Infosys Hubballi Hiring: ಹುಬ್ಬಳ್ಳಿ ಇನ್ಫೋಸಿಸ್​ನಲ್ಲಿ ಹುದ್ದೆಗೆ ಅರ್ಜಿ ಆಹ್ವಾನ; ಉತ್ತರ ಕರ್ನಾಟಕ ಅಭ್ಯರ್ಥಿಗಳಿಗೆ ಬಂಪರ್​ ಚಾನ್ಸ್​

ಐಟಿ ದಿಗ್ಗಜ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಕನಸನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

Infosys

Infosys

  • Share this:
    ಇನ್ಫೋಸಿಸ್​ನ ಹುಬ್ಬಳ್ಳಿ (Infosys Hubballi) ಕಚೇರಿಯಲ್ಲಿ ವಿವಿಧ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವನ್ನು ನೀಡಲಾಗಿದೆ. ಐಟಿ ದಿಗ್ಗಜ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂಬ ಕನಸನ್ನು ಹೊಂದಿರುವ ಬಿಇ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

    ಹುಬ್ಬಳ್ಳಿಯ ಇನ್ಫೋಸಿಸ್​ ಕಚೇರಿಯಲ್ಲಿ ಏರೋಸ್ಪೇಸ್​ ಇಂಜಿನಿಯರ್ (Aerospace Engineer)​ ಮತ್ತು ಜಾವ ಡೆವಲಪರ್ (Java Developer)​ ಹುದ್ದೆಗಳ ನೇಮಕಾತಿಗೆ ಸಂಸ್ಥೆ ಮುಂದಾಗಿದೆ. ಈ ಸಂಬಂಧ ಇನ್ಫೋಸಿಸ್​ ಕೆರಿಯರ್​ ಟ್ವೀಟ್​ ಮೂಲಕ ಅಭ್ಯರ್ಥಿಗಳಿಗೆ ಸಂಸ್ಥೆ ಮಾಹಿತಿ ನೀಡಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವೆರ
    ಸಂಸ್ಥೆಇನ್ಫೋಸಿಸ್
    ಹುದ್ದೆಜಾವ ಡೆವಲಪರ್​ ಮತ್ತು ಏರೋಸ್ಪೇಸ್​ ಇಂಜಿನಿಯರ್​
    ಒಟ್ಟು ಹುದ್ದೆ ಸಂಖ್ಯೆಒಟ್ಟು ಹುದ್ದೆ ಸಂಖ್ಯೆ: ನಿರ್ದಿಷ್ಟಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಹುಬ್ಬಳ್ಳಿ
    ವೇತನಇನ್ಫೋಸಿಸ್​​ ಕಂಪನಿಯ ನಿಯಮ ಅನುಸಾರ

    ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿಇ ಪದವಿಯನ್ನು ಪಡೆದಿರಬೇಕು.

    ಇದನ್ನು ಓದಿ: ಸಂಶೋಧನಾ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ; ಎಂಎ ಆದವರಿಗೂ ಅವಕಾಶ

    ಕೌಶಲ್ಯ:
    ಏರೋಸ್ಪೇಸ್​ ಇಂಜಿನಿಯರ್​ ಅಭ್ಯರ್ಥಿಗಳು ಎಂಬೆಡೆಡ್ ಸಾಫ್ಟ್‌ವೇರ್- ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಾಧೀನ ವ್ಯವಸ್ಥೆಗಳು, ಏರೋಸ್ಪೇಸ್ ಡೊಮೇನ್, ಏರೋಸ್ಪೇಸ್ ಡೊಮೇನ್- ವಿಮಾನ ನಿರ್ವಹಣೆ ಕೌಶಲ್ಯವನ್ನು ಹೊಂದಿರಬೇಕು
    ಜಾವ ಡೆವಲಪರ್​: ಜಾವ, ಜಾವ ಆಲ್​, ಜಾವ 8, ಮೈಕ್ರೋಸರ್ವಿಸ್​, ಸ್ಪ್ರಿಂಗ್​ಬೋಟ್​ ಕೌಶಲ್ಯವನ್ನು ಹೊಂದಿರಬೇಕು.

    ಅನುಭವ:
    ಏರೋಸ್ಪೇಸ್​ ಇಂಜಿನಿಯರಿಂಗ್​ ಮತ್ತು ಜಾವ ಡೆವಲಪರ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐದು ವರ್ಷಕ್ಕಿಂಗ ಹೆಚ್ಚಿನ ಕಾರ್ಯ ನಿರ್ವಹಣೆ ಅನುಭವ ಹೊಂದಿರಬೇಕು.

    ವಯೋಮಿತಿ: ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿ ವಯೋಮಿತಿ ಹೊಂದಿರಬೇಕು.

    ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ: 18 ಆಗಸ್ಟ್​ 2022

    ಪ್ರಮುಖ ಲಿಂಕ್‌ಗಳು
    ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ ಸೈಟ್​​: www.infosys.com

    ಇದನ್ನು ಓದಿ: ಎಸ್​ಎಸ್​ಎಲ್​ಸಿ ಪಾಸ್​ ಆಗಿದ್ರೆ ಹೈಕೋರ್ಟ್​ನಲ್ಲಿದೆ ಉದ್ಯೋಗಾವಕಾಶ; 150 ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    ಅರ್ಜಿ ಸಲ್ಲಿಸುವವರು ಈ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು
    Published by:Seema R
    First published: