SSLC ಪೂರೈಸಿದವರಿಗೆ ರೈಲ್ವೆ ಇಲಾಖೆಯಲ್ಲಿದೆ ವಿಪುಲ ಅವಕಾಶ

Indian Railways: ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 15 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 24 ವರ್ಷಕ್ಕಿಂತ ಹೆಚ್ಚು ಮೀರಬಾರದು.

JOB

JOB

  • Share this:
ಪೂರ್ವ ರೈಲ್ವೆ ಇಲಾಖೆಯು ಪೂರ್ವ ರೈಲ್ವೆ ವಿಭಾಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್, ಕಾರ್ಪೆಂಟರ್, ಪಿಎಎಸ್‍ಎಸ್‍ಎ, ವೆಲ್ಡರ್, ಡೀಸೆಲ್ ಮೆಕಾನಿಕ್, ಪೇಂಟರ್, ಪೈಪ್ ಫಿಟ್ಟರ್, ಪ್ಲಂಬರ್, ಡ್ರಾಫ್ಟ್ಸ್ ಮ್ಯಾನ್, ರೆಫ್ರಿಜರೇಟರ್ ಎಸಿ ಮೆಕಾನಿಕ್, ವೈರ್ ಮ್ಯಾನ್ ಮತ್ತು ಸ್ಟೆನೋಗ್ರಾಫರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.

ಆಸಕ್ತ ಅಭ್ಯರ್ಥಿಗಳು www.rrc-wr.com ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ 2021ರ ಅರ್ಜಿ ಸಲ್ಲಿಕೆಯು ಮೇ 25ರಿಂದ ಪ್ರಾರಂಭವಾಗಲಿದ್ದು, ಜೂನ್ 24 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಮೀಸಲಾತಿ ಇರುವ ಪುರುಷ ಅಭ್ಯರ್ಥಿಗಳಿಗೆ ಅರ್ಜಿಯ ಬೆಲೆ 100 ರೂ. ಇದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರ ವರ್ಗಕ್ಕೆ ಸೇರಿದ ಮಹಿಳೆಯರು ಮತ್ತು ಇತರ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ವಿಭಾಗವಾರು ಉದ್ಯೋಗಾವಕಾಶಗಳ ಮಾಹಿತಿ

ಮುಂಬೈ ವಿಭಾಗ (ಎಂಎಂಸಿಟಿ)- 738
ವಡೋದರ (ಬಿಆರ್‌ಸಿ) ವಿಭಾಗ – 489
ಅಹಮದಾಬಾದ್ ವಿಭಾಗ (ಎಡಿಐ) -611
ರತ್ಮಲಮ್ ವಿಭಾಗ (ಆರ್‌ಟಿಎಂ) -434
ರಾಜಕೋಟ್ ವಿಭಾಗ (ಆರ್‌ಜೆಟಿ) – 176
ಭಾವ್ನಗರ್ ವರ್ಕ್‍ಶಾಪ್ (ಬಿವಿಪಿ)- 210
ಲೋವರ್ ಪ್ಯಾರೆಲ್ (ಪಿಎಲ್) ವರ್ಕ್‍ಶಾಪ್-396
ಮಹಾಲಕ್ಮೀ (ಎಂಎಕ್ಸ್) ವರ್ಕ್‍ಶಾಪ್- 64
ಭಾವ್ನಗರ್ ವರ್ಕ್‍ಶಾಪ್ (ಬಿವಿಪಿ)-73
ದಾಹೋದ್ (ಡಿಎಚ್‍ಡಿ) ವರ್ಕ್‍ಶಾಪ್ – 187
ಪ್ರತಾಪ್ ನಗರ (ಪಿಆರ್‌ಟಿಎನ್) ವರ್ಕ್‍ಶಾಪ್, ವಡೋದರ -45
ಸಬರಮತಿ (ಎಸ್‍ಬಿಐ) ಇಎನ್‍ಜಿಜಿ ವರ್ಕ್‍ಶಾಪ್, ಅಹಮದಾಬಾದ್ – 60
ಸಬರಮತಿ (ಎಸ್‍ಬಿಐ) ಸಿಗ್ನಲ್ ವರ್ಕ್‍ಶಾಪ್, ಅಹಮದಾಬಾದ್ – 25
ಮುಖ್ಯ ಸಂಸ್ಥೆ – 34

ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಗೂಗಲ್‍ನಲ್ಲಿ www.rrc-wr.com ಈ ವೆಬ್‍ಸೈಟ್ ಹುಡುಕಿ
ಹಂತ 2: ನಂತರ ಈ ವೆಬ್‍ಪುಟದ ಮುಖಪುಟದಲ್ಲಿ ಅರ್ಜಿ ನಮೂನೆಯನ್ನು ಹುಡುಕಿ ಕ್ಲಿಕ್ ಮಾಡಿ
ಹಂತ 3: ಅರ್ಜಿ ಪುಟಕ್ಕೆ ಹೋಗುತ್ತಿದ್ದಂತೆ ಅಲ್ಲಿ ಕೇಳಿರುವ ಮಾಹಿತಿಯನ್ನು ಚಾಚೂ ತಪ್ಪದೇ ಭರ್ತಿ ಮಾಡಿ. ನಂತರ ನೀವು ನೀಡಿರುವ ಮಾಹಿತ ಸರಿಯಾಗಿ ಇದೆಯಾ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಿ.
ಹಂತ 4: ನಂತರ ನೀವು submit ಟ್ಯಾಬ್ ಕ್ಲಿಕ್ ಮಾಡುತ್ತಿದ್ದಂತೆ ಹಣ ಪಾವತಿಸುವ ಬಗ್ಗೆ ಮಾಹಿತಿ ಬರಲಿದೆ. ನೀವು ಮಹಿಳಾ ಅಭ್ಯರ್ಥಿಯಾಗಿದ್ದರೆ ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರ ವರ್ಗಕ್ಕೆ ಸೇರಿದವರಾಗಿದ್ದರೆ, ನೀವು ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲದ ಕಾರಣ ನಮಗೆ ಸಂಬಂಧಿಸಿರುವುದನ್ನು ನೇರವಾಗಿ ಆಯ್ಕೆ ಮಾಡಬಹುದು. ನಂತರ ನೀವು ಇದರ ಬಗ್ಗೆ ಖಚಿತಪಡಿಸಿಕೊಳ್ಳಿ
ಹಂತ 5: ಎಲ್ಲಾ ಹಂತಗಳು ಮುಗಿದ ಮೇಲೆ ಸ್ಕ್ರೀನ್‍ಶಾಟ್ ಅಥವಾ ಪ್ರಿಂಟ್ ತೆಗೆದುಕೊಳ್ಳಿ

ಹುದ್ದೆಯ ಅರ್ಹತೆಗಳು:

ವಯಸ್ಸು: ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 15 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 24 ವರ್ಷಕ್ಕಿಂತ ಹೆಚ್ಚು ಮೀರಬಾರದು.

ವಿದ್ಯಾಭ್ಯಾಸ: ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತೀರ್ಣರಾಗಿರಬೇಕು. ಈ ಹುದ್ದೆ ಅರ್ಹನಾಗುವ ಆಕಾಂಕ್ಷಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ 50ರಷ್ಟು ಅಂಕಗಳನ್ನು ಪಡೆದಿರಬೇಕು. ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎನ್‍ಸಿವಿಟಿ / ಎಸ್‍ಸಿವಿಟಿಗೆ ಸಂಬಂಧಿಸಿದ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು.
First published: