Job Alert: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ; ಇಲ್ಲಿದೆ ಹುದ್ದೆ ವಿವರ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (India Post Payment Bank) ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ದೇಶಾದ್ಯಂತ ವಿವಿಧ ಶಾಖೆಗಳಲ್ಲಿ ಸಾಮಾನ್ಯ ಮತ್ತು ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ ಇತ್ಯಾದಿ ಹುದ್ದೆಗಳನ್ನು ಭರ್ತಿಗೆ ಮುಂದಾಗಲಾಗಿದೆ. ಆಸಕ್ತ ಮತ್ತು ಅರ್ಹ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 24 ಆಗಿದೆ.

    ಸಂಸ್ಥೆ: ಇಂಡಿಯಾ ಪೋಸ್ಟ್​ ಪೇಮೇಂಟ್ಸ್​ ಬ್ಯಾಂಕ್​
    ಹುದ್ದೆಯ ಹೆಸರು: ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ
    ಒಟ್ಟು ಹುದ್ದೆಗಳ ಸಂಖ್ಯೆ: 13
    ಕಾರ್ಯ ನಿರ್ವಹಣೆ ಸ್ಥಳ: ಅಖಿಲ ಭಾರತ
    ವೇತನ: 1,12,000- 3,50,000 ವಾರ್ಷಿಕ

    ಸಾಮಾನ್ಯ ಹುದ್ದೆಗಳು


























































    ಹುದ್ದೆ ವಿಭಾಗಹುದ್ದೆಹುದ್ದೆ ಸಂಖ್ಯೆ
    ತಂತ್ರಜ್ಞಾನಎಜಿಎಂ- ಎಂಟರ್‌ಪ್ರೈಸ್/ ಇಂಟಿಗ್ರೇಷನ್ ಆರ್ಕಿಟೆಕ್ಟ್1
    ಚೀಫ್ ಮ್ಯಾನೇಜರ್- ಐಟಿ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್1
    ಉತ್ಪನ್ನಎಜಿಎಂ- ಬಿಸಿನೆಸ್ ಸೊಲ್ಯೂಷನ್ಸ್ ಗ್ರೂಪ್1
    ಮುಖ್ಯ ವ್ಯವಸ್ಥಾಪಕರು- ಚಿಲ್ಲರೆ ಉತ್ಪನ್ನಗಳ1
    ಮುಖ್ಯ ವ್ಯವಸ್ಥಾಪಕರು- ಚಿಲ್ಲರೆ ಪಾವತಿ1
    ಕಾರ್ಯಾಚರಣೆಎಜಿಎಂ (ಕಾರ್ಯಾಚರಣೆಗಳು)1
    ಹಿರಿಯ ವ್ಯವಸ್ಥಾಪಕ (ಕಾರ್ಯಾಚರಣೆ)1
    ಅಪಾಯ ನಿರ್ವಹಣೆ ಮುಖ್ಯ ವ್ಯವಸ್ಥಾಪಕ-ವಂಚನೆ ಮಾನಿಟರಿಂಗ್1
    ಹಣಕಾಸು DGMಹಣಕಾಸು ಮತ್ತು ಖಾತೆ1
    ಮ್ಯಾನೇಜರ್ (ಪ್ರೊಕ್ಯೂರ್‌ಮೆಂಟ್)1

    ಗುತ್ತಿಗೆ ಆಧಾರಿತ ಹುದ್ದೆಗಳು























    ಹುದ್ದೆ ವಿಭಾಗಹುದ್ದೆಹುದ್ದೆ ಸಂಖ್ಯೆ
    ತಂತ್ರಜ್ಞಾನಡಿಜಿಎಂ- ಪ್ರೋಗ್ರಾಂ/ ವೆಂಡರ್ ಮ್ಯಾನೇಜ್‌ಮೆಂಟ್1
    ಕಾಂಪ್ಲಿಯನ್ಸ್​ಮುಖ್ಯ ಕಾಂಪ್ಲಿಯನ್ಸ್​ ಅಧಿಕಾರಿ1
    ಕಾರ್ಯಾಚರಣೆಆಂತರಿಕ ಒಂಬುಡ್ಸ್‌ಮನ್1

    ಶೈಕ್ಷಣಿಕ ಅರ್ಹತೆ: ನೇಮಕಾತಿ ನಿಯಮ ಅನುಸಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಅಥವಾ ತತ್ಸಮಾನ ಪದವಿಯನ್ನು ಪಡೆದಿರಬೇಕು.

    ಇದನ್ನು ಓದಿ: 778 ಪಿಯು ಉಪನ್ಯಾಸಕರ ನೇಮಕಾತಿ; ಶೀಘ್ರದಲ್ಲೇ ಹೊರಬೀಳಲಿದೆ ಅಧಿಸೂಚನೆ

    ವಯೋಮಿತಿ: ನೇಮಕಾತಿ ನಿಯಮ ಅನುಸಾರ ಅಭ್ಯರ್ಥಿಯು ಕನಿಷ್ಟ 23 ವರ್ಷ ಮತ್ತು ಗರಿಷ್ಟ 55 ವರ್ಷ ವಯೋಮಿತಿ ಹೊಂದಿರಬೇಕು.

    ಅರ್ಜಿ ಶುಲ್ಕ:
    ಸಾಮಾನ್ಯ ಅಭ್ಯರ್ಥಿಗಳು: 750 ರೂ
    ಪ.ಜಾ, ಪ.ಪಂ ಮತ್ತು ವಿಕಲಚೇತನ: 150 ರೂ.

    ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್​

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10ನೇ ಸೆಪ್ಟೆಂಬರ್ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಸೆಪ್ಟೆಂಬರ್​​ 2022

    ಇದನ್ನು ಓದಿ: 2500 ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ: ಶೀಘ್ರದಲ್ಲೇ ಅಧಿಸೂಚನೆ ಪ್ರಕಟ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: www.ippbonline.com

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಲಗತ್ತಿಸಿ

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: