IOCL Recruitment 2021: ಇಂಡಿಯಲ್ ಆಯಿಲ್ ಕಾರ್ಪೋರೇಷನ್​ನಲ್ಲಿ 1968 ಅಪ್ರೆಂಟಿಸ್ ಹುದ್ದೆಗಳು ಖಾಲಿ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು IOCLನ ಅಧಿಕೃತ ವೆಬ್​ಸೈಟ್ iocl.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 12, 2021.

IOCL

IOCL

  • Share this:
IOCL Recruitment 2021: ಇಂಡಿಯಲ್ ಆಯಿಲ್​ ಕಾರ್ಪೋರೇಷನ್ ಲಿಮಿಟೆಡ್(Indian Oil Corporation Limited- IOCL)ನಲ್ಲಿ ಅಪ್ರೆಂಟಿಸ್ ಆ್ಯಕ್ಟ್​-1961ರ ರಿಫೈನಿರೀಸ್ ವಿಭಾಗದಡಿಯಲ್ಲಿ 1968 ಅಪ್ರೆಂಟಿಸ್ ಹುದ್ದೆಗಳು(Apprentice Posts) ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು IOCLನ ಅಧಿಕೃತ ವೆಬ್​ಸೈಟ್ iocl.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 12, 2021.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

























ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಯ ಹೆಸರು ಅಪ್ರೆಂಟಿಸ್
ಒಟ್ಟು ಹುದ್ದೆಗಳು 1968
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12/11/2021



ಹುದ್ದೆಯ ವಿವರ:

  • ಟ್ರೇಡ್ ಅಪ್ರೆಂಟಿಸ್- ಅಟೆಂಡೆಂಡ್ ಆಪರೇಟರ್-488

  • ಟ್ರೇಡ್ ಅಪ್ರೆಂಟಿಸ್(ಫಿಟ್ಟರ್)-205

  • ಟ್ರೇಡ್ ಅಪ್ರೆಂಟಿಸ್ (ಬಾಯ್ಲರ್)-80

  • ಟೆಕ್ನಿಷಿಯನ್ ಅಪ್ರೆಂಟಿಸ್ ಡಿಸಿಪ್ಲಿನ್-ಕೆಮಿಕಲ್-362

  • ಟೆಕ್ನಿಷಿಯನ್ ಅಪ್ರೆಂಟಿಸ್ ಡಿಸಿಪ್ಲಿನ್-ಮೆಕ್ಯಾನಿಕಲ್-236

  • ಟೆಕ್ನಿಷಿಯನ್ ಅಪ್ರೆಂಟಿಸ್ ಡಿಸಿಪ್ಲಿನ್-ಎಲೆಕ್ಟ್ರಿಕಲ್-285

  • ಟೆಕ್ನಿಷಿಯನ್ ಅಪ್ರೆಂಟಿಸ್ ಡಿಸಿಪ್ಲಿನ್-ಇನ್​ಸ್ಟ್ರುಮೆಂಟೇಶನ್-117

  • ಟ್ರೇಡ್ ಅಪ್ರೆಂಟಿಸ್-ಸೀಕ್ರೇಟೇರಿಯಲ್ ಅಸಿಸ್ಟೆಂಟ್-69

  • ಟ್ರೇಡ್ ಅಪ್ರೆಂಟಿಸ್-ಅಕೌಂಟೆಂಟ್-32

  • ಟ್ರೇಡ್ ಅಪ್ರೆಂಟಿಸ್ ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್ ಅಪ್ರೆಂಟಿಸ್)-53

  • ಟ್ರೇಡ್ ಅಪ್ರೆಂಟಿಸ್ ಡೇಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್ಸ್)-41


ಇದನ್ನೂ ಓದಿ:India Post GDS Recruitment 2021: 10ನೇ ತರಗತಿ ಪಾಸಾದವರಿಗೆ ಅಂಚೆ ಕಚೇರಿಯಲ್ಲಿ ಉದ್ಯೋಗ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಅರ್ಹತಾ ಮಾನದಂಡ:

ಅಟೆಂಡೆಂಡ್ ಆಪರೇಟರ್ & ಬಾಯ್ಲರ್- ಅಭ್ಯರ್ಥಿಯು 3 ವರ್ಷಗಳ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು. (ಬೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಕೈಗಾರಿಕಾ ರಸಾಯನಶಾಸ್ತ್ರ)

ಟ್ರೇಡ್ ಅಪ್ರೆಂಟಿಸ್(ಫಿಟ್ಟರ್)- ಅಭ್ಯರ್ಥಿಯು 2 ವರ್ಷಗಳ ಐಟಿಐ(ಫಿಟ್ಟರ್) ಕೋರ್ಸ್​ನೊಂದಿಗೆ ಮೆಟ್ರಿಕ್ ಮಾಡಿರಬೇಕು.

  • ಟೆಕ್ನಿಷಿಯನ್ ಅಪ್ರೆಂಟಿಸ್ (ಕೆಮಿಕಲ್)- ಅಭ್ಯರ್ಥಿಯು ಕೆಮಿಕಲ್ ಎಂಜಿನಿಯರಿಂಗ್/​​ ರಿಫೈನರಿ ಮತ್ತು ಪೆಟ್ರೋ-ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಮಾಡಿರಬೇಕು.ಟೆಕ್ನಿಷಿಯನ್ ಅಪ್ರೆಂಟಿಸ್ (ಮೆಕ್ಯಾನಿಕಲ್)-ಅಭ್ಯರ್ಥಿಯು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಪದವಿ ಮಾಡಿರಬೇಕು.ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್)-ಅಭ್ಯರ್ಥಿಯು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಮಾಡಿರಬೇಕು.

    ಟೆಕ್ನಿಷಿಯನ್ ಅಪ್ರೆಂಟಿಸ್ (ಇನ್ಸ್ಟ್ರುಮೆಂಟೇಶನ್)- ಅಭ್ಯರ್ಥಿಯು ಮೂರು ವರ್ಷಗಳ ಡಿಪ್ಲೋಮಾ ಇನ್ಸ್ಟ್ರುಮೆಂಟೇಶನ್ / ಇನ್ಸ್ಟ್ರುಮೆಂಟೇಶನ್ ಮತ್ತು ಎಲೆಕ್ಟ್ರಾನಿಕ್ಸ್ / ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಎಂಜಿನಿಯರಿಂಗ್ ಹೊಂದಿರಬೇಕು.


ಟ್ರೇಡ್ ಅಪ್ರೆಂಟಿಸ್ (ಸೆಕ್ರೆಟರಿಯಲ್ ಅಸಿಸ್ಟೆಂಟ್): ಅಭ್ಯರ್ಥಿಯು ಮೂರು ವರ್ಷಗಳ B.A./B. Sc/B. Com ಹೊಂದಿರಬೇಕು.

ಟ್ರೇಡ್ ಅಪ್ರೆಂಟಿಸ್ (ಅಕೌಂಟೆಂಟ್): ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪೂರ್ಣ ಸಮಯದ ಪದವಿ ಹೊಂದಿರಬೇಕು.

ಡೇಟಾ ಎಂಟ್ರಿ ಆಪರೇಟರ್ (ಫ್ರೆಶರ್ ಅಪ್ರೆಂಟಿಸ್): ಅಭ್ಯರ್ಥಿಯು ಕನಿಷ್ಠ 12 ನೇ ತರಗತಿ ಪಾಸ್ ಆಗಿರಬೇಕು.

ದೇಶೀಯ ಡೇಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್ ಹೊಂದಿರುವವರು): ಅಭ್ಯರ್ಥಿಯು 12 ನೇ ತರಗತಿ ಮುಗಿಸಿರಬೇಕು ಮತ್ತು 'ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್' ನ ಸ್ಕಿಲ್ ಸರ್ಟಿಫಿಕೇಟ್ ಹೊಂದಿರಬೇಕು.

ಇದನ್ನೂ ಓದಿ:UPSC Recruitment 2021: ಯುಪಿಎಸ್​ಸಿ ನೇಮಕಾತಿ, ತಿಂಗಳಿಗೆ ₹1,82,400 ಸಂಬಳ; 64 ಹುದ್ದೆಗಳು ಖಾಲಿ

ಪ್ರಮುಖ ದಿನಾಂಕಗಳು

  • ಆನ್ಲೈನ್ ​​ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: ಅಕ್ಟೋಬರ್ 22, 2021

  • ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 12, 2021

  • ಲಿಖಿತ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): ನವೆಂಬರ್ 21, 2021


ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು iocl.com ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ:

ಆಯ್ಕೆಯು ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: