ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ (Infosys is hiring) ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಈ ನೇಮಕಾತಿ ಆರಂಭವಾಗಿದೆ. ಡಿಜಿಟಲ್ ಸೇವೆಗಳು ಮತ್ತು ಸಲಹಾ ಕ್ಷೇತ್ರದಲ್ಲಿ ನೇಮಕಾತಿಗೆ ಸಂಸ್ಥೆ ಮುಂದಾಗಿದ್ದು, ಫ್ರೇಶರ್ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್ಸಿ, ಬಿಇ ಮತ್ತು ಬಿಟೆಕ್ ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ಫೋಸಿಸ್ನ ವ್ಯವಹಾರ ಪ್ರಕ್ರಿಯೆ ನಿರ್ವಹಣಾ ಅಂಗಸಂಸ್ಥೆಯನ್ನು ಬಿಪಿಎಂನಲ್ಲಿ ಈ ನೇಮಕಾತಿ ನಡೆಸಲಾಗುವುದು. ಸಂಸ್ಥೆಯಲ್ಲಿ ಕಸ್ಟಮರ್ ಸರ್ವಿಸ್ನಲ್ಲಿ ಕಾರ್ಯ ನಿರ್ವಹಿಸಲು ತಾಂತ್ರಿಕ ಪ್ರಕ್ರಿಯೆ ಕಾರ್ಯನಿರ್ವಾಹಕ (Technical Process Executive) ಸೇರಿದಂತೆ ವಿವಿಧ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ಮಾಹಿತಿ |
ಹುದ್ದೆ ವಿವರ |
ಸಂಸ್ಥೆ |
ಇನ್ಫೋಸಿಸ್ |
ಹುದ್ದೆ |
ಟೆಕ್ನಿಕಲ್ ಪ್ರೊಸೆಸ್ ಎಕ್ಸ್ಕ್ಯೂಟಿವ್ |
ಒಟ್ಟು ಹುದ್ದೆ |
ನಿಗದಿ ಪಡಿಸಿಲ್ಲ |
ಕಾರ್ಯ ನಿರ್ವಹಣೆ ಸ್ಥಳ |
ಬೆಂಗಳೂರು |
ವೇತನ |
ಇನ್ಫೋಸಿಸ್ ನಿಯಮಗಳ ಪ್ರಕಾರ |
ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಅನುಸಾರ ಅಧಿಕೃತ ವಿಶ್ವವಿದ್ಯಾಲಯ ಮತ್ತು ಮಂಡಳಿಗಳಿಂದ ಅಭ್ಯರ್ಥಿಗಳು ಬಿಎಎಸ್ಸಿ, ಬಿಇ, ಮತ್ತು ಬಿಟೆಕ್ ಪದವಿಯನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆ: ಆನ್ಲೈನ್ ಮೂಲಕ
ಅನುಭವ: ಫ್ರೇಶರ್ ಮತ್ತು ಒಂದು ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಅನುಭವ
ಇದನ್ನು ಓದಿ: ಪ್ರವಾಸೋದ್ಯಮ ಸಂಸ್ಥೆಯಲ್ಲಿದೆ ವಿವಿಧ ಮ್ಯಾನೇಜರ್ ಹುದ್ದೆ; ಮಾಸಿಕ 50000 ರೂ ವೇತನ
ವಯೋಮಿತಿ: ಇನ್ಫೋಸಿಸ್ ನಿಯಮದ ಅನುಸಾರ
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಸಂದರ್ಶನ
ಹುದ್ದೆಯ ಜವಾಬ್ದಾರಿ
ಕರೆಗಳು ಮತ್ತು ಇಮೇಲ್ಗಳ ಮೂಲಕ ಗ್ರಾಹಕರಿಗೆ ಸಹಾಯ ಮಾಡುವುದು ಪ್ರಧಾನ ಪಾತ್ರವಾಗಿದೆ.
ಗ್ರಾಹಕರ ಆಂತರಿಕ ವಿವಾದಗಳು, ಗ್ರಾಹಕರ ಕಾಳಜಿ ಮತ್ತು ಪರಿಹಾರವನ್ನು ಪಡೆಯಲು ಇಲಾಖೆಗಳ ನಡುವೆ ಕೆಲಸ ಮಾಡುವುದನ್ನು ಅನುಸರಿಸಿ.
ವ್ಯಾಪಾರ ಘಟಕಗಳ ಕರೆಯನ್ನು ನಿರ್ವಹಿಸುವಲ್ಲಿ ತೊಡಗಿಸಿಕೊಳ್ಳಬೇಕು
ಗ್ರಾಹಕರ ಪ್ರಶ್ನೆಗಳನ್ನು ಪರಿಹರಿಸುವುದು.
ಅಧಿಸೂಚನೆ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ:
ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್:
www.infosys.com
ಇದನ್ನು ಓದಿ: ಕನ್ಸಲ್ಟೇಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾಸಿಕ 65000 ರೂ ವೇತನ
ಅರ್ಜಿ ಸಲ್ಲಿಸುವ ವಿಧಾನ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ
- ಆನ್ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್ ಲೋಡ್ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.
ಅರ್ಜಿ ಸಲ್ಲಿಸುವವರು ಈ
ಲಿಂಕ್ ಕ್ಲಿಕ್ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ