• Home
  • »
  • News
  • »
  • jobs
  • »
  • IOCL Recruitment: 265 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ, PUC ಪಾಸಾದವರಿಗೂ ಅವಕಾಶ

IOCL Recruitment: 265 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ, PUC ಪಾಸಾದವರಿಗೂ ಅವಕಾಶ

IOCL

IOCL

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 31, 2022 ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.

  • Share this:

    IOCL Recruitment 2022: ಭಾರತೀಯ ತೈಲ ನಿಗಮ ನಿಯಮಿತ(Indian Oil Corporation Limited-IOCL)ದಲ್ಲಿ 265 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದು. ಅಪ್ರೆಂಟಿಸ್ ಪೋಸ್ಟ್‌ಗಳನ್ನು(Apprentice Posts) ಭರ್ತಿ ಮಾಡಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ IOCL ಅಧಿಕೃತ ಅಧಿಸೂಚನೆಯ ಅಕ್ಟೋಬರ್ 2022 ರ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು(Apply) ಆಹ್ವಾನಿಸಿದೆ. ನವೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್​ಸೈಟ್​ https://iocl.com/ ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತೀಯ ತೈಲ ನಿಗಮ ನಿಯಮಿತ
    ಹುದ್ದೆಯ ಹೆಸರುಅಪ್ರೆಂಟಿಸ್
    ಹುದ್ದೆಯ ಸಂಖ್ಯೆ265
    ವಿದ್ಯಾರ್ಹತೆಪದವಿ, ಪಿಯುಸಿ
    ಸ್ಥಳತಮಿಳುನಾಡು, ಪುದುಚೇರಿ, ಕರ್ನಾಟಕ, ಕೇರಳ
    ವೇತನನಿಯಮಾನುಸಾರ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ28/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ12/11/2022


    ಹುದ್ದೆಯ ಮಾಹಿತಿ:
    ಟ್ರೇಡ್ ಅಪ್ರೆಂಟಿಸ್ (ಅಕೌಂಟ್ಸ್​ ಎಕ್ಸಿಕ್ಯೂಟಿವ್)/ ಗ್ರಾಜುಯೇಟ್ ಅಪ್ರೆಂಟಿಸ್- 190
    ಟ್ರೇಡ್ ಅಪ್ರೆಂಟಿಸ್ (ಡಿಇಒ)- 25
    ಟ್ರೇಡ್ ಅಪ್ರೆಂಟಿಸ್ (ರಿಟೇಲ್ ಸೇಲ್ಸ್​ ಅಸೋಸಿಯೇಟ್)- 50


    ಇದನ್ನೂ ಓದಿ: NHM Karnataka Recruitment: 1048 ಸಮುದಾಯ ಆರೋಗ್ಯಾಧಿಕಾರಿ ಹುದ್ದೆಗಳು ಖಾಲಿ, ಬಿಎಸ್ಸಿ ನರ್ಸಿಂಗ್ ಆದವರು Apply ಮಾಡಿ


    ವಿದ್ಯಾರ್ಹತೆ:
    ಟ್ರೇಡ್ ಅಪ್ರೆಂಟಿಸ್ (ಅಕೌಂಟ್ಸ್​ ಎಕ್ಸಿಕ್ಯೂಟಿವ್)/ ಗ್ರಾಜುಯೇಟ್ ಅಪ್ರೆಂಟಿಸ್- ಪದವಿ
    ಟ್ರೇಡ್ ಅಪ್ರೆಂಟಿಸ್ (ಡಿಇಒ)- ಪಿಯುಸಿ
    ಟ್ರೇಡ್ ಅಪ್ರೆಂಟಿಸ್ (ರಿಟೇಲ್ ಸೇಲ್ಸ್​ ಅಸೋಸಿಯೇಟ್)- ಪಿಯುಸಿ


    ವಯೋಮಿತಿ:
    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್ 31, 2022 ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಒಬಿಸಿ-ಎನ್​ಸಿಎಲ್​: 3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು: 5 ವರ್ಷ
    PWD(ಜನರಲ್) ಅಭ್ಯರ್ಥಿಗಳು: 10 ವರ್ಷ
    PWD(ಒಬಿಸಿ-ಎನ್​ಸಿಎಲ್​) ಅಭ್ಯರ್ಥಿಗಳು: 13 ವರ್ಷ
    PWD (ಎಸ್​​ಸಿ/ಎಸ್​ಟಿ) ಅಭ್ಯರ್ಥಿಗಳು: 15 ವರ್ಷ


    ಅರ್ಜಿ ಶುಲ್ಕ:
    ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್​ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಮೆಡಿಕಲ್ ಟೆಸ್ಟ್​


    ಇದನ್ನೂ ಓದಿ: JOBS: ಜಲಸಂಪನ್ಮೂಲ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಮಾಸಿಕ ವೇತನ ₹ 62,000


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12/11/2022
    ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 27/11/2022
    ದಾಖಲಾತಿ ಪರಿಶೀಲನೆ ನಡೆಯುವ ದಿನಾಂಕ: 09/12/2022

    Published by:Latha CG
    First published: