• Home
  • »
  • News
  • »
  • jobs
  • »
  • IOCL Recruitment 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

IOCL Recruitment 2022: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

IOCL

IOCL

ಭಾರತೀಯ ತೈಲ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 10, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.

  • News18 Kannada
  • Last Updated :
  • New Delhi, India
  • Share this:

    IOCL Recruitment 2022: ಭಾರತೀಯ ತೈಲ ನಿಗಮ ನಿಯಮಿತ(Indian Oil Corporation Limited-IOCL)ದಲ್ಲಿ 465 ಅಪ್ರೆಂಟಿಸ್(Apprentice) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಅಪ್ರೆಂಟಿಸ್ ಪೋಸ್ಟ್‌ಗಳನ್ನು(Apprentice Posts) ಭರ್ತಿ ಮಾಡಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ IOCL ಅಧಿಕೃತ ಅಧಿಸೂಚನೆಯ ಅಕ್ಟೋಬರ್ 2022 ರ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು(Apply) ಆಹ್ವಾನಿಸಿದೆ. ನವೆಂಬರ್ 30, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್​ಸೈಟ್​ https://iocl.com/ ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
    ಹುದ್ದೆಯ ಹೆಸರುಅಪ್ರೆಂಟಿಸ್
    ಒಟ್ಟು ಹುದ್ದೆ465
    ವಿದ್ಯಾರ್ಹತೆಡಿಪ್ಲೋಮಾ, ಪಿಯುಸಿ, ಪದವಿ
    ಸ್ಥಳಪ್ಯಾನ್ ಇಂಡಿಯಾ
    ವೇತನನಿಯಮಾನುಸಾರ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022


    ರಾಜ್ಯಾವಾರು ಹುದ್ದೆಯ ಮಾಹಿತಿ:
    ಪಶ್ಚಿಮ ಬಂಗಾಳ-45
    ಬಿಹಾರ-36
    ಅಸ್ಸಾಂ-28
    ಉತ್ತರ ಪ್ರದೇಶ-42
    ಹರಿಯಾಣ-40
    ಪಂಜಾಬ್-12
    ದೆಹಲಿ-22
    ಉತ್ತರಾಖಂಡ-6
    ರಾಜಸ್ಥಾನ-46
    ಹಿಮಾಚಲ ಪ್ರದೇಶ-3
    ಒಡಿಶಾ-48
    ಛತ್ತೀಸ್​ಗಢ-6
    ಜಾರ್ಖಂಡ್-3
    ತಮಿಳುನಾಡು-34
    ಕರ್ನಾಟಕ-7
    ಗುಜರಾತ್-87


    ಇದನ್ನೂ ಓದಿ: Government Job: ಗದಗ ಡಿಸಿ ಆಫೀಸ್​​ನಲ್ಲಿ ಲೋಡರ್ & ಕ್ಲೀನರ್ ಹುದ್ದೆಗಳು ಖಾಲಿ, ತಿಂಗಳಿಗೆ 28 ಸಾವಿರ ಸಂಬಳ


    ಟ್ರೇಡ್ ಆಧಾರಿತ ಹುದ್ದೆಗಳ ವಿವರ:


    ಮೆಕ್ಯಾನಿಕಲ್- 136
    ಎಲೆಕ್ಟ್ರಿಕಲ್- 131
    ಟಿ & ಐ- 121
    ಹ್ಯೂಮನ್ ರಿಸೋರ್ಸ್​- 27
    ಅಕೌಂಟ್ಸ್​/ ಫೈನಾನ್ಸ್​-26
    ಡಾಟಾ ಎಂಟ್ರಿ ಆಪರೇಟರ್ (DEO)-13
    ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ (DEO)-11


    ವಿದ್ಯಾರ್ಹತೆ:
    ಮೆಕ್ಯಾನಿಕಲ್- ಮೆಕ್ಯಾನಿಕಲ್/ ಆಟೋ ಮೊಬೈಲ್ ಎಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ
    ಎಲೆಕ್ಟ್ರಿಕಲ್- ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್​ನಲ್ಲಿ ಡಿಪ್ಲೋಮಾ
    ಟಿ & ಐ- ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ ಮತ್ತು ರೇಡಿಯೋ ಕಮ್ಯುನಿಕೇಶನ್/ಇನ್‌ಸ್ಟ್ರುಮೆಂಟೇಶನ್ & ಕಂಟ್ರೋಲ್/ಇನ್‌ಸ್ಟ್ರುಮೆಂಟೇಶನ್ & ಪ್ರೊಸೆಸ್ ಕಂಟ್ರೋಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ
    ಹ್ಯೂಮನ್ ರಿಸೋರ್ಸ್​- ಪದವಿ
    ಅಕೌಂಟ್ಸ್​/ ಫೈನಾನ್ಸ್​- ಕಾಮರ್ಸ್​​ನಲ್ಲಿ ಪದವಿ
    ಡಾಟಾ ಎಂಟ್ರಿ ಆಪರೇಟರ್ (DEO)-ಪಿಯುಸಿ
    ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್ (DEO)-ಪಿಯುಸಿ


    ವಯೋಮಿತಿ:
    ಭಾರತೀಯ ತೈಲ ನಿಗಮ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 10, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು-3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ
    PWD(ಜನರಲ್)ಅಭ್ಯರ್ಥಿಗಳು-10 ವರ್ಷ
    PWD (ಒಬಿಸಿ/NCL)ಅಭ್ಯರ್ಥಿಗಳು- 13 ವರ್ಷ
    PWD (ಎಸ್​​ಸಿ/ಎಸ್​ಟಿ) ಅಭ್ಯರ್ಥಿಗಳು- 15 ವರ್ಷ


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: JOB ALERT: ನೀವು Ph.D ಮಾಡಿದ್ರೆ ಬೆಂಗಳೂರಿನಲ್ಲಿದೆ ಉದ್ಯೋಗ, ತಿಂಗಳಿಗೆ 47 ಸಾವಿರ ಸಂಬಳ


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022
    ಅಡ್ಮಿಟ್ ಕಾರ್ಡ್​ ಡೌನ್​ಲೋಡ್ ಮಾಡಿಕೊಳ್ಳುವ ದಿನ: ಡಿಸೆಂಬರ್ 8 ರಿಂದ18, 2022
    ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 18/12/2022

    Published by:Latha CG
    First published: