Indian Navy Recruitment 2021: ಪಿಯುಸಿ ಪಾಸ್ ಆಗಿದ್ರೆ ಸಾಕು, ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳು ಖಾಲಿ ಇವೆ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ನೌಕಾಪಡೆ

ನೌಕಾಪಡೆ

  • Share this:
Indian Navy Recruitment 2021: ಭಾರತೀಯ ನೌಕಾಪಡೆ(Indian Navy) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 2500  ಆರ್ಟಿಫಿಕರ್ ಅಪ್ರೆಂಟಿಸ್​(Artificer Apprentice- AA), ಹಾಗೂ ಸೀನಿಯರ್ ಸೆಕೆಂಡರಿ ನೇಮಕಾತಿ(Senior Secondary Recruit- SSR) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಉದ್ಯೋಗ ಅಧಿಸೂಚನೆ(Notification)ಯನ್ನು ಬಿಡುಗಡೆ ಮಾಡಿದೆ. ಅರ್ಹ ಆಭ್ಯರ್ಥಿಗಳು ಅಕ್ಟೋಬರ್ 16ರಿಂದ ಅ.25ರವರೆಗೆ ಆನ್​ಲೈನ್(Online)​ ಮೂಲಕ ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಾಕಾಂಕ್ಷಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್​ಸೈಟ್ www.indiannavy.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದ ಉದ್ಯೋಗ(Central Government Jobs) ಅರಸುತ್ತಿರುವವರು ಹಾಗೂ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಲು ಬಯಸುತ್ತಿರುವವರು ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಭಾರತೀಯ ನೌಕಾಪಡೆ
ಹುದ್ದೆಯ ಹೆಸರು ಆರ್ಟಿಫಿಕರ್ ಅಪ್ರೆಂಟಿಸ್​(Artificer Apprentice- AA), ಹಾಗೂ ಸೀನಿಯರ್ ಸೆಕೆಂಡರಿ ನೇಮಕಾತಿ(Senior Secondary Recruit- SSR)
ಒಟ್ಟು ಹುದ್ದೆಗಳು 2500
ವಿದ್ಯಾರ್ಹತೆ 12ನೇ ತರಗತಿ ಉತ್ತೀರ್ಣ
ಕೆಲಸದ ಸ್ಥಳ ಭಾರತದ ಯಾವುದೇ ಜಾಗ
ಸಂಬಳ ಮಾಸಿಕ ₹ 14,600-69,100
ಅರ್ಜಿ ಸಲ್ಲಿಸುವ ಬಗೆ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ 16/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/10/2021

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭ ದಿನಾಂಕ:16/101/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/10/2021

ಇದನ್ನೂ ಓದಿ:Indian Navy Recruitment 2021: ನೌಕಾಪಡೆಯಲ್ಲಿ 300 ಹುದ್ದೆಗಳು ಖಾಲಿ, 10ನೇ ತರಗತಿ ಪಾಸಾಗಿದ್ದರೆ ಸಾಕು, ತಿಂಗಳ ಸಂಬಳ ₹ 69,100

ಹುದ್ದೆಯ ಮಾಹಿತಿ:

ಆರ್ಟಿಫಿಕರ್ ಅಪ್ರೆಂಟಿಸ್​ಗೆ ನಾವಿಕರು(Artificer Apprentice-AA)-500 ಹುದ್ದೆಗಳು
ಸೀನಿಯರ್ ಸೆಕೆಂಡರಿ ನೇಮಕಾತಿ(Senior Secondary Recruits-SSR)-2000 ಹುದ್ದೆಗಳು
ಒಟ್ಟು 2500 ಹುದ್ದೆಗಳುವಿದ್ಯಾರ್ಹತೆ

AA- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶೇ.60 ರಷ್ಟು ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ & ಭೌತಶಾಸ್ತ್ರದ ಜೊತೆಗೆ ಕೆಮಿಸ್ಟ್ರಿ ಬಯಾಲಜಿ/ಕಂಪ್ಯೂಟರ್​ ಸೈನ್ಸ್​- ಈ 2 ವಿಷಯಗಳಲ್ಲಿ ಒಂದನ್ನು ಕಡ್ಡಾಯವಾಗಿ ಓದಿರಬೇಕು.

SSR- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಶೇ.60 ರಷ್ಟು ಅಂಕಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಗಣಿತ & ಭೌತಶಾಸ್ತ್ರದ ಜೊತೆಗೆ ಕೆಮಿಸ್ಟ್ರಿ ಬಯಾಲಜಿ/ಕಂಪ್ಯೂಟರ್​ ಸೈನ್ಸ್​- ಈ 2 ವಿಷಯಗಳಲ್ಲಿ ಒಂದನ್ನು ಕಡ್ಡಾಯವಾಗಿ ಓದಿರಬೇಕು.

ವಯೋಮಿತಿ:

ಅಭ್ಯರ್ಥಿಗಳು 2002 ಫೆಬ್ರವರಿ 1ರಿಂದ 2005 ಜನವರಿ 31ರೊಳಗೆ ಜನಿಸಿರಬೇಕು

ಸಂಬಳ:

AA ಮತ್ತು SSR ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯಲ್ಲಿ ಈ ಪ್ರಮಾಣದ ಸಂಬಳವನ್ನು ಪಡೆಯುತ್ತಾರೆ.

ಪ್ರಾಥಮಿಕ ತರಬೇತಿ ಅವಧಿಯಲ್ಲಿ ಸ್ಟೇಫಂಡ್ ಆಗಿ ತಿಂಗಳಿಗೆ 14,600 ರೂ. ಪಡೆಯುತ್ತಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ, ಡಿಫೆನ್ಸ್​ ಪೇ ಮ್ಯಾಟ್ರಿಕ್ಸ್​ನ 3ನೇ ಲೆವೆಲ್​ಗೆ ಆಯ್ಕೆ ಮಾಡಲಾಗುತ್ತದೆ. ಆಗ ಅವರ ಸಂಬಳ ₹ 21,700-69,100 ರೂ.ವರೆಗೆ ಇರುತ್ತದೆ. ಇದರೊಂದಿಗೆ MSP ₹5,200 ನೀಡಲಾಗುತ್ತದೆ. ಹಾಗೂ DA ಜೊತೆಗೆ 'X' ಗ್ರೂಪ್​ ಪೇ(ಆರ್ಟಿಫಿಕರ್ ಅಪ್ರೆಂಟಿಸ್​​ಗೆ ಮಾತ್ರ) ₹3600 ರೂ. ಅನ್ನು ಪ್ರತೀ ತಿಂಗಳು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

  • ಲಿಖಿತ ಪರೀಕ್ಷೆ

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


 

 

 ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

 
Published by:Latha CG
First published: