ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ISRO) ನಮ್ಮ ದೇಶದ ಹೆಮ್ಮೆ. ಎಷ್ಟೋ ಪ್ರತಿಭಾವಂತರು ಇಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಾರೆ. ಅಂಥವರಿಗೆ ಗುಡ್ ನ್ಯೂಸ್ ಇಲ್ಲಿದೆ. ಇಸ್ರೋ ವಿಜ್ಞಾನಿಗಳು ಮತ್ತು ಇಂಜಿನಿಯರ್ಗಳನ್ನು (engineers) ನೇಮಿಸಿಕೊಳ್ಳಲು ಮುಂದಾಗಿದೆ. ಹುದ್ದೆಗಳ ಭರ್ತಿಗಾಗಿ ನೋಟಿಫಿಕೇಷನ್ ಅನ್ನು ಹೊರಡಿಸಿದೆ. ಆಸಕ್ತಿವುಳ್ಳ, ಅರ್ಹ ಅಭ್ಯರ್ಥಿಗಳು ಈ ಕೆಳಗೆ ಮಾಹಿತಿ ನೀಡಲಾದ ಕ್ರಮದಲ್ಲಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು: | ಇಸ್ರೋ |
ಹುದ್ದೆ: | ಸೈಟಿಸ್ಟ್ ಇಂಜಿನಿಯರ್ |
ಒಟ್ಟು ಹುದ್ದೆಗಳು: | 68 |
ವಿದ್ಯಾರ್ಹತೆ: | ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪಾಸ್ |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | ಡಿಸೆಂಬರ್ 19, 2022 |
ವಯೋಮಿತಿ: | 28 ವರ್ಷ ಮೀರಿರಬಾರದು |
ಆಯ್ಕೆ ವಿಧಾನ: | ಲಿಖಿತ ಪರೀಕ್ಷೆ |
ಮೆಕ್ಯಾನಿಕಲ್ ಇಂಜಿನಿಯರ್: 33
ಎಲೆಕ್ಟ್ರಾನಿಕ್ಸ್ ಇಂಜಿನಿಯರ್: 21
ಕಂಪ್ಯೂಟರ್ ಸೈನ್ಸ್ ಇಂಜಿನಿಯರ್: 14
ಇದನ್ನೂ ಓದಿ: SSR Recruitment 2022: ಬರೋಬ್ಬರಿ 1,400 ಹುದ್ದೆಗಳ ಭರ್ತಿಗೆ ಭಾರತೀಯ ನೌಕಾಪಡೆಯಿಂದ ಅರ್ಜಿ ಆಹ್ವಾನ
ವಿದ್ಯಾರ್ಹತೆಯ ಷರತ್ತು:
ಬಿಇ/ ಬಿ ಟೆಕ್ ಅನ್ನು ಶೇ.65 ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಆಯ್ಕೆ ವಿಧಾನ
ಗೇಟ್ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. 100 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ ಮಾಹಿತಿಯನ್ನು ಸರಿಯಾಗಿ ತುಂಬಿ
ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ