IRCTC Jobs: ರೈಲ್ವೆ ಇಲಾಖೆಯ 60 ಹುದ್ದೆಗಳಿಗೆ ನಾಳೆಯೇ ವಾಕ್​ ಇನ್​ ಇಂಟರ್​ವ್ಯೂ

ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಬಳಿಕ ಗರಿಷ್ಠ ಒಂದು ವರ್ಷ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುವುದು.  

ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಬಳಿಕ ಗರಿಷ್ಠ ಒಂದು ವರ್ಷ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುವುದು.  

ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಬಳಿಕ ಗರಿಷ್ಠ ಒಂದು ವರ್ಷ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುವುದು.  

  • Share this:
    ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (Indian Railway Catering and Tourism Corporation) ಹಾಸ್ಪಿಟಾಲಿಟಿ ಮಾನಿಟರ್ (Hospitality Monitors)​​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದ್ದು, ಆಸಕ್ತರು ಆಗಸ್ಟ್​ 28ರಂದು ನಡೆಯುವ ವಾಕ್​-ಇನ್​-ಇಂಟರ್​ವ್ಯೂನಲ್ಲಿ ಭಾಗಿಯಾಗಬಹುದಾಗಿದೆ. 

    ಈ ಹುದ್ದೆಗಳನ್ನು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ನೇಮಕಾತಿ ನಡೆಸಲಾಗುತ್ತಿದೆ. ಬಳಿಕ ಗರಿಷ್ಠ ಒಂದು ವರ್ಷ ಹುದ್ದೆ ಅವಧಿ ವಿಸ್ತರಣೆ ಮಾಡಲಾಗುವುದು.  ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.




























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC)
    ಹುದ್ದೆಹಾಸ್ಪಿಟಾಲಿಟಿ ಮಾನಿಟರ್ಸ್
    ಒಟ್ಟು ಹುದ್ದೆ60
    ಕಾರ್ಯ ನಿರ್ವಹಣೆ ಸ್ಥಳಆಂಧ್ರ ಪ್ರದೇಶ - ತೆಲಂಗಾಣ - ಮಹಾರಾಷ್ಟ್ರ - ಒಡಿಶಾ
    ವೇತನ30000 ರೂ ಪ್ರತಿ ತಿಂಗಳು


    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹಾಸ್ಪಿಟಾಲಿಟಿ ಮತ್ತು ಹೋಟೆಲ್ ಮ್ಯಾನೇಜ್​ಮೆಂಟ್​ನಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.

    ಇದನ್ನು ಓದಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿದೆ ಉದ್ಯೋಗ; ಬೇಗ ಅರ್ಜಿ ಸಲ್ಲಿಸಿ

    ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ಗರಿಷ್ಠ 28 ವರ್ಷಗಳು ಮೀರಿರಬಾರದು.

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ವಾಕ್-ಇನ್ ಸಂದರ್ಶನ ಸ್ಥಳದ ವಿವರಗಳು
    ಭುವನೇಶ್ವರ್, ಒಡಿಶಾ: ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್​ಐ), ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹತ್ತಿರ, ವಿಎಸ್​ಎಸ್​. ನಗರ್, ಭುವನೇಶ್ವರ್, ಒಡಿಶಾ - 751007
    ಹೈದರಾಬಾದ್, ತೆಲಂಗಾಣ: ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಎಚ್​ಐ), ಎಫ್-ರೋ, ವಿದ್ಯಾ ನಗರ, DD ಕಾಲೋನಿ, ಹೈದರಾಬಾದ್, ತೆಲಂಗಾಣ - 500007

    ಇದನ್ನು ಓದಿ: ಉಡುಪಿ ಕೋರ್ಟ್​ನಲ್ಲಿದೆ ಟೈಪಿಸ್ಟ್​ ಹುದ್ದೆ; ತಿಂಗಳಿಗೆ 42000ದವರೆಗೆ ವೇತನ

    ಪ್ರಮುಖ ದಿನಾಂಕಗಳು
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 08 ಆಗಸ್ಟ್​​ 2022
    ವಾಕ್-ಇನ್ ದಿನಾಂಕ: 24- 28 ಆಗಸ್ಟ್ 2022

    ವಾಕ್​ ಇನ್​ ಇಂಟರ್​ವ್ಯೂ ನಡೆಯುವ ಸ್ಥಳ ಮತ್ತು ದಿನಾಂಕ
    ಭುವನೇಶ್ವರ್, ಒಡಿಶಾ 24-25 ಆಗಸ್ಟ್ 2022
    ಹೈದರಾಬಾದ್, ತೆಲಂಗಾಣ 27-28 ಆಗಸ್ಟ್ 2022

    ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: irctc.co.in

    ನೇರ ಸಂದರ್ಶನದಲ್ಲಿ ಅಗತ್ಯವಾಗಿ ಕೊಂಡೊಯ್ಯಬೇಕಾದ ದಾಖಲೆ

    ಆಸಕ್ತ ಅಭ್ಯರ್ಥಿಗಳು ಭರ್ತಿಯಾದ ಅರ್ಜಿಯನ್ನು ನೇರ ಸಂದರ್ಶನಕ್ಕೆ ಕೊಂಡೊಯ್ಯವುದು ಅವಶ್ಯ.
    ಪದವಿ ಮತ್ತು 10ನೇ ತರಗತಿ ಮಾರ್ಕ್ಸ್​ ಕಾರ್ಡ್​​
    ಸಕ್ಷಮ ಅಧಿಕಾರಿಗಳು ನೀಡಿದ ಅನುಭವ ಪ್ರಮಾಣಪತ್ರಗಳು/ಯಾವುದೇ ಸಂಬಂಧಿತ ಪ್ರಮಾಣಪತ್ರಗಳು/ ಪ್ರಶಂಸಾಪತ್ರಗಳು.
    ಜಾತಿ ಪ್ರಮಾಣ ಪತ್ರ
    ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ ಅತ್ಯಗತ್ಯ
    ಶೈಕ್ಷಣಿಕ ಅರ್ಹತೆ ಸಂಬಂಧಿಸಿದ ಯಾವುದೇ ಇತರ ಸಂಬಂಧಿತ ಮಾಹಿತಿ.
    Published by:Seema R
    First published: