• Home
  • »
  • News
  • »
  • jobs
  • »
  • JOB ALERT: ಗುಪ್ತಚರ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಕೆಲಸ; ತಿಂಗಳಿಗೆ 69 ಸಾವಿರ ಸಂಬಳ

JOB ALERT: ಗುಪ್ತಚರ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಕೆಲಸ; ತಿಂಗಳಿಗೆ 69 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದೇ ನವೆಂಬರ್ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    Intelligence Bureau Recruitment 2022: ಗುಪ್ತಚರ ಇಲಾಖೆ(Intelligence Bureau )ಯಲ್ಲಿ 1671 ಸೆಕ್ಯುರಿಟಿ ಅಸಿಸ್ಟೆಂಟ್(Security Assistant), ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರದ ಉದ್ಯೋಗ(Central Government Job) ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ನವೆಂಬರ್ 25, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಗುಪ್ತಚರ ಇಲಾಖೆ
    ಹುದ್ದೆಸೆಕ್ಯುರಿಟಿ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್
    ಒಟ್ಟು ಹುದ್ದೆ1671
    ವಿದ್ಯಾರ್ಹತೆ10ನೇ ತರಗತಿ
    ವೇತನಮಾಸಿಕ ₹ 18,000-69,100
    ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25/11/2022


    ಹುದ್ದೆಯ ಮಾಹಿತಿ:
    ಸೆಕ್ಯುರಿಟಿ ಅಸಿಸ್ಟೆಂಟ್/ ಎಕ್ಸಿಕ್ಯೂಟಿವ್- 1521
    ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)/ ಜನರಲ್- 150


    ಇದನ್ನೂ ಓದಿ: Jobs in Bengaluru: ನಿಮ್ಹಾನ್ಸ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, 1 ಲಕ್ಷದವರೆಗೆ ಸಂಬಳ


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಗುಪ್ತಚರ ಇಲಾಖೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಸೆಕ್ಯುರಿಟಿ ಅಸಿಸ್ಟೆಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ/ SSLC ಪಾಸಾಗಿರಬೇಕು.


    ವಯೋಮಿತಿ:
    ಸೆಕ್ಯುರಿಟಿ ಅಸಿಸ್ಟೆಂಟ್/ ಎಕ್ಸಿಕ್ಯೂಟಿವ್: 27 ವರ್ಷ
    ಮಲ್ಟಿ ಟಾಸ್ಕಿಂಗ್ ಸ್ಟಾಫ್(MTS)/ ಜನರಲ್: 18-25 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 3 ವರ್ಷ
    ಎಸ್​ಸಿ/ಎಸ್​ಟಿ ಅಭ್ಯರ್ಥಿಗಳು : 5 ವರ್ಷ
    PWD ಅಭ್ಯರ್ಥಿಗಳು: 10 ವರ್ಷ


    ಅರ್ಜಿ ಶುಲ್ಕ:
    ಎಲ್ಲಾ ಅಭ್ಯರ್ಥಿಗಳು 450 ರೂ. ಅರ್ಜಿ ಶುಲ್ಕ ಪಾವತಿಸಬೇಕು.


    ಪರೀಕ್ಷಾ ಶುಲ್ಕ:
    ಪುರುಷ ಅಭ್ಯರ್ಥಿಗಳು(ಜನರಲ್), EWS & OBC- 50 ರೂ.
    ಪಾವತಿಸುವ ವಿಧಾನ: ಆನ್​ಲೈನ್/ ಎಸ್​ಬಿಐ ಚಲನ್


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಪರ್ಸನಾಲಿಟಿ ಟೆಸ್ಟ್​
    ಸಂದರ್ಶನ


    ವೇತನ:
    ಸೆಕ್ಯುರಿಟಿ ಅಸಿಸ್ಟೆಂಟ್/ ಎಕ್ಸಿಕ್ಯೂಟಿವ್- ಮಾಸಿಕ ₹ 21,700-69,100
    ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)/ ಜನರಲ್- ಮಾಸಿಕ ₹ 18,000-56,900


    ಇದನ್ನೂ ಓದಿ:Bengaluru: ಸೆಂಟ್ರಲ್ ಸಿಲ್ಕ್​ ಬೋರ್ಡ್​ನಲ್ಲಿ ಸೈಂಟಿಸ್ಟ್​ ಹುದ್ದೆಗಳು ಖಾಲಿ, ಮಾಸಿಕ ವೇತನ 1.77 ಲಕ್ಷ ರೂ.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/11/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ & ಆನ್​ಲೈನ್​ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ: 25/11/2022
    ಎಸ್​ಬಿಐ ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29/11/2022

    Published by:Latha CG
    First published: