Infosys is hiring: ಬೆಂಗಳೂರು ಇನ್ಫೋಸಿಸ್​ನಲ್ಲಿ ಉದ್ಯೋಗಾವಕಾಶ, ಸಂಬಳ, ಅರ್ಜಿ ಸಲ್ಲಿಕೆ ಪೂರ್ಣ ಮಾಹಿತಿ

ಇನ್ಫೋಸಿಸ್‌ನಲ್ಲಿ ಸ್ಪೆಷಲಿಸ್ಟ್ ಪ್ರೋಗ್ರಾಮರ್‌ಗೆ ವಾರ್ಷಿಕ ಸಂಬಳ 8,25,513 ರೂ. ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್​ (Infosys is hiring) ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಇನ್ಫೋಸಿಸ್​ ಕಚೇರಿಯಲ್ಲಿ ಈ ನೇಮಕಾತಿ ಆರಂಭವಾಗಿದೆ. ಈಗಾಗಲೇ ಕಂಪನಿಗೂ 19, 230 ಪದವೀಧರರು ಹಾಗೂ ಹೊರ ದೇಶದ ಸುಮಾರು 1, 941 ಪದವೀಧರರ ನೇಮಕಾತಿ ನಡೆಸುವ ಮೂಲಕ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೆ ನೇಮಕಾತಿ ಪ್ರಕ್ರಿಯೆಗೆ ಕಂಪನಿ ಮುಂದಾಗಿದೆ. ಸರಿಸುಮಾರು 2 ಲಕ್ಷದ 59 ಸಾವಿರದ 619 ನೌಕರರನ್ನು ಕಂಪನಿ ಹೊಂದಿದ್ದು, ಈಗ ಮತ್ತೆ ನೇಮಕಾತಿ ನಡೆಸಲು ಕಂಪನಿ ಸಿದ್ಧತೆ ನಡೆಸಿದೆ.

    ಸದ್ಯ ಆರ್‌ಪಿಎ ಡೆವಲಪರ್( RPA Developer) ಕನ್ಸಲ್ಟೆಂಟ್ (Consultant), ಪ್ರಿನ್ಸಿಪಾಲ್ ಆರ್ಕಿಟೆಕ್ಟ್ (principal architect), ಸ್ಪೆಷಲಿಸ್ಟ್ ಪ್ರೋಗ್ರಾಮರ್-ಜಾವಾ ಮೈಕ್ರೋ ಸರ್ವೀಸಸ್ (specialist Programmer-java microservices) ಸೇರಿದಂತೆ ಹಲವಾರು ಹುದ್ದೆಗೆ ಆಯ್ಕೆ ನಡೆಯಲಿದೆ. ಈ ಎಲ್ಲಾ ಉದ್ಯೋಗ ನೇಮಕಾತಿ ಸದ್ಯ ಬೆಂಗಳೂರಿನ ಕಚೇರಿಗೆ ಮಾತ್ರ ನಡೆಯಲಿದೆ

    ಸ್ಪೇಷಲಿಸ್ಟ್​ ಪ್ರೋಗ್ರಾಮರ್​ (Specialist Programmer)
    ಈ . Glassdoor.com ಪ್ರಕಾರ, ಇನ್ಫೋಸಿಸ್‌ನಲ್ಲಿ ಸ್ಪೆಷಲಿಸ್ಟ್ ಪ್ರೋಗ್ರಾಮರ್‌ಗೆ ವಾರ್ಷಿಕ ಸಂಬಳ 8,25,513 ರೂ. ಇದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ಯುಐ ಮತ್ತು ಮಾರ್ಕ್ಅಪ್ ಭಾಷೆ, ನೋಡ್ ಜೆಎಸ್, ಯುಐ ಮತ್ತು ಮಾರ್ಕ್ಅಪ್ ಭಾಷೆಗಳು, ಕೋನೀಯ ಜೆಎಸ್ (ಎಚ್ಟಿಎಮ್ಎಲ್/ ಸಿಎಸ್ಎಸ್/ ಜಾವಾ ಸ್ಕ್ರಿಪ್ಟ್/ ಬೂಟ್ ಸ್ಟ್ರಾಪ್/ ಜೆ ಪ್ರಶ್ನೆ/ ಎಚ್ಟಿಎಮ್ಎಲ್ 5/ ಸಿಎಸ್ಎಸ್ 3/ ಕೋನೀಯ ಜೆಎಸ್/ ಕೋನೀಯ 2/ ಕೋನೀಯ 4/ ಜ್ಞಾನವನ್ನು ಹೊಂದಿರಬೇಕು ಕೋನೀಯ 5/ ಕೋನೀಯ 6/ ಕೋನೀಯ 7/ ಕೋನೀಯ 8/ ಕೋನೀಯ ಬಗ್ಗೆ ಜ್ಞಾನ ಹೊಂದಿರಬೇಕು.

    ಸ್ಪೇಷಲಿಸ್ಟ್​ ಪ್ರೋಗ್ರಾಮರ್​- ಜಾವ ಮೈಕ್ರೋ ಸರ್ವಿಸ್ (Specialist Programmer-Java Microservices) 
    ಸ್ಪೆಷಲಿಸ್ಟ್ ಪ್ರೋಗ್ರಾಮರ್​ಗೆ ವಾರ್ಷಿಕ ವೇತನ ರೂ 1,80,429 ರಿಂದ ರೂ 21,23,761 ವರೆಗೆ ಇರಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಜಾವಾ ಭಾಷೆ, ಹೈಬರ್ನೇಟ್ ಕ್ಯಾಸ್ಟ್ ಮೇಲೆ ಹಿಡಿತ ಹೊಂದಿರಬೇಕು .

    ಇದನ್ನು ಓದಿ: ಬೆಂಗಳೂರು ವಿವಿಯಲ್ಲಿ ಅತಿಥಿ ಉಪನ್ಯಾ ಸಕ ಹುದ್ದೆಗೆ ಅರ್ಜಿ ಆಹ್ವಾನ

    ಸ್ಪೇಷಲಿಸ್ಟ್​ ಪ್ರೋಗ್ರಾಮರ್​-ಬಿಗ್​ಡಾಟಾ (Specialist Programmer-Bigdata)
    ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಬಯಸುವವರು , ಸ್ಪಾರ್ಕ್ ಓಪನ್ ಸೋರ್ಸ್ ಮತ್ತು ಸ್ಕೇಲಾ ಬಗ್ಗೆ ಜ್ಞಾನ ಹೊಂದಿರಬೇಕು. ಬೆಂಗಳೂರಿನ ಕಂಪನಿಗೆ ಈ ನೇಮಕಾತಿ ನಡೆಯಲಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಈ ಹುದ್ದೆಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಈ  ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.

    ವಯೋಮಿತಿ:
    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20-40ವರ್ಷ ವಯಸ್ಸಿನವರಾಗಿರಬೇಕು.

    ಐಟಿ ಪ್ರಮುಖ ಇನ್ಫೋಸಿಸ್ ಜೂನ್ ತ್ರೈಮಾಸಿಕ ಲಾಭವು ಶೇಕಡಾ 23 ರಷ್ಟು ಹೆಚ್ಚಾಗಿದೆ. 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಲಾಭದಲ್ಲಿ 22.7 ಶೇಕಡಾ ಏರಿಕೆಯನ್ನು 5,195 ಕೋಟಿ ಆಗಿದೆ.
    Published by:Seema R
    First published: