ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ (Indian Railway Finance Corporation Limited) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯೂಟಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿ ನಡೆಯಲಿದೆ. ಯಾವುದೇ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂ 20 ಆಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.
ಸಂಸ್ಥೆಯ ಹೆಸರು: ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (IRFC)
ಹುದ್ದೆಗಳ ಸಂಖ್ಯೆ: 3
ಉದ್ಯೋಗ ಸ್ಥಳ: ನವದೆಹಲಿ
ಹುದ್ದೆಯ ಹೆಸರು: ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು
ಸಂಬಳ: ರೂ.40000- 300000 ರೂ ಪ್ರತಿ ತಿಂಗಳು
ಹುದ್ದೆ |
ಹುದ್ದೆ ಸಂಖ್ಯೆ |
ವಿದ್ಯಾರ್ಹತೆ |
ವಯೋಮಿತಿ |
ಉಪ ವ್ಯವಸ್ಥಾಪಕರು (ಫೈನಾನ್ಸ್) |
1 |
ಸಿಎ, ಸಿಎಂಎ, ಪದವಿ, ಎಂಬಿಯ ವ್ಯವಹಾರ ಆಡಳಿತ/ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ |
52 |
ಉಪ ವ್ಯವಸ್ಥಾಪಕರು (ಎಚ್ಆರ್) |
1 |
ಮಾನವ ಸಂಪನ್ಮೂಲ ನಿರ್ವಹಣೆ/ಪರ್ಸನಲ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ, ಎಚ್ಆರ್/ಪರ್ಸನಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ |
38 |
ಸಹಾಯಕ ವ್ಯವಸ್ಥಾಪಕರು (ಫೈನಾನ್ಸ್ |
1 |
ಸಿಎ, ಸಿಎಂಎ, ಪದವಿ |
35 |
ಅರ್ಜಿ ಸಲ್ಲಿಕೆ ವಿಧಾನ
ಆಫ್ಲೈನ್
ಅರ್ಜಿ ಸಲ್ಲಿಕೆ ವಿಳಾ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜಂಟಿ ಜನರಲ್ ಮ್ಯಾನೇಜರ್ (ಎಚ್ಆರ್ ಮತ್ತು ಅಡ್ಮಿನ್), 3 ನೇ ಮಹಡಿ, ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್, ಅಶೋಕ್, ಡಿಪ್ಲೋಮ್ಯಾಟಿಕ್ ಎನ್ಕ್ಲೇವ್: 50-ಬಿ, ಚಾಣಕ್ಯಪುರಿ, ನವದೆಹಲಿಗೆ ಕಳುಹಿಸಬೇಕಾಗುತ್ತದೆ - 110021
ಅರ್ಜಿ ಸಲ್ಲಿಕೆ ಕಡೆಯ ದಿನ: ಜೂನ್ 20
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕ
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 16
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 20
ಇದನ್ನು ಓದಿ: ಮೆಸ್ಕಾಂನಲ್ಲಿ 183 ಹುದ್ದೆಗಳು ಖಾಲಿ; ಪದವಿ, ಡಿಪ್ಲೋಮಾ ಆಗಿದ್ರೆ ಅರ್ಜಿ ಸಲ್ಲಿಸಿ
ಪ್ರಮುಖ ಲಿಂಕ್
ಅಧಿಕೃತ ಅಧಿಸೂಚನೆಗೆ
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
irfc.co.in
ಅರ್ಜಿ ಸಲ್ಲಿಕೆ ವೇಳೆ ಸಲ್ಲಿಸಬೇಕಾದ ದಾಖಲೆ
-ಅರ್ಜಿ ನಮೂನೆಯಲ್ಲಿ ಬಣ್ಣದ ಭಾವಚಿತ್ರವನ್ನು ಅಂಟಿಸಬೇಕು.
-ಜನ್ಮ ದಿನಾಂಕದ ಪುರಾವೆ (10ನೇ ತರಗತಿ ಪ್ರಮಾಣಪತ್ರ)
-ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತೆಗಳ ಪ್ರಮಾಣಪತ್ರಗಳು ಮತ್ತು ಎಲ್ಲಾ ಅರ್ಹತೆಗಳ ಅಂಕಗಳ ಹೇಳಿಕೆಗಳು
-ಶೈಕ್ಷಣಿಕ ಅರ್ಹತೆಯ ಎಲ್ಲಾ ಪ್ರಮಾಣ ಪತ್ರ (10, ಪಿಯುಸಿ ಮತ್ತು ಪದವಿಯ ಎಲ್ಲಾ ಸೆಮಿಸ್ಟರ್ಗಳ ಅಂಕಪಟ್ಟಿ)
ಇದನ್ನು ಓದಿ: ಟ್ರೈನಿ ಮೈನಿಂಗ್ ಇಂಜಿನಿಯರಿಂಗ್ ಹುದ್ದೆಗೆ ವಾಕ್-ಇನ್-ಇಂಟರ್ವ್ಯೂ
-ಜಾತಿ ಪ್ರಮಾಣ ಪತ್ರ
-ಗುರುತಿನ ಮತ್ತು ವಿಳಾಸದ ಪುರಾವೆ (ಪಾಸ್ಪೋರ್ಟ್/ವೋಟರ್ ಐಡಿ/ಚಾಲನಾ ಪರವಾನಗಿ/ಯುಐಎಡಿ ಆಧಾರ್ ಕಾರ್ಡ್.)
-ಪ್ಯಾನ್ ಕಾರ್ಡ್
-ನಿಮ್ಮ ಅಪ್ಲಿಕೇಶನ್ನಲ್ಲಿ ಕ್ಲೈಮ್ ಮಾಡಿರುವಂತೆ ವಿವಿಧ ಅವಧಿಯ ಅನುಭವದ ಪುರಾವೆ. (ಅನ್ವಯವಾದಲ್ಲಿ)
-ನಿಮ್ಮ ಉಮೇದುವಾರಿಕೆಯನ್ನು ಬೆಂಬಲಿಸುವ ಯಾವುದೇ ಇತರ ಡಾಕ್ಯುಮೆಂಟ್ ಅಂದರೆ NOC ಅನ್ವಯಿಸಿದರೆ ಮತ್ತು 12 ತಿಂಗಳ ಸಂಬಳ ಪ್ರಮಾಣಪತ್ರ
-ಅಭ್ಯರ್ಥಿಗಳು ಸರ್ಕಾರಿ/ಪಿಎಸ್ಯುಗಳನ್ನು ಹೊರತುಪಡಿಸಿ ಕೆಲಸ ಮಾಡುತ್ತಿದ್ದರೆ.
- ಉಮೇದುವಾರಿಕೆಯನ್ನು ಬೆಂಬಲಿಸುವ ಯಾವುದೇ ಇತರ ದಾಖಲೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ