Campus Selection: ಐಟಿ ಕಂಪನಿಗಳು ಹೆಚ್ಚಾಗಿ ಫ್ರೆಶರ್​​ಗಳನ್ನೇ ಕೆಲಸಕ್ಕೆ ತಗೋತಿರೋದು ಯಾಕೆ? ಕಾರಣ ಇಲ್ಲಿದೆ

ಕಾಗ್ನಿಜೆಂಟ್‍ ಕಂಪನಿಯ ಉದ್ಯೋಗ ತೊರೆಯುವವರ ಪ್ರಮಾಣ ಗರಿಷ್ಠ ಶೇ. 31ರಷ್ಟಿದ್ದರೆ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ವಿಪ್ರೋದಲ್ಲಿ ಈ ಪ್ರಮಾಣ ಕ್ರಮವಾಗಿ ಶೇ. 25.5, ಶೇ. 24 ಹಾಗೂ ಶೇ. 22.7ರಷ್ಟಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉದ್ಯೋಗ(Job) ತೊರೆಯುವವರ ಪ್ರಮಾಣ ಏರುಮುಖವಾಗಿರುವುದರಿಂದ ಹೊಸ ಅಭ್ಯರ್ಥಿಗಳಿಗೆ(Fresher's) ಭಾರಿ ಬೇಡಿಕೆಯ ವಾತಾವರಣ ಸೃಷ್ಟಿಯಾಗಿದ್ದು, ಭಾರತದ ಪ್ರತಿಷ್ಠಿತ ಐಟಿ ಕಂಪನಿಗಳು(IT Companies) ಕ್ಯಾಂಪಸ್‍ ನೇಮಕಾತಿಯನ್ನು(Campus Recruitment ) ದ್ವಿಗುಣಗೊಳಿಸಿವೆ. ಉದ್ಯೋಗ ಮಾರುಕಟ್ಟೆ(Employment Market) ನಿಧಾನಗೊಳ್ಳುವ ಯಾವುದೇ ಲಕ್ಷಣಗಳು ಕಂಡು ಬಾರದೇ ಇರುವುದರಿಂದ ಮುಂದಿನ ಆರ್ಥಿಕ ವರ್ಷದಲ್ಲೂ(Financial Year) ಹೊಸ ಅಭ್ಯರ್ಥಿಗಳ ನೇಮಕ ಪ್ರಮಾಣ ಇದೇ ವೇಗದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

TWITCH ಎಂಬ ಸಂಕ್ಷಿಪ್ತ ನಾಮದಿಂದ ಕರೆಸಿಕೊಳ್ಳುವ TCS, Wipro, Infosys, Tech Mahindra, Cognizant, HCL Tech ಕಂಪನಿಗಳ ಹೊಸ ಅಭ್ಯರ್ಥಿಗಳ ನೇಮಕಾತಿ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಕಾಗ್ನಿಜೆಂಟ್ ಅಮೆರಿಕದಲ್ಲೂ ಪಟ್ಟಿಯಾಗಿದ್ದು, ಭಾರತೀಯ ಪ್ರತಿಸ್ಪರ್ಧಿ ಕಂಪನಿಗಳ ವ್ಯವಹಾರ ಹಾಗೂ ಗ್ರಾಹಕರ ವಿವರಗಳಲ್ಲಿ ಸಾಮ್ಯತೆ ಹೊಂದಿದೆ. ಹೀಗಾಗಿ ಅದರ ಗರಿಷ್ಠ ಪ್ರಮಾಣದ ನೌಕರರು ಭಾರತ ಮೂಲದವರಾಗಿದ್ದಾರೆ.

ಹೆಚ್ಚೆಚ್ಚು ಉದ್ಯೋಗಿಗಳ ನೇಮಕ

2021ರ ಆರ್ಥಿಕ ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗಿದ್ದ 99,000 ಪದವೀಧರರಿಗೆ ಹೋಲಿಸಿದರೆ 2022ರ ಆರ್ಥಿಕ ವರ್ಷದಲ್ಲಿ TWITCH ಸಮೂಹವು ಒಗ್ಗೂಡಿ 2.15 ಲಕ್ಷ ಪದವೀಧರರನ್ನು ನೇಮಕ ಮಾಡಿಕೊಂಡಿದೆ. ಈ ಪೈಕಿ ಕಾಗ್ನಿಜೆಂಟ್‍ ನೇಮಕ ಮಾಡಿಕೊಳ್ಳುವ ಸಂಖ್ಯೆಯು ಜನವರಿ-ಡಿಸೆಂಬರ್ ಕ್ಯಾಲೆಂಡರ್ ವರ್ಷಕ್ಕೆ ಸೇರಿದೆ.

ಇದನ್ನೂ ಓದಿ:SAIL Recruitment 2022: PUC, ITI, ಡಿಪ್ಲೊಮಾ ಪಾಸಾದವರಿಗೆ ಸ್ಟೀಲ್​ ಅಥಾರಿಟಿ ಆಫ್ ಇಂಡಿಯಾದಲ್ಲಿ ಉದ್ಯೋಗ

ಈ ಬೆಳವಣಿಗೆಯು ಕಂಪನಿಗಳು ಉದ್ಯೋಗ ತೊರೆಯುವವರ ಪ್ರಮಾಣ ಏರುಮುಖವಾಗಿರುವುದಕ್ಕೆ ಸಾಕ್ಷಿಯಾಗಿರುವುದರಿಂದ ಕಂಡು ಬಂದಿದೆ.

ಫ್ರೆಶರ್​ಗಳ ನೇಮಕಕ್ಕೆ ಕಾರಣ ಇದು

ಕಾಗ್ನಿಜೆಂಟ್‍ ಕಂಪನಿಯ ಉದ್ಯೋಗ ತೊರೆಯುವವರ ಪ್ರಮಾಣ ಗರಿಷ್ಠ ಶೇ. 31ರಷ್ಟಿದ್ದರೆ, ಇನ್ಫೋಸಿಸ್, ಟೆಕ್ ಮಹೀಂದ್ರಾ ಮತ್ತು ವಿಪ್ರೋದಲ್ಲಿ ಈ ಪ್ರಮಾಣ ಕ್ರಮವಾಗಿ ಶೇ. 25.5, ಶೇ. 24 ಹಾಗೂ ಶೇ. 22.7ರಷ್ಟಿದೆ. ಕಾರ್ಯನಿರ್ವಾಹಕರ ಪ್ರತಿಕ್ರಿಯೆಯನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಉದ್ಯೋಗ ತೊರೆಯುವವರ ದರ ಗರಿಷ್ಠ ಪ್ರಮಾಣದಲ್ಲೇ ಇರಲಿದ್ದು, ಮುಂದಿನ ತ್ರೈಮಾಸಿಕಗಳಲ್ಲೂ ಈ ಪ್ರವೃತ್ತಿ ಮುಂದುವರಿಯುವ ಸೂಚನೆಗಳಿವೆ.

“ನಾವೀಗ ಸದೃಢ ಬೇಡಿಕೆಯ ವಾತಾವರಣದಲ್ಲಿದ್ದೇವೆ. ನಾವು ಖಂಡಿತವಾಗಿ ಈ ಪರಿಸ್ಥಿತಿಯಲ್ಲಿದ್ದೇವೆ. ನನ್ನ ಗ್ರಹಿಕೆಯ ಪ್ರಕಾರ, ಪ್ರತಿಭೆಗಳಿಗಾಗಿ ಈ ಹಿಂದೆಂದೂ ಕಾಣದಂತಹ ಪೈಪೋಟಿ ಶುರುವಾಗಿದೆ” ಎಂದು ಕಳೆದ ವಾರದ ಗಳಿಕೆಯ ಮಾತುಕತೆಯಲ್ಲಿ ಕಾಗ್ನಿಜೆಂಟ್‍ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬ್ರಯಾನ್ ಹಂಫೈರ್ಸ್ ಹೇಳಿದ್ದಾರೆ. ಇದರೊಂದಿಗೆ ತಮ್ಮ ಕಂಪನಿಯು ಈ ವರ್ಷಪೂರ್ತಿ ಉದ್ಯೋಗ ತೊರೆಯುವವರ ಸಂಖ್ಯೆಯಲ್ಲಿ ಏರುಗತಿ ಕಾಣುವ ನಿರೀಕ್ಷೆ ಇದೆ. ಹೀಗಾಗಿ ತಮ್ಮ ಕಂಪನಿಯು ವ್ಯವಹಾರದ ಮೇಲಿನ ದುಷ್ಪರಿಣಾಮವನ್ನು ತಗ್ಗಿಸಲು ಹಾಗೂ ಕನಿಷ್ಠಗೊಳಿಸಲು ತೀವ್ರ ಪರಿಶ್ರಮ ಪಡುತ್ತಿದೆ ಎಂದೂ ಹೇಳಿದ್ದಾರೆ.

ಐಟಿ ಕಂಪನಿಗಳು ವ್ಯಕ್ತಪಡಿಸಿರುವ ಪ್ರಮುಖ ಕಳವಳವಿದು. ಜನವರಿಯಲ್ಲಿ ನಡೆದ ಗಳಿಕೆಯ ಮಾತುಕತೆಯಲ್ಲಿ ಮಾತನಾಡಿದ್ದ ಇನ್ಫೋಸಿಸ್‍ನ ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್, “ಉದ್ಯೋಗ ತೊರೆಯುವಿಕೆಗೆ ಸಂಬಂಧಿಸಿದಂತೆ ಹೇಳುವುದಾದರೆ, ಇದು ದೊಡ್ಡ ಪ್ರಮಾಣದ ಔದ್ಯಮಿಕ ಸಮಸ್ಯೆ. ಈ ಸಮಸ್ಯೆಯು ನಮಗೆ ವಿಚಿತ್ರವಾದುದೇನೂ ಅಲ್ಲ. ಈ ಉದ್ಯಮದ ಗಾತ್ರವು ಮೂಲಭೂತವಾಗಿ ಹೊಸ ಅಭ್ಯರ್ಥಿಗಳಿಂದಲೇ ಹಿಗ್ಗಿದೆ” ಎಂದು ಹೇಳಿದ್ದಾರೆ.

ಈ ಸಮಸ್ಯೆಯೊಂದಿಗೆ ಹೋರಾಡಲು ಎಲ್ಲ ಕಂಪನಿಗಳೂ ಹೊಸ ಅಭ್ಯರ್ಥಿಗಳ ನೇಮಕಾತಿ ಕ್ರಮದ ಮೊರೆ ಹೋಗಿವೆ.

ಇದನ್ನೂ ಓದಿ:KPTCL Recruitment 2022: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, Last Date ಯಾವಾಗ ಗೊತ್ತಾ?

ಫ್ರೆಶರ್​​ಗಳ ನೇಮಕಾತಿಯಿಂದ ಲಾಭ ಹೆಚ್ಚು

ಹೊಸ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದರಿಂದ ಬಹುವಿಧದ ಲಾಭಗಳಿವೆ. ಪ್ರತಿಭೆಗಳಿಗಾಗಿನ ಯುದ್ಧ ತೀವ್ರಗೊಳ್ಳುತ್ತಿದ್ದು, ನುರಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದು ದುಬಾರಿ ಮಾತ್ರವಲ್ಲ; ಬದಲಿಗೆ ಉದ್ಯೋಗ ತೊರೆಯುವವರ ಮೇಲೆ ಅವಲಂಬಿತವಾಗುವುದೂ ಕಠಿಣವೇ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರತಿಭಾ ಸಲಹಾ ಸಂಸ್ಥೆ ಡೈಮಂಡ್‍ ಪಿಕ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಜೆಯರಾಮನ್, ಹೊಸ ಅಭ್ಯರ್ಥಿಗಳ ನೇಮಕಾತಿ ಐಟಿ ಕಂಪನಿಗಳ ಪಾಲಿಗೆ ಅದ್ಭುತ ನೌಕರಿ ಕಾರ್ಯಸೂಚಿ ಎಂದು ಹೇಳಿದ್ದಾರೆ. “ಕಾರಣ: ನೀವು ಹೊಸ ಅಭ್ಯರ್ಥಿಗಳನ್ನು ಪಿರಮಿಡ್‍ನ ತಳ ಮಟ್ಟದಲ್ಲಿ ನೇಮಕ ಮಾಡಿಕೊಳ್ಳುವುದರಿಂದ, ಅವರಿಗೆ ತರಬೇತಿ ನೀಡುವುದರಿಂದ, ಅವರನ್ನು ಅರ್ಥಪೂರ್ಣ ಕೆಲಸಗಳಲ್ಲಿ ತೊಡಗಿಸುವುದರಿಂದ, ಅವರು ಕೆಲಸವನ್ನು ಬೇಗ ಜೀರ್ಣಿಸಿಕೊಂಡು ಶೀಘ್ರವಾಗಿ ಉತ್ಪಾದನಾಕಾರಿಯಾಗುತ್ತಾರೆ” ಎಂದು ವಿವರಿಸಿದ್ದಾರೆ.
Published by:Latha CG
First published: