• Home
  • »
  • News
  • »
  • jobs
  • »
  • ISRO Recruitment 2022: ಬಿಇ/ಬಿ.ಟೆಕ್ ಆಗಿದ್ರೆ ಇಸ್ರೋದಲ್ಲಿದೆ ಬಂಪರ್ ಉದ್ಯೋಗ, ತಿಂಗಳಿಗೆ ₹ 56,000 ಸಂಬಳ

ISRO Recruitment 2022: ಬಿಇ/ಬಿ.ಟೆಕ್ ಆಗಿದ್ರೆ ಇಸ್ರೋದಲ್ಲಿದೆ ಬಂಪರ್ ಉದ್ಯೋಗ, ತಿಂಗಳಿಗೆ ₹ 56,000 ಸಂಬಳ

ಇಸ್ರೋ

ಇಸ್ರೋ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಒಡಿಶಾದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಡಿಸೆಂಬರ್ 19, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು.

  • Share this:

    ISRO Recruitment 2022: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 68 ಸೈಂಟಿಸ್ಟ್​/ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಒಡಿಶಾದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಡಿಸೆಂಬರ್ 19, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅರ್ಜಿ ಹಾಕಬೇಕು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
    ಹುದ್ದೆಯ ಹೆಸರುಸೈಂಟಿಸ್ಟ್​/ಎಂಜಿನಿಯರ್
    ಹುದ್ದೆ68
     ಉದ್ಯೋಗದ ಸ್ಥಳಆಂಧ್ರ ಪ್ರದೇಶ, ಕೇರಳ, ಕರ್ನಾಟಕ, ಒಡಿಶಾ
    ವೇತನಮಾಸಿಕ ₹ 56,100

    ಹುದ್ದೆಯ ಮಾಹಿತಿ:
    ಸೈಂಟಿಸ್ಟ್​/ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​)- 21
    ಸೈಂಟಿಸ್ಟ್​/ಎಂಜಿನಿಯರ್ (ಮೆಕ್ಯಾನಿಕಲ್)- 33
    ಸೈಂಟಿಸ್ಟ್​/ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್​)- 14


    ಇದನ್ನೂ ಓದಿ: Government Job: ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 2 ಲಕ್ಷದವರೆಗೆ


    ವಿದ್ಯಾರ್ಹತೆ:
    ಸೈಂಟಿಸ್ಟ್​/ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​)- ECE ವಿಭಾಗದಲ್ಲಿ ಬಿಇ/ಬಿ.ಟೆಕ್
    ಸೈಂಟಿಸ್ಟ್​/ಎಂಜಿನಿಯರ್ (ಮೆಕ್ಯಾನಿಕಲ್)- ಮೆಕ್ಯಾನಿಕಲ್ ಎಂಜಿನಿಯರಿಂಗ್ ಬಿಇ/ ಬಿ.ಟೆಕ್
    ಸೈಂಟಿಸ್ಟ್​/ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್​)-ಕಂಪ್ಯೂಟರ್ ಸೈನ್ಸ್​ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್


    ವಯೋಮಿತಿ:
    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 19/12/2022 ಕ್ಕೆ 28 ವರ್ಷ ಮೀರಿರಬಾರದು.


    ಅರ್ಜಿ ಶುಲ್ಕ:
    ಎಸ್​​ಸಿ/ಎಸ್​ಟಿ/ ಮಹಿಳಾ/PWD/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.
    ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 250 ರೂ.
    ಪಾವತಿಸುವ ಬಗೆ- ಆನ್​ಲೈನ್​/ಆಫ್​ಲೈನ್


    ಆಯ್ಕೆ ಪ್ರಕ್ರಿಯೆ:
    ಗೇಟ್ ಸ್ಕೋರ್
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಇದನ್ನೂ ಓದಿ: NIVEDI Recruitment 2022: ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ 34,000 ಸಂಬಳ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ:29/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 19/12/2022
    ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ: 21/12/2022

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು