IOCL Recruitment : ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿ ಭರ್ಜರಿ ಉದ್ಯೋಗಾವಕಾಶ

ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್​ 25 ರೊಳಗೆ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು

IOCL

IOCL

  • Share this:
    ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳಿಗೆ ಇಂಡಿಯನ್ ಆಯಿಲ್​ ಕಾರ್ಪೊರೇಷನ್​ ಲಿಮಿಟೆಡ್ (IOCL Recruitment )​ ಭರ್ಜರಿ ಅವಕಾಶ ನೀಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಐಒಸಿಎಲ್​ ಮುಂದಾಗಿದೆ. ಒಟ್ಟು 469 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಡಾಟಾ ಎಂಟ್ರಿಯಿಂದ ಕಿರಿಯ ಇಂಜಿನಿಯರ್​ ಸಹಾಯಕರು, ಜ್ಯೂನಿಯರ್​ ಮೆಟಿರಿಯಲ್​ ಅಸಿಸ್ಟಂಟ್​, ಜ್ಯೂನಿಯರ್​ ಕ್ವಾಲಿಟಿ ಕಂಟ್ರಲ್​ ಅಸಿಸ್ಟಂಟ್​ ಮತ್ತು ಜ್ಯೂನಿಯರ್​ ನರ್ಸಿಂಗ್​ ಅಸಿಸ್ಟಂಟ್​​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್​ 25 ರೊಳಗೆ ಅರ್ಜಿ ಭರ್ತಿ ಮಾಡಬೇಕು

    ಹುದ್ದೆ ಕುರಿತ ವಿವರ



































    ಹುದ್ದೆ ವಿವರ ಹುದ್ದೆ ಸಂಖ್ಯೆ
    ಜ್ಯೂನಿಯರ್​ ಎಂಜಿನಿಯರ್​ ಅಸಿಸ್ಟಂಟ್​ (ಎಲೆಕ್ಟ್ರಿಕಲ್​)​ 65
    ಜ್ಯೂನಿಯರ್​ ಎಂಜಿನಿಯರ್​ ಅಸಿಸ್ಟಂಟ್​​​ (ಮೆಕ್ಯಾನಿಕಲ್​) 32
    ಜ್ಯೂನಿಯರ್​​ ಟೆಕ್ನಿಕಲ್​​ ಅಸಿಸ್ಟಂಟ್​ 37
    ಜ್ಯೂನಿಯರ್​​ ಎಂಜಿನಿಯರ್​ ಅಸಿಸ್ಟಂಟ್​ (ಫೈರ್​ ಅಂಡ್​ ಸೆಫ್ಟಿ) 14
    ಜ್ಯೂನಿಯರ್ ಕ್ವಾಲಿಟಿ ಕಂಟ್ರಲ್​ ಅನಾಲಿಸ್ಟ್ 29
    ಜ್ಯೂನಿಯರ್​ ಮೆಟಿರಿಯಲ್​ ಅಸಿಸ್ಟಂಟ್​ 4
    ಜ್ಯೂನಿಯರ್​ ನರ್ಸಿಂಗ್​ ಅಸಿಸ್ಟಂಟ್ 1

    ವಯೋಮಿತಿ (Age Limit)
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ವರ್ಷ ತುಂಬಿದ್ದು, ಗರಿಷ್ಟ 26 ವರ್ಷ ಆಗಿರಬೇಕು. ಸರ್ಕಾರದ ನಿಯಮಾವಳಿಯಂತೆ ವಯೋಮಿತಿ ಸಡಿಲಿಕೆ ಇರಲಿದೆ

    ಇದನ್ನು ಓದಿ: FSSAI ನಲ್ಲಿ 225 ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

    ಆನ್​ಲೈನ್​ ಮೂಲಕ ಅರ್ಜಿ (online application)
    ಮೇಲ್ಕಂಡ ಹುದ್ದೆಗಳಿಗೆ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ

    ವೇತನ (Salary)
    ಈ ಹುದ್ದೆಗಳಿಗೆ 25 ಸಾವಿರದಿಂದ 1.05.000ರೂವರೆಗೆ ವೇತನ ನಿಗದಿ ಮಾಡಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ (how to apply) 
    ಇಂಡಿಯನ್​ ಆಯಿಲ್​ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ಪುಟ www.iocl.com ಗೆ ಭೇಟಿ ನೀಡಬೇಕು
    ಅದರಲ್ಲಿ ಯಾವುದು ಹೊಸ ಆಯ್ಕೆಗೆ ಹೋಗಬೇಕು.
    ಅಲ್ಲಿ ರೆಫೈನರೀಸ್ ವಿಭಾಗದಲ್ಲಿ 2021 ಅನುಭವಿ ಕಾರ್ಯನಿರ್ವಾಹಕೇತರ ಸಿಬ್ಬಂದಿಯ ಅವಶ್ಯಕತೆ ಆಯ್ಕೆಗೆ ಹೋಗಬೇಕು
    ವಿವರವಾದ ಜಾಹೀರಾತು ಮೇಲೆ ಕ್ಲಿಕ್ ಮಾಡಬೇಕು
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಬೇಕು
    ಬಳಿಕ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು

    ಪ್ರಮುಖ ಲಿಂಕ್​ಗಳು (important link)
    ಮೇಲ್ಕಂಡ ಹುದ್ದೆಗೆ ಕುರಿತು ಅಧಿಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್​ ಮಾಡಿ
    Published by:Seema R
    First published: