IOCL Recruitment: ಇಂಡಿಯನ್​ ಆಯಿಲ್​ನಲ್ಲಿ ಐಟಿಐ ಆದವರಿಗೆ ಉದ್ಯೋಗ; 78 ಸಾವಿರ ರೂವರೆಗೆ ವೇತನ

ಅಖಿಲ ಭಾರತಾದ್ಯಂತ ಈ ನೇಮಕಾತಿ ನಡೆಯಲಿದೆ. ಇಂಜಿನಿಯರಿಂಗ್ ಅಸಿಸ್ಟೆಂಟ್, ಟೆಕ್ನಿಕಲ್ ಅಟೆಂಡೆಂಟ್ ಸೇರಿದಂತೆ ಒಟ್ಟು 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇಂಡಿಯನ್​ ಆಯಿಲ್​

ಇಂಡಿಯನ್​ ಆಯಿಲ್​

  • Share this:
    ಇಂಡಿಯನ್​ ಆಯಿಲ್​ ಕಾರ್ಪೊರೇಷನ್​​ ಲಿಮಿಟೆಡ್ (Indian Oil Corporation India) ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಅಖಿಲ ಭಾರತಾದ್ಯಂತ ಈ ನೇಮಕಾತಿ ನಡೆಯಲಿದೆ. ಇಂಜಿನಿಯರಿಂಗ್ ಅಸಿಸ್ಟೆಂಟ್, ಟೆಕ್ನಿಕಲ್ ಅಟೆಂಡೆಂಟ್ ಸೇರಿದಂತೆ ಒಟ್ಟು 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 10 ಆಗಿದೆ.

    ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಕೆಳಗಿನಂತಿವೆ.




    ಸಂಸ್ಥೆಯ ಹೆಸರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
    ಹುದ್ದೆಯ ಹೆಸರು: ಎಂಜಿನಿಯರಿಂಗ್ ಸಹಾಯಕ, ತಾಂತ್ರಿಕ ಅಟೆಂಡೆಂಟ್
    ಹುದ್ದೆಗಳ ಸಂಖ್ಯೆ: 56
    ಉದ್ಯೋಗ ಸ್ಥಳ: ಅಖಿಲ ಭಾರತ
    ವೇತನ: 23000-105000 ರೂ ಪ್ರತಿ ತಿಂಗಳು





















    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಇಂಜಿನಿಯರಿಂಗ್ ಸಹಾಯಕ23ಇಂಜಿನಿಯರಿಂಗ್​ ಪದವಿ25000-105000 ರೂ ಮಾಸಿಕ
    ತಾಂತ್ರಿಕ ಅಟೆಂಡೆಂಟ್33ಐಟಿಐ23000-78000 ರೂ ಮಾಸಿಕ

    ವಯಸ್ಸಿನ ಮಿತಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು  ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 26 ವರ್ಷಗಳನ್ನು ಹೊಂದಿರಬೇಕು.

    ಇದನ್ನು ಓದಿ: ಕೇಂದ್ರ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶ; ಎಸ್​ಎಸ್​ಸಿ ಸಿಜಿಲ್​ ಅಧಿಸೂಚನೆ ಬಿಡುಗಡೆ

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ ಮತ್ತು ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 100 ರೂ.

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ, ಕೌಶಲ್ಯ, ಪ್ರಾವೀಣ್ಯತೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಸೆಪ್ಟೆಂಬರ್​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಅಕ್ಟೋಬರ್​ 2022

    ಪ್ರಮುಖ ಲಿಂಕ್​ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: iocl.com

    ಇದನ್ನು ಓದಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ; ಇಲ್ಲಿದೆ ಹುದ್ದೆ ವಿವರ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

    - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.

    -ನಿಮ್ಮ ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಡೇಟ್​ ಮಾಡಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: