸಿದೆ.


ಹುದ್ದೆಗಳ ವಿವರ:


ಗಣಿತ- 5, ಬಯೋ-ಕೆಮಿಸ್ಟ್ರಿ -2, ಪರಿಸರ ವಿಜ್ಞಾನ -15, ಎಲೆಕ್ಟ್ರಾನಿಕ್ಸ್- 3,ಕಂಪ್ಯೂಟರ್ ಅಪ್ಲಿಕೇಶನ್/ ಬಿಸಿಎ/ ಎಂಸಿಎ -1,ಭೂಗೋಳ -8,ಶಿಕ್ಷಣ -6,ಹಿಂದಿ -12,ರಾಜ್ಯಶಾಸ್ತ್ರ- 23,ಉರ್ದು/ಲಿಟ್ -15,ಅರ್ಥಶಾಸ್ತ್ರ- 14,ಇತಿಹಾಸ- 10,ತತ್ವಶಾಸ್ತ್ರ- 5,ಸಮಾಜಶಾಸ್ತ್ರ- 26, ಅಂಕಿಅಂಶಗಳು- 1,ಇಸ್ಲಾಮಿಕ್ ಅಧ್ಯಯನ- 5,ವಾಣಿಜ್ಯ- 3,ರೇಷ್ಮೆ ಕೃಷಿ- 1,ಪ್ರವಾಸ ಮತ್ತು ಪ್ರಯಾಣ- 2,ಮಾಹಿತಿ ಮತ್ತು ತಂತ್ರಜ್ಞಾನ- 7,ಕೈಗಾರಿಕಾ ರಸಾಯನಶಾಸ್ತ್ರ -1,ಜೈವಿಕ ಮಾಹಿತಿ- 3, ಬಿಬಿಎ/ಎಂಬಿಎ ಮತ್ತು ನಿರ್ವಹಣೆ- 5 ಹೀಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಹೆಸರು ಮತ್ತು ಖಾಲಿ ಇರುವ ಹುದ್ದೆಗಳ ವಿವರಗಳನ್ನು ನೀಡಲಾಗಿದೆ.


ವಯೋಮಿತಿ:


ಈ ಹುದ್ದೆಗಳಿಗೆ ವಯಸ್ಸಿನ ಮಿತಿಯನ್ನು ಆಯೋಗವು ಪ್ರಕಟಿಸಿದ್ದು ಮೆರಿಟ್ ಕ್ಯಾಟಗರಿಯವರು 40 ರ ಹರೆಯಕ್ಕಿಂತ ಹೆಚ್ಚಾಗಿರಬಾರದು ಮತ್ತು ಜನವರಿ 1, 2003 ರ ನಂತರ ಹಾಗೂ ಜನವರಿ 1, 1981 ರ ಮುನ್ನ ಜನಿಸಿರಬೇಕು ಎಂದು ತಿಳಿಸಿದೆ. RBA, SC, ST, EWS, ALC/IB, PSP ಮತ್ತು OSC ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 43 ವರ್ಷಗಳಿಗಿಂತ ಹೆಚ್ಚು ವಯೋಮಾನದವರಾಗಿರಬಾರದು ಮತ್ತು ಜನವರಿ 1, 2003 ರ ನಂತರ ಜನಿಸಿರಬೇಕು ಅಥವಾ ಜನವರಿ 1, 1978 ರ ನಂತರ ಜನಿಸಿರಬೇಕು. ಇನ್ನು PHC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 42 ವರ್ಷಗಳಿಗಿಂತ ಹೆಚ್ಚು ವಯೋಮಾನದವರಾಗಿರಬಾರದು ಮತ್ತು ಜನವರಿ 1, 2003 ಕ್ಕಿಂತ ಮೊದಲು ಜನಿಸಿದವರು ಅಥವಾ ಜನವರಿ 1, 1977 ರ ನಂತರ ಜನಿಸಿದವರಾಗಿರಬೇಕು ಎಂದು ಆಯೋಗ ತಿಳಿಸಿದೆ.




Read Also: ಮುಂದೊಂದು ದಿನ ನಿರುದ್ಯೋಗ ಖಂಡಿತಾ; ಮೆಕೆನ್ಸಿ ಅಧ್ಯಯನ

ಅಪ್ಲಿಕೇಶನ್ ಶುಲ್ಕ:


ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಅಗತ್ಯ ಶುಲ್ಕವಾಗಿ ₹ 1000 ಪಾವತಿಸಬೇಕು. ಕಾಯ್ದಿರಿಸಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ₹ 500 ಅನ್ನು ಅಗತ್ಯ ಶುಲ್ಕವಾಗಿ ಪಾವತಿಸಬೇಕು ಎಂದು ಆಯೋಗ ಖಾತ್ರಿಪಡಿಸಿದೆ.


First published: