Indian Navy SSC Recruitment 2021: ಅರ್ಜಿ ಆಹ್ವಾನಿಸಿದ ಭಾರತೀಯ ನೌಕಾಪಡೆ; ತಿಂಗಳಿಗೆ ಸಂಬಳ 1.10 ಲಕ್ಷ ರೂ

Indian Navy SSC Recruitment 2021: ಇಂದಿನಿಂದ(ಸೆಪ್ಟೆಂಬರ್ 21) ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 5ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 181 ಹುದ್ದೆಗಳು ಖಾಲಿ ಇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  Indian Navy SSC Recruitment 2021: ಭಾರತೀಯ ನೌಕಾಪಡೆ(Indian Navy  ) ಯಲ್ಲಿ ಹುದ್ದೆಗಳು ಖಾಲಿ ಇದ್ದು, ಅವಿವಾಹಿತ ಪುರುಷರು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಜೂನ್​ 2022ರಿಂದ ಕೇರಳದ ಎಜಿಮಾಲಾದಲ್ಲಿ ಆರಂಭವಾಗಲಿರುವ ಇಂಡಿಯನ್ ನಾವಲ್ ಅಕಾಡೆಮಿಯ ಶಾರ್ಟ್​​ ಸರ್ವೀಸ್ ಕಮಿಷನ್(Short Service Commission -SSC)ನ ಕಾರ್ಯನಿರ್ವಾಹಕ ಬ್ರ್ಯಾಂಚ್, ಟೆಕ್ನಿಕಲ್ ಬ್ರ್ಯಾಂಚ್ ಮತ್ತು ಎಜುಕೇಷನ್ ಬ್ರ್ಯಾಂಚ್​​ಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಹೀಗಾಗಿ ಮದುವೆಯಾಗದಿರುವ ಅರ್ಹ ಪುರುಷರು ಹಾಗೂ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್​ ಆದ joinindiannavy.gov.in. ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

  ಇಂದಿನಿಂದ(ಸೆಪ್ಟೆಂಬರ್ 21) ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 5ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 181 ಹುದ್ದೆಗಳು ಖಾಲಿ ಇವೆ. ಭಾರತೀಯ ನೌಕಾಪಡೆ ನೇಮಕಾತಿ- 202ರ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಎಸ್​ಎಸ್​ಬಿ ಸಂದರ್ಶನವನ್ನು ಆಧರಿಸಿರುತ್ತದೆ.

  Indian Navy SSC recruitment 2021: ಖಾಲಿ ಇರುವ ಹುದ್ದೆಗಳ ವಿವರ

  ಕಾರ್ಯನಿರ್ವಾಹಕ ಶಾಖೆ(Executive Branch):

  ಈ ಶಾಖೆಯಲ್ಲಿ 45 ಎಸ್​ಎಸ್​ಎಸ್​ಸಿ(SSC) ಜನರಲ್ ಸರ್ವೀಸ್ (GS/X)/ ಹೈಡ್ರೋ ಕೇಡರ್ ಹುದ್ದೆಗಳು.
  4 ಏರ್​​ ಟ್ರಾಫಿಕ್ ಕಂಟ್ರೋಲರ್ (ATC) ಹುದ್ದೆಗಳು.
  8 ಎಸ್​ಎಸ್​ಸಿ ಅಬ್ಸರ್ವರ್ ಹುದ್ದೆಗಳು.
  15 ಎಸ್​ಎಸ್​​ಸಿ ಪೈಲಟ್​ ಹುದ್ದೆಗಳು
  18 ಎಸ್​ಎಸ್​ಸಿ ಲಾಜಿಸ್ಟಿಕ್ಸ್​ ಹುದ್ದೆಗಳು ಖಾಲಿ ಇವೆ.

  ಇದನ್ನೂ ಓದಿ:IISc Bangalore Recruitment: ಮಾಸಿಕ ವೇತನ 1,66,541 ರೂ; ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

  ತಾಂತ್ರಿಕ ಶಾಖೆ (Technical Branch):

  ನೀವು ಈ ವಿಂಗ್​ನ ತಾಂತ್ರಿಕ ಶಾಖೆಯಲ್ಲಿ ಆಸಕ್ತಿ ಹೊಂದಿದ್ದರೆ,
  ಎಸ್​ಎಸ್​​ಸಿ ಎಂಜಿನಿಯರಿಂಗ್ ಶಾಖೆಯಲ್ಲಿ (General Service-GS) 27 ಹುದ್ದೆಗಳು,
  ಎಸ್​ಎಸ್​ಸಿ ಎಲೆಕ್ಟ್ರಿಕಲ್ ಶಾಖೆಯಲ್ಲಿ (General Service -GS) 34 ಹುದ್ದೆಗಳು.
  ನೌಕಾ ವಾಸ್ತುಶಿಲ್ಪಿ (Naval Architect-NA)ಯಲ್ಲಿ 12 ಹುದ್ದೆಗಳು ಖಾಲಿ ಇವೆ.

  ಶಿಕ್ಷಣ ಶಾಖೆ(Education Branch): ಈ ಮೂರನೇ ಶಾಖೆಯಲ್ಲಿ 18 ಹುದ್ದೆಗಳು ಖಾಲಿ ಇವೆ.

  ಭಾರತೀಯ ನೌಕಾಪಡೆಯ ಎಸ್‌ಎಸ್‌ಸಿ ನೇಮಕಾತಿ 2021: ಅರ್ಹತಾ ಮಾನದಂಡ

  ಕಾರ್ಯ ನಿರ್ವಾಹಕ ಶಾಖೆ(Executive Branch)- ಆಸಕ್ತ ಅಭ್ಯರ್ಥಿಗಳು ಬಿಇ/ಬಿಟೆಕ್(BE/BTech)​​ ಪದವಿ ಪಡೆದಿರಬೇಕು. ಜುಲೈ 2, 1997 ಮತ್ತು ಜನವರಿ 1, 2003ರ ನಡುವೆ ಜನಿಸಿರಬೇಕು. ಉಪ ಶಾಖೆಗಳು ವಿಭಿನ್ನ ವಯಸ್ಸಿನ ಮಾನದಂಡಗಳನ್ನು ಹೊಂದಿರಬಹುದು.

  ತಾಂತ್ರಿಕ ಶಾಖೆ(Technical Branch)- ತಾಂತ್ರಿಕ ಶಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್(BE/BTech)​ ಪದವಿ ಪಡೆದಿರಬೇಕು. ಜುಲೈ 2, 1997 ಮತ್ತು ಜನವರಿ 1, 2003 ರ ನಡುವೆ ಜನಿಸಿರಬೇಕು.

  ಶಿಕ್ಷಣ ಶಾಖೆ(Education Branch)- ಜುಲೈ 2, 1997 ಮತ್ತು ಜುಲೈ 1, 2001ರ ನಡುವೆ ಜನಿಸಿದವರು ಈ ಶಾಖೆಯ ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದಾಗಿದೆ. ಅವರು, ಬಿಎಸ್ಸಿಯಲ್ಲಿ ಗಣಿತ ವಿಷಯವನ್ನು, ಎಂಎಸ್ಸಿಯಲ್ಲಿ ಭೌತಶಾಸ್ತ್ರ ವಿಷಯವನ್ನು ಓದಿರಬೇಕು. ಅಥವಾ ಬಿಇ/ಬಿಟೆಕ್(BE/BTech) ಅಥವಾ ಇತಿಹಾಸ ವಿಷಯದಲ್ಲಿ ಎಂಎ ಮಾಡಿರಬೇಕು.

  ಇದನ್ನೂ ಓದಿ:IBM Careers India: ಐಬಿಎಂ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ; 3.7 ಲಕ್ಷ ಪ್ಯಾಕೇಜ್, ಅರ್ಜಿ ಸಲ್ಲಿಸಲು ಹೀಗೆ ಮಾಡಿ

  Indian Navy SSC recruitment 2021: ಸಂಬಳ ಎಷ್ಟು?

  ಭಾರತೀಯ ನೌಕಾಪಡೆಯಲ್ಲಿ ಈಗ ಅರ್ಜಿ ಆಹ್ವಾನಿಸಿರುವ ಹುದ್ದೆಗಳಿಗೆ ಉತ್ತಮ ಸಂಬಳ ನೀಡಲಾಗುತ್ತದೆ. ಮಾಸಿಕ ವೇತನ 56,100 ರೂ.ನಿಂದ 1,10,700 ರೂಪಾಯಿವರೆಗೆ ನೀಡಲಾಗುತ್ತದೆ.
  Published by:Latha CG
  First published: