Indian Navy Recruitment: ದ್ವಿತೀಯ ಪಿಯುಸಿ ಆಗಿದ್ರೆ ನಿಮಗಾಗಿ ಇಲ್ಲಿದೆ ಅವಕಾಶ - 500 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಹಾಕಿ

Government Job: ಅಧಿಕೃತ ವೆಬ್​ಸೈಟ್​ನಲ್ಲಿ ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ , ಅಗತ್ಯ ದಾಖಲೆಗಳ ಜೊತೆ ಸಲ್ಲಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ನೌಕಾಪಡೆಯಲ್ಲಿ (Indian Navy)  ಕೆಲಸ ಮಾಡುವುದು ನಿಜಕ್ಕೂ ಹೆಮ್ಮೆಯ ವಿಚಾರ, ಹಲವಾರು ಯುವಕ, ಯುವತಿಯರು  ನೌಕಾಪಡೆಯಲ್ಲಿ ಕೆಲಸ ಹುಡುಕುತ್ತಿದ್ದಾರೆ. ಇದೀಗ ಭಾರತೀಯ ನೌಕಾಪಡೆಯು ಆಗಸ್ಟ್ 2022 ರಲ್ಲಿ ಪ್ರಾರಂಭವಾಗುವ ಆರ್ಟಿಫಿಸರ್ ಅಪ್ರೆಂಟಿಸ್ (AA) ಮತ್ತು ಸೀನಿಯರ್ ಸೆಕೆಂಡರಿ ರಿಕ್ಯುಟ್ಸ್ (SSR) ಬ್ಯಾಚ್‌ ಗೆ ಅರ್ಜಿ ಆಹ್ವಾನಿಸಿದೆ. ಇನ್ನೊಂದು ವಿಶೇಷ ಎಂದರೆ ಈ ಕೋರ್ಸ್ ಮುಗಿದ ಬಳಿಕ ನಿಮಗೆ ನೇರವಾಗಿ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶಗಳು ಲಭಿಸಲಿದೆ. ಈ ಆರ್ಟಿಫಿಸರ್ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಹಾಕಲು ಏಪ್ರಿಲ್​ 5 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಭಾರತೀಯ ನೌಕಾಪಡೆಯ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡಬಹುದು.

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ವೇತನ, ಅರ್ಜಿ ಸಲ್ಲಿಸುವ ಕೊನೆಯ ದಿನ, ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ ತಿಳಿದಿರಬೇಕು. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.











































 ಇಲಾಖೆ ಭಾರತೀಯ ನೌಕಾಪಡೆ
 ಹುದ್ದೆ ಆರ್ಟಿಫಿಸರ್ ಅಪ್ರೆಂಟಿಸ್ (AA) ಮತ್ತು ಸೀನಿಯರ್ ಸೆಕೆಂಡರಿ ರಿಕ್ಯುಟ್ಸ್ (SSR)
 ಹುದ್ದೆಗಳ ಸಂಖ್ಯೆ 500
 ವೇತನ ಭಾರತೀಯ ನೌಕಾಪಡೆಯ ನಿಯಮದ ಪ್ರಕಾರ
 ಅರ್ಜಿ ಸಲ್ಲಿಕೆ ಆರಂಭ ದಿನಾಂಕ 29-03-2022
 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

05-04-2022



ಶೈಕ್ಷಣಿಕ ಅರ್ಹತೆ


 ರಸಾಯನಶಾಸ್ತ್ರ/ಜೀವಶಾಸ್ತ್ರ/ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಕನಿಷ್ಠ 60% ಅಂಕ.
 ವಯೋಮಿತಿ ಆಗಸ್ಟ್ 1, 2002 ಕ್ಕಿಂತ ಮೊದಲು ಮತ್ತು 31 ಜುಲೈ 2005 ರ ನಂತರ ಹುಟ್ಟಿರಬಾರದು.
 ವೆಬ್​ಸೈಟ್ ಇಲ್ಲಿ ಕ್ಲಿಕ್ ಮಾಡಿ
 ಅರ್ಜಿ ಸಲ್ಲಿಸುವ ಲಿಂಕ್  ಇಲ್ಲಿ ಕ್ಲಿಕ್ ಮಾಡಿ 

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 500ಕ್ಕೂ ಹೆಚ್ಚು ಆರ್ಟಿಫಿಸರ್ ಅಪ್ರೆಂಟಿಸ್ (AA) ಮತ್ತು ಸೀನಿಯರ್ ಸೆಕೆಂಡರಿ ರಿಕ್ಯುಟ್ಸ್ (SSR) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್ 5ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ರಸಾಯನಶಾಸ್ತ್ರ/ಜೀವಶಾಸ್ತ್ರ/ಕಂಪ್ಯೂಟರ್ ಸೈನ್ಸ್​ನಲ್ಲಿ 12 ನೇ ತರಗತಿ ಪಾಸ್​ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದವರಿಗೆ ಉತ್ತಮ ವೇತನ ನೀಡಲಾಗುತ್ತದೆ.

ಇಲಾಖೆ: ಭಾರತೀಯ ನೌಕಾಪಡೆ

ಹುದ್ದೆ: ಆರ್ಟಿಫಿಸರ್ ಅಪ್ರೆಂಟಿಸ್ (AA) ಮತ್ತು ಸೀನಿಯರ್ ಸೆಕೆಂಡರಿ ರಿಕ್ಯುಟ್ಸ್ (SSR)

ಹುದ್ದೆಗಳ ಸಂಖ್ಯೆ: 500

ವೇತನ: ಭಾರತೀಯ ನೌಕಾಪಡೆಯ ನಿಯಮದ ಪ್ರಕಾರ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29-03-2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2022

ಇದನ್ನೂ ಓದಿ: 59 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - ನೇರ ಸಂದರ್ಶನಕ್ಕೆ ಹಾಜರಾಗಿ

ಶೈಕ್ಷಣಿಕ ಅರ್ಹತೆ

ಆರ್ಟಿಫಿಸರ್ ಅಪ್ರೆಂಟಿಸ್ – ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಗಣಿತ, ಭೌತಶಾಸ್ತ್ರದೊಂದಿಗೆ ರಸಾಯನಶಾಸ್ತ್ರ/ಜೀವಶಾಸ್ತ್ರ/ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಕನಿಷ್ಠ 60% ಅಂಕಗಳೊಂದಿಗೆ 12ನೇ ತರಗತಿ ಪೂರ್ಣಗೊಳಿಸಿರಬೇಕು.

ಸೀನಿಯರ್ ಸೆಕೆಂಡರಿ ರಿಕ್ಯುಟ್ಸ್- ಸೀನಿಯರ್ ಸೆಕೆಂಡರಿ ನೇಮಕಾತಿ ಹುದ್ದೆಗಾಗಿ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಗಣಿತ, ಭೌತಶಾಸ್ತ್ರದೊಂದಿಗೆ ರಸಾಯನಶಾಸ್ತ್ರ / ಜೀವಶಾಸ್ತ್ರ / ಕಂಪ್ಯೂಟರ್ ವಿಜ್ಞಾನದಲ್ಲಿ 12ನೇ ತರಗತಿ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಲಿಂಕ್ : https://www.joinindiannavy.gov.in/en/page/artificer-apprentice.html

ವೆಬ್​ಸೈಟ್​: https://www.joinindiannavy.gov.in/

ವಯೋಮಿತಿ

ಆರ್ಟಿಫಿಸರ್ ಅಪ್ರೆಂಟಿಸ್ ಮತ್ತು ಸೀನಿಯರ್ ಸೆಕೆಂಡರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಗಸ್ಟ್ 1, 2002 ಕ್ಕಿಂತ ಮೊದಲು ಮತ್ತು 31 ಜುಲೈ 2005 ರ ನಂತರ ಹುಟ್ಟಿರಬಾರದು.

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ

ವೈಯಕ್ತಿಕ ಸಂದರ್ಶನ

ದಾಖಲಾತಿ ಪರಿಶೀಲನೆ

ಬೇರೆ ಇತರ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್​ಸೈಟ್​ನಲ್ಲಿ ನೋಂದಾಯಿತ ಇಮೇಲ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ , ಅಗತ್ಯ ದಾಖಲೆಗಳ ಜೊತೆ ಸಲ್ಲಿಸಿ.
Published by:Sandhya M
First published: