Intelligence Bureau Recruitment: ಕೇಂದ್ರ ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳ ನೇಮಕಾತಿ

ಸಹಾಯಕರು, ಕಾರ್ಯನಿರ್ವಾಹಕ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

766 ಹುದ್ದೆಗೆ ಅರ್ಜಿ ಹಾಕಿ

766 ಹುದ್ದೆಗೆ ಅರ್ಜಿ ಹಾಕಿ

  • Share this:
    ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲ ಹೊಂದಿರುವ ಪದವಿ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರ ಅವಕಾಶ ಒದಗಿಸಿದೆ. ಕೇಂದ್ರ ಗುಪ್ತಚರ ಇಲಾಖೆ ( Intelligence Bureau) 766 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಸಹಾಯಕರು (Assistant), ಕಾರ್ಯನಿರ್ವಾಹಕ (Executive) ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್​ಲೈನ್ (Off-line)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 21 ಆಗಿದೆ.

    ಗ್ರೂಪ್​ 'ಬಿ' ಮತ್ತು ಗ್ರೂಪ್​ 'ಸಿ'ಯ ಈ ಹುದ್ದೆಗಳನ್ನು ಡೆಪ್ಯೂಟೆಷನ್​ ಆಧಾರದ ಮೇಲೆ ನೇಮಕಾತಿ ನಡೆಸಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಇಂಟೆಲಿಜೆನ್ಸ್ ಬ್ಯೂರೋ (ಇಂಟೆಲಿಜೆನ್ಸ್ ಬ್ಯೂರೋ)
    ಹುದ್ದೆಯ ಹೆಸರು: ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ, ಕಾರ್ಯನಿರ್ವಾಹಕ
    ಹುದ್ದೆಗಳ ಸಂಖ್ಯೆ: 766
    ಉದ್ಯೋಗ ಸ್ಥಳ: ಅಖಿಲ ಭಾರತ
    ವೇತನ: 5200-151100 ರೂ ಪ್ರತಿ ತಿಂಗಳು































































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆ
    ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-I- ಕಾರ್ಯನಿರ್ವಾಹಕ70ಪದವಿ
    ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II - ಕಾರ್ಯನಿರ್ವಾಹಕ350ಪದವಿ
    ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I/ಎಕ್ಸಿಕ್ಯೂಟಿವ್50ಕೇಂದ್ರ ಗುಪ್ತಚರ ಸಂಸ್ಥೆ ನಿಯಮ ಅನುಸಾರ
    ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಎಕ್ಸಿಕ್ಯೂಟಿವ್100ಕೇಂದ್ರ ಗುಪ್ತಚರ ಸಂಸ್ಥೆ ನಿಯಮ ಅನುಸಾರ
    ಭದ್ರತಾ ಸಹಾಯಕ/ಕಾರ್ಯನಿರ್ವಾಹಕ100ಕೇಂದ್ರ ಗುಪ್ತಚರ ಸಂಸ್ಥೆ ನಿಯಮ ಅನುಸಾರ
    ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I20ಕೇಂದ್ರ ಗುಪ್ತಚರ ಸಂಸ್ಥೆ ನಿಯಮ ಅನುಸಾರ
    ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-ಗ್ರೇಡ್-II35ಕೇಂದ್ರ ಗುಪ್ತಚರ ಸಂಸ್ಥೆ ನಿಯಮ ಅನುಸಾರ
    ಭದ್ರತಾ ಸಹಾಯಕ2010ನೇ ತರಗತಿ
    ಹಲ್ವಾಯಿ ಮತ್ತು ಕುಕ್910ನೇ ತರಗತಿ, ಡಿಪ್ಲೊಮಾ
    ಉಸ್ತುವಾರಿ5ಕೇಂದ್ರ ಗುಪ್ತಚರ ಸಂಸ್ಥೆ ನಿಯಮ ಅನುಸಾರ
    ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್7ಇಂಜಿನಿಯರಿಂಗ್ ಪದವಿ

    ವಯಸ್ಸಿನ ಮಿತಿ: ಇಂಟೆಲಿಜೆನ್ಸ್ ಬ್ಯೂರೋ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 56 ವರ್ಷಗಳು ಮೀರಿರಬಾರದು.

    ಇದನ್ನು ಓದಿ: ಪದವಿ ಆದವರಿಗೆ ಬೌನ್ಸ್ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

    ವಯೋಮಿತಿ ಸಡಿಲಿಕೆ:
    ಇಂಟೆಲಿಜೆನ್ಸ್ ಬ್ಯೂರೋ ನಿಯಮಗಳ ಪ್ರಕಾರ

    ಅರ್ಜಿ ಸಲ್ಲಿಕೆ
    ಆಫ್​ಲೈನ್​ ಮೂಲಕ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22 ಜೂನ್​2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಆಗಸ್ಟ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: mha.gov.in

    ಇದನ್ನು ಓದಿ: ತಾಲೂಕು ಮೇಲ್ವಿಚಾರಕರ ಹುದ್ದೆ; ಕಲಬುರಗಿ, ಬೆಳಗಾವಿಯಲ್ಲಿದೆ ಕೆಲಸ

    ಅರ್ಜಿ ಸಲ್ಲಿಕೆ ವಿಧಾನ

    ಇಂಟೆಲಿಜೆನ್ಸ್ ಬ್ಯೂರೋ  ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಈ ​ ವಿಳಾಸಕ್ಕೆ ಕಳುಹಿಸಬೇಕು.

    ಸಹಾಯಕ ನಿರ್ದೇಶಕ/ಜಿ-3, ಗುಪ್ತಚರ ಬ್ಯೂರೋ, ಗೃಹ ವ್ಯವಹಾರಗಳ ಸಚಿವಾಲಯ, 35 ಎಸ್‌ಪಿ ಮಾರ್ಗ, ಬಾಪು ಧಾಮ್, ನವದೆಹಲಿ-110021
    Published by:Seema R
    First published: